AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“86ನೇ‌ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳಾಗಲು ಆ್ಯಪ್ ಮೂಲಕ ನೊಂದಣಿ ಮಾಡ್ಕೊಳ್ಳಿ”

ಜನೆವರಿ 6,7,8 ರಂದು ನಡೆಯುವ 86ನೇ‌ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಏಲಕ್ಕಿ ನಗರಿ ಹಾವೇರಿ ಸಜ್ಜಾಗುತ್ತಿದೆ.

86ನೇ‌ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳಾಗಲು ಆ್ಯಪ್ ಮೂಲಕ ನೊಂದಣಿ ಮಾಡ್ಕೊಳ್ಳಿ
ನಾಡೋಜ ಡಾ.ಮಹೇಶ ಜೋಶಿ
TV9 Web
| Edited By: |

Updated on:Dec 06, 2022 | 5:33 PM

Share

ಹಾವೇರಿ: ಜನೆವರಿ ದಿನಾಂಕ 6,7,8 ರಂದು ನಡೆಯುವ 86ನೇ‌ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (86th Akhil bharat kannada sahitya sammelana) ಏಲಕ್ಕಿ ನಗರಿ ಹಾವೇರಿ ಸಜ್ಜಾಗುತ್ತಿದೆ. ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸುವವರು ಕರ್ನಾಟಕ ಸಾಹಿತ್ಯ ಪರಿಷತ್​​ (ಕಸಾಪ) ಸದಸ್ಯತ್ವ ಹೊಂದಿರವುದು ಕಡ್ಡಾಯವಾಗಿದೆ. ಈ ಸಂಬಂಧ ನೊಂದಣಿಗಾಗಿ ಡಿ.1 ರಂದು ಆ್ಯಪ್​ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್​ ಮೂಲಕ ಡಿಸೆಂಬರ್ 01 ರಿಂದ 18 ರವರಗೆ 20 ಸಾವಿರ ಜನರು ಮಾತ್ರ ನೊಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ (Mahesh Joshi) ತಿಳಿಸಿದ್ದಾರೆ.

ಹಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಮ್ಮೇಳನದ ಅಂಗವಾಗಿ ಡಿಸೆಂಬರ್ 17, 18 ರಂದು ಧ್ವನಿ ಪರೀಕ್ಷೆ, ನೃತ್ಯ ಪರೀಕ್ಷೆ ಹಾವೇರಿಯಲ್ಲಿ ನಡೆಯಲಿದೆ. ಕನ್ನಡದ ಸಂಸ್ಕೃತಿ, ಭಾಷೆ, ಕಲೆ ಜನಪದ ವಿಷಯಗಳ ಮೇಲೆ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ.

ಆ್ಯಪ್ ಮೂಲಕ ನೊಂದಣಿ ಮಾಡಿಕೊಳ್ಳಲು ಇಲ್ಲಿ ಲಿಂಕ್​ ಕ್ಲಿಕ್ ಮಾಡಿ

ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಹಿತಿ ತಿಳಿಯಲು ಇಲ್ಲಿ ಲಿಂಕ್​ ಕ್ಲಿಕ್ ಮಾಡಿ

ಆ್ಯಪ್ ಬಳಕೆ ಮಾಡಲು ಬರದೆ ಇದ್ದವರಿಗೆ ಹಾಗು ಸಮ್ಮೇಳನದ ಬಗ್ಗೆ ಮಾಹಿತಿ ನೀಡಲು 10 ಸಹಾಯವಾಣಿ ಆರಂಭಿಸಲಾಗುವುದು. ಸರಕಾರ ಕಳೆದ ಅಧಿವೇಶನದಲ್ಲಿ ಸಮಗ್ರ ಭಾಷಾ ಕನ್ನಡ ಅಭಿವೃದ್ಧಿ ವಿಧೇಯಕ ತಂದಿದ್ದು, ಈ ವಿಧೇಯಕ ಬೇಳಗಾವಿ ಅಧಿವೇಶನದಲ್ಲಿ ಕಾನೂನು ಆಗಲಿದೆ. ಸಾಹಿತ್ಯ ಪರಿಷತ್ತು ಸ್ವಾಯತ್ತತೆ ಇರುವ ಸಂಸ್ಥೆ, ಸಮ್ಮೇಳನದ ಕೆಲಸಗಳನ್ನು ಸಮರ್ಪಕವಾಗಿ ಮಾಡುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯ ಅಜ್ಜಯನ ಗದ್ದುಗೆ ಜಾಗದಲ್ಲಿ ನಡೆಸಲು ತೀರ್ಮಾನ

ಹಾವೇರಿ ನಗರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ವಿಚಾರವಾಗಿ ಜಿಲ್ಲಾಡಳಿತ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಸಮ್ಮೇಳನದ ಆಹ್ವಾನ ಪತ್ರಿಕೆ ಡಿಸೆಂಬರ್ 10 ರಂದು ಬಿಡುಗಡೆಯಾಗಲಿದೆ. ಕೊರೋನಾ ನಂತರ, ಎರಡು ವರ್ಷಗಳ ನಂತರ ಸಮ್ಮೇಳನ ನಡೆಯುತ್ತಿರುವುದರಿಂದ ಸಮ್ಮಳನಕ್ಕೆ ನೀರಿಕ್ಷೆಗಿಂತ ಹೆಚ್ಚು ಜನ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ವರದಿ: ರವಿ ಹೂಗಾರ ಹಾವೇರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Tue, 6 December 22