ಸುಧಾಕರ್ಗೆ ಅಧಿಕಾರದ ಮದ! ದುರಹಂಕಾರದಲ್ಲಿ ಮಾತನಾಡುತ್ತಿದ್ದಾರೆ- ಸಿದ್ದರಾಮಯ್ಯ ತಿರುಗೇಟು
ನಳಿನ್ ಕುಮಾರ್ ಕಟೀಲು ಅಪ್ರಬುದ್ಧ ರಾಜಕಾರಣ. ಕಟೀಲು ಒಬ್ಬ ಜೋಕರ್, ಅವನ ತಲೆ ಕೆಟ್ಟಿದೆ. ಹತಾಶರಾದಾಗ ಮಾತ್ರ ಅವಾಚ್ಯ ಶಬ್ದಗಳನ್ನ ಬಳಸುತ್ತಾರೆ. ನಾನು ಸಿ.ಎಂ.ಇಬ್ರಾಹಿಂ ಬಗ್ಗೆ ಏನೂ ಮಾತನಾಡಲ್ಲ.
ಬೆಂಗಳೂರು: ಸಚಿವ ಡಾ. ಕೆ ಸುಧಾಕರ್ (Sudhakar) ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ. ಸುಧಾಕರ್ಗೆ ಅಧಿಕಾರದ ಮದ. ಹಾಗಾಗಿ ದುರಹಂಕಾರದಲ್ಲಿ ಮಾತನಾಡುತ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಅಧಿಕಾರವನ್ನು ಸುಧಾಕರ್ ಶಾಶ್ವತ ಅಂದುಕೊಂಡಿದ್ದಾರೆ. 2023ಕ್ಕೆ ಅವರೆಲ್ಲರೂ ಮನೆಗೆ ಹೋಗುತ್ತಾರೆ. ಆಗ ಯಾರು ಜೈಲಿಗೆ ಹೋಗುತ್ತಾರೆಂದು ಗೊತ್ತಾಗುತ್ತದೆ ಅಂತ ರಮೇಶ್ಕುಮಾರ್ರನ್ನು ಜೈಲಿಗೆ ಕಳಿಸುತ್ತೇನೆಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇನ್ನು ನಳಿನ್ ಕುಮಾರ್ ಕಟೀಲು ಅಪ್ರಬುದ್ಧ ರಾಜಕಾರಣ. ಕಟೀಲು ಒಬ್ಬ ಜೋಕರ್, ಅವನ ತಲೆ ಕೆಟ್ಟಿದೆ. ಹತಾಶರಾದಾಗ ಮಾತ್ರ ಅವಾಚ್ಯ ಶಬ್ದಗಳನ್ನ ಬಳಸುತ್ತಾರೆ. ನಾನು ಸಿ.ಎಂ.ಇಬ್ರಾಹಿಂ ಬಗ್ಗೆ ಏನೂ ಮಾತನಾಡಲ್ಲ ಅಂತ ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಬಿಜೆಪಿ, ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಜೆಡಿಎಸ್ನವರಿಗೆ ಯಾವುದೇ ಗಟ್ಟಿ ಸಿದ್ಧಾಂತಗಳು ಇಲ್ಲ. ಅವರು ಏನೇ ಓಲೈಕೆ ಮಾಡಿದರು ಅದು ನಡೆಯುವುದಿಲ್ಲ. ಅಲ್ಪಸಂಖ್ಯಾತರು ಬುದ್ಧಿವಂತರಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ಬರುವುದಕ್ಕೆ ಬಿಡುವುದಿಲ್ಲ. ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದವರು ಜ್ಯಾತ್ಯತೀತರಾ? ಜೆಡಿಎಸ್ ಜ್ಯಾತ್ಯತೀತ ಪಕ್ಷವಲ್ಲ. ಜೆಡಿಎಸ್ ವಿರುದ್ಧ ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್‌ಎಸ್ಎಸ್, ಕೇಸರಿ ಕಂಡರೆ ನನಗೆ ಯಾವುದೇ ಭಯವಿಲ್ಲ. ಆದರೆ ಇವರು ಸಮಾಜ ಒಡೆಯುತ್ತಾರೆಂಬ ಭಯವಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಆರ್ಎಸ್ಎಸ್ನ ಬೈಯ್ಯುವುದಿಲ್ಲ. ಅವರು ಮಾಡುವ ಕೆಲಸಗಳಿಗೆ ನಾನು ಬೈಯ್ಯುತ್ತೇನೆ. ವಿಜಯಪುರದಲ್ಲಿ ಪೊಲೀಸರಿಗೆ ಕೇಸರಿ ಶಾಲು ಹಾಕಿದ್ದಾರೆ. ಏಕೆ ಅವರಿಗೆ ಸಮವಸ್ತ್ರವನ್ನು ಕೊಟ್ಟಿಲ್ವಾ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ, ಹೀಗಾಗಿ ನಾನು ಆರ್‌ಎಸ್ಎಸ್ ವಿರುದ್ಧ ಮಾತಾಡ್ತೇನೆ ಎಂದಿದ್ದಾರೆ.
ಕರ್ನಾಟಕದ ಬಿಜೆಪಿ ನಾಯಕರಿಗೆ ಧಮ್ ಇಲ್ಲ. ನಮ್ಮ ಪಾಲು ಕೇಳಲು ಭಿಕ್ಷುಕರಂತೆ ಹೋಗಿ ಕೇಳಬೇಕಾ. ರಾಜ್ಯ ಬಿಜೆಪಿ ನಾಯಕರಿಗೆ ಧಮ್ ಇದ್ದಿದ್ರೆ ಕೇಳುತ್ತಿದ್ದರು. ರಾಜ್ಯದ ಪಾಲಿನ ಬಗ್ಗೆ ಪ್ರಧಾನಿ ಮೋದಿ ಬಳಿ ಕೇಳುತ್ತಿದ್ದರು ಅಂತ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಇನ್ನು ಇದೇ ವೇಳೇ ಬೈಎಲೆಕ್ಷನ್‌ನಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ. ಒಂದು ವೋಟ್‌ಗೆ 2 ಸಾವಿರ ಕೊಡುತ್ತಿರುವ ಮಾಹಿತಿ ಇದೆ. ಆ ಕ್ಷೇತ್ರಗಳ ಜನರು ಈ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಅಂತ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇದನ್ನೂ ಓದಿ
Amazon Prime: ಪ್ರೈಮ್ ಸದಸ್ಯರಿಗೆ ಬಿಗ್ ಶಾಕ್ ನೀಡಿದ ಅಮೆಜಾನ್: ವಾರ್ಷಿಕ ಯೋಜನೆಯಲ್ಲಿ ದೊಡ್ಡ ಬದಲಾವಣೆ
Petrol Diesel Price: ತೈಲ ಬೆಲೆ ಏರಿಕೆ ಮುಂದುವರಿಕೆ; ಬೆಂಗಳೂರಲ್ಲಿ 110 ರೂ. ದಾಟಿದ ಪೆಟ್ರೋಲ್
Published On - 12:08 pm, Thu, 21 October 21