Petrol Diesel Price: ತೈಲ ಬೆಲೆ ಏರಿಕೆ ಮುಂದುವರಿಕೆ; ಬೆಂಗಳೂರಲ್ಲಿ 110 ರೂ. ದಾಟಿದ ಪೆಟ್ರೋಲ್
Today's Petrol Diesel Rate - 21-10-2021: ಮತ್ತೊಮ್ಮೆ ತೈಲ ಬೆಲೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 110 ರೂಪಾಯಿ ದಾಟಿದೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಏರಿಕೆ ಆಗಿದ್ದರಿಂದ ಅಕ್ಟೋಬರ್ 21ನೇ ತಾರೀಕಿನ ಗುರುವಾರ ಪೆಟ್ರೋಲ್- ಡೀಸೆಲ್ ಬೆಲೆ ಮತ್ತೊಮ್ಮೆ ದಾಖಲೆ ಎತ್ತರಕ್ಕೆ ಏರಿತು. ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವಯ ಲೀಟರ್ಗೆ 35 ಪೈಸೆ ಹೆಚ್ಚಳವಾಗಿ, ಕ್ರಮವಾಗಿ 106.54 ರೂಪಾಯಿ ಮತ್ತು 95.27 ರೂಪಾಯಿ ಆಗಿದೆ. ಇನ್ನು ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 112.44 ರೂಪಾಯಿ ಇದ್ದರೆ, ಡೀಸೆಲ್ ಲೀಟರ್ಗೆ 103.26 ರೂಪಾಯಿ ಇದೆ. ಚೆನ್ನೈನಲ್ಲಿ ಪೆಟ್ರೋಲ್ ಲೀಟರ್ 103.26 ರೂಪಾಯಿಗೆ ಮಾರಾಟ ಆಗುತ್ತಿದ್ದರೆ, ಡೀಸೆಲ್ 99.59 ರೂಪಾಯಿ ಇದೆ. ಹೈದರಾಬಾದ್ನಲ್ಲಿ ಪೆಟ್ರೋಲ್ 110.82, ಡೀಸೆಲ್ 103.94 ಇದೆ.
ಕರ್ನಾಟಕದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್ಗೆ ಇಂತಿದೆ: ಬೆಂಗಳೂರು- 110.25 ರೂ. ಮೈಸೂರು- 109.75 ಮಂಗಳೂರು- 109.40 ಬೆಳಗಾವಿ- 110.82 ಬಳ್ಳಾರಿ- 111.91 ವಿಜಯಪುರ- 110.61 ಚಾಮರಾಜನಗರ- 110.35 ದಕ್ಷಿಣ ಕನ್ನಡ- 109.43 ಚಿತ್ರದುರ್ಗ- 112.23 ದಾವಣಗೆರೆ- 111.59 ಧಾರವಾಡ- 110.12 ಕಲಬುರಗಿ- 110.17 ಹಾಸನ- 110.25 ಕೋಲಾರ- 110.39 ಮಂಡ್ಯ- 109.86 ಶಿವಮೊಗ್ಗ- 111.73 ಉತ್ತರ ಕನ್ನಡ- 112.48 ಉಡುಪಿ- 109.51
ಕರ್ನಾಟಕದ ಪ್ರಮುಖ ನಗರಗಳಲ್ಲಿ ಡೀಸೆಲ್ ದರ ಲೀಟರ್ಗೆ ಇಂತಿದೆ: ಬೆಂಗಳೂರು- 101.12 ರೂ. ಮೈಸೂರು- 100.66 ಮಂಗಳೂರು- 99.56 ಬೆಳಗಾವಿ- 101.66 ಬಳ್ಳಾರಿ- 102.65 ವಿಜಯಪುರ- 101.47 ಚಾಮರಾಜನಗರ- 101.20 ದಕ್ಷಿಣ ಕನ್ನಡ- 100.33 ಚಿತ್ರದುರ್ಗ- 102.80 ದಾವಣಗೆರೆ- 102.36 ಧಾರವಾಡ- 101.02 ಕಲಬುರಗಿ- 101.06 ಹಾಸನ- 101 ಕೋಲಾರ- 101.24 ಮಂಡ್ಯ- 100.76 ಶಿವಮೊಗ್ಗ- 102.39 ಉತ್ತರ ಕನ್ನಡ- 103.07 ಉಡುಪಿ- 100.40
ಇದನ್ನೂ ಓದಿ: ಕೊರೊನಾ ನಿಯಂತ್ರಿಸಲು ಸರ್ಕಾರಕ್ಕೆ ಹಣ ಬೇಕು, ಅದಕ್ಕೇ ಪೆಟ್ರೋಲ್ ಬೆಲೆ ಹೆಚ್ಚಳವಾಗ್ತಿದೆ- ಉಮೇಶ್ ಕತ್ತಿ ಹೊಸ ವ್ಯಾಖ್ಯಾನ
Published On - 11:50 am, Thu, 21 October 21