No Lockdown: ಲಾಕ್​ಡೌನ್ ಚಿಂತನೆ ಸರ್ಕಾರದ ಮುಂದಿಲ್ಲ: ಆರೋಗ್ಯ ಸಚಿವ ಸುಧಾಕರ ಅಭಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 28, 2021 | 9:59 PM

ರಾಜ್ಯದಲ್ಲಿ ಕಠಿಣ ಲಾಕ್​ಡೌನ್ ಹೇರುವ ಚಿಂತನೆ ಸರ್ಕಾರದ ಎದುರು ಇಲ್ಲ ಎಂದರು

No Lockdown: ಲಾಕ್​ಡೌನ್ ಚಿಂತನೆ ಸರ್ಕಾರದ ಮುಂದಿಲ್ಲ: ಆರೋಗ್ಯ ಸಚಿವ ಸುಧಾಕರ ಅಭಯ
ಡಾ. ಕೆ. ಸುಧಾಕರ್ (ಸಂಗ್ರಹ ಚಿತ್ರ)
Follow us on

ಹಾವೇರಿ: ಕರ್ನಾಟಕದಲ್ಲಿ ಕೊವಿಡ್ 3ನೇ ಅಲೆಯ ಭೀತಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್​ಡೌನ್ ಹೇರಬಹುದು ಎಂಬ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತು ಬುಧವಾರ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ, ರಾಜ್ಯದಲ್ಲಿ ಹೊಸ ರೂಪಾಂತರಿಯ 2 ಪ್ರಕರಣ‌ಗಳು ಪತ್ತೆಯಾಗಿವೆ. ದೇಶದಲ್ಲಿ ಒಟ್ಟು 17 ಪ್ರಕರಣಗಳು ಪತ್ತೆಯಾಗಿವೆ. ರೂಪಾಂತರಿ ವೈರಾಣುಗಳನ್ನು ಎದುರಿಸಲು ರಾಜ್ಯದ ಆರೋಗ್ಯ ವ್ಯವಸ್ಥೆ ಸಜ್ಜಾಗಿದೆ ಎಂದರು.

ರಾಜ್ಯದಲ್ಲಿ ಮೂರನೇ ಅಲೆ ಭೀತಿ ವಿಚಾರದ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಠಿಣ ಲಾಕ್​ಡೌನ್ ಹೇರುವ ಚಿಂತನೆ ಸರ್ಕಾರದ ಎದುರು ಇಲ್ಲ ಎಂದರು. ಕೊರೊನಾ ಎದುರಿಸಲು ಲಸಿಕೆ ಪಡೆಯುವುದೊಂದೇ ಪರಿಹಾರ. ಎರಡು ಲಸಿಕೆ ಪಡೆದಿದ್ದವರಿಗೆ ಹೆಚ್ಚು ಸಮಸ್ಯೆ ಆಗುವುದಿಲ್ಲ. ಡೆಲ್ಟಾ ವೆರಿಯಂಟ್ AY.4.2 ಥರದ 20 ರೂಪಾಂತರಗಳಿವೆ. ಈ ಬಗ್ಗೆ ತಜ್ಞರು ಈಗಾಗಲೇ ವರದಿಯನ್ನೂ ಕೊಟ್ಟಿದ್ದಾರೆ ಎಂದರು.

ರಾಜ್ಯದಲ್ಲಿ ರೂಪಾಂತರಿ ವೈರಾಣು ಪತ್ತೆಯಾಗಿರುವ ಇಬ್ಬರು ರೋಗಿಗಳಿಗೂ ಗಂಭೀರ ಸ್ವರೂಪದ ರೋಗ ಲಕ್ಷಣಗಳು ಇಲ್ಲ. ಕೊರೊನಾ ವೈರಾಣು ರೂಪಾಂತರಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಗಮನಿಸುತ್ತಿದೆ. ಮೂರನೇ ಅಲೆಯ ಆತಂಕ ಇನ್ನೂ ನಿವಾರಣೆಯಾಗಿಲ್ಲ. ಸಾರ್ವಜನಿಕರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು. ಸರ್ಕಾರದೊಂದಿಗೆ ಸಹಕರಿಸಬೇಕು. ಸುಳ್ಳು ಮಾಹಿತಿ ಹರಡುವವರ ವಿರುದ್ಧ ಸಾಕ್ಷಿ ಶಿಸ್ತುಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ನೀವು ನೆಮ್ಮದಿ ಆಗಿರಿ ಸರ್ಕಾರ ಕೂಡಾ ಸಮಾಧಾನದಿಂದ ಇರುತ್ತೆ. ಜನರು ಆರೋಗ್ಯವಾಗಿದ್ದಾರೆ ಎಂಬ ಸಮಾಧಾನ ನಮಗೂ ಇರುತ್ತೆ. ಆದರೆ ರಾಜ್ಯದಲ್ಲಿ ಭಯ ಹಿಡಿಸುವ ಕೆಲಸ ನಡೆಯುತ್ತಿದೆ. ಆರೋಗ್ಯ ವಿಚಾರದಲ್ಲಿ ಜನರಿಗೆ ವಿಶ್ವಾಸ ಮೂಡಿಸಬೇಕು. ಆತಂಕ ಸೃಷ್ಟಿಸುವ ಕೆಲಸ ಮಾಡಬಾರದು ಎಂದು ಅವರು ಜನರಿಗೆ ಮನವಿ ಮಾಡಿದರು.

ಇದನ್ನೂ ಓದಿ: ಎವೈ 4.2 ರೂಪಾಂತರಿ ವೈರಸ್​ನಿಂದ ಕರ್ನಾಟಕದಲ್ಲಿ ಮತ್ತೆ ಲಾಕ್​ಡೌನ್ ಆಗುತ್ತಾ?; ಉತ್ತರ ಇಲ್ಲಿದೆ
ಇದನ್ನೂ ಓದಿ: ಸುಧಾಕರ್​ಗೆ ಅಧಿಕಾರದ ಮದ! ದುರಹಂಕಾರದಲ್ಲಿ ಮಾತನಾಡುತ್ತಿದ್ದಾರೆ- ಸಿದ್ದರಾಮಯ್ಯ ತಿರುಗೇಟು

Published On - 9:57 pm, Thu, 28 October 21