ಹಾವೇರಿ ನಗರದಲ್ಲಿ (Haveri) ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ (traffic problems) ಹೆಚ್ಚುತ್ತಿದೆ. ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಬಹುತೇಕ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿ ರಸ್ತೆ ಬದಿ ಮೊಬೈಲ್ ಕ್ಯಾಂಟೀನ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದು, ಬೆಳಗ್ಗೆಯಿಂದ ತಡ ರಾತ್ರಿಯವರೆಗೆ ಕಾರ್ಯನಿರ್ವಹಿಸುತ್ತಿವೆ. ಸಂಚಾರಿ ಕ್ಯಾಂಟೀನ್‌ಗಳು (mobile canteens) ಹೆಚ್ಚಿನ ರಸ್ತೆಗಳಾದ ಎನ್‌ಎಚ್-48, ಮುನ್ಸಿಪಲ್ ಹೈಸ್ಕೂಲ್ ರಸ್ತೆ, ಡಿಸಿ ಕಚೇರಿ ರಸ್ತೆ, ಗುತ್ತಲ್ ರಸ್ತೆ ಮತ್ತು ಇತರ ಒಳ ರಸ್ತೆಗಳನ್ನು ಆಕ್ರಮಿಸಿಕೊಂಡಿವೆ. ಈ ಕ್ಯಾಂಟೀನ್‌ಗಳನ್ನು ಪಾರ್ಕಿಂಗ್‌ಗೆ ಮೀಸಲಾದ, ಜನ ಓಡಾಟದ ಜಾಗದಲ್ಲಿ ಸ್ಥಾಪಿಸಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿದೆ (City Municipal Council, Haveri).
ಇದಲ್ಲದೆ, ಈ ರಸ್ತೆ ಬದಿಯ ಈ ತಳ್ಳುಗಾಡಿ ಕ್ಯಾಂಟೀನ್‌ಗಳು ತ್ಯಾಜ್ಯವನ್ನು ರಸ್ತೆಯ ಮೇಲೆಯೇ ಎಸೆದು ಹೋಗುತ್ತವೆ. ತಳ್ಳುಗಾಡಿ ಕ್ಯಾಂಟೀನ್ ಹೊರಸೂಸುವ ಅಡುಗೆ ಹೊಗೆ ವಾಯು ಮಾಲಿನ್ಯ ಹೆಚ್ಚಿಸುತ್ತಿದೆ. ಇನ್ನು ತಳ್ಳುಗಾಡಿ ಕ್ಯಾಂಟೀನ್ ಅವರು ಆಹಾರ ಬೇಯಿಸುವಾಗ ಮತ್ತು ಪಾತ್ರೆಗಳ ತೊಳೆಯುವಾಗ, ವ್ಯಾಪಾರ ಮಾಡುವಾಗ ನಿರಂತರ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.
ಅಕ್ಕಪಕ್ಕದ ಅಂಗಡಿಯವರು, ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆಯೆಂದರೆ ಅವರ ವಾಹನಗಳ ನಿಲುಗಡೆಗೆ ಸ್ಥಳಳಳಾವಕಾಆಶಶ ಸಸಿಗದೆ ಪರದಾಡುತ್ತಿದ್ದಾರೆ. ಆದರೆ ತಳ್ಳುಗಾಡಿ ಕ್ಯಾಂಟೀನ್ಗಳ ಅಕ್ರಮಣದಿಂದಾಗಿ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ಮುಖ್ಯ ರಸ್ತೆಗಳಲ್ಲಿ ಅಪಾಯಕಾರಿಯಾಗಿ ನಿಲುಗಡೆ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಜೊತೆಗೆ ಟ್ರಾಫಿಕ್ ನಿಯಂತ್ರಣಕ್ಕಾಗಿ ಮತ್ತು ಇನ್ನಿತರೆ ಅಂಗಡಿಗಳ ಮುಂಭಾಗದ ಜಾಗವನ್ನು ನಿರ್ಬಂಧಿಸುವುದರಿಂದ ವ್ಯಾಪಾರಿಗಳು ಇಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು timesofindia.indiatimes.com ವರದಿ ಮಾಡಿದೆ.
ಇದನ್ನೂ ಓದಿ: ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಫುಟ್‌ಪಾತ್ ವ್ಯಾಪಾರ ಅಂಗಡಿಮುಂಗಟ್ಟು ತೆರವುಗೊಳಿಸಲಿರುವ ಬಿಬಿಎಂಪಿ, ಏನಿದೆ ಸದ್ಯದ ಚಿತ್ರಣ
ಮುನ್ಸಿಪಲ್ ಹೈಸ್ಕೂಲ್ ರಸ್ತೆಯಲ್ಲಿ ಮಾಂಸಾಹಾರಿ ಕ್ಯಾಂಟೀನ್‌ಗಳು ಅವ್ಯವಸ್ಥೆಯ ಆಗರವಾಗಿವೆ ಎಂದು ಇಲ್ಲಿನ ನಿವಾಸಿ ಅಶೋಕ್ ಬೋಗಾರ್ timesofindia.indiatimes.com ತಿಳಿಸಿದ್ದಾರೆ. ಸ್ವಚ್ಛತೆ ಎಂಬುದು ಈ ತಳ್ಳುಗಾಡಿ ಕ್ಯಾಂಟೀನ್ಗಳ ಆದ್ಯತೆಗಳಲ್ಲಿ ಕನಿಷ್ಠವಾಗಿದೆ. “ಅಳಿದುಳಿದ ಮಾಂಸಾಹಾರ ಮತ್ತು ತ್ಯಾಜ್ಯವನ್ನು ಸಾಮಾನ್ಯವಾಗಿ ರಸ್ತೆಗಳಲ್ಲಿ ಎಸೆದಿರುತ್ತಾರೆ. ಅದಕ್ಕಾಗಿ ಬೀದಿ ನಾಯಿಗಳು ಜಗಳವಾಡುತ್ತವೆ. ಅದು ಅಹಿತಕರ ವಾತಾವರಣವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮತ್ತು ನಾಯಿಗಳ ನಿರಂತರ ಬೊಗಳುವಿಕೆ ಅಸಹನೀಯವಾಗಿರುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ನಮ್ಮ ಗ್ರಾಹಕರು ಮುಖ್ಯ ರಸ್ತೆಯಿಂದ ನಮ್ಮ ಅಂಗಡಿಗಳ ಕಡಡೆಗೆ ಬರಲು ಸಾಧ್ಯವಾಗದ ಕಾರಣ ರಸ್ತೆ ಬದಿಯ ಕ್ಯಾಂಟೀನ್‌ಗಳು ವಾಆಸ್ತವದ ನೆಲೆಗಟ್ಟಿನಲ್ಲಿ ನಮ್ಮ ವ್ಯಾಪಾರಕ್ಕೆ ಬಹುದೊಡ್ಡ ಅಡಚಣೆಯಾಗಿದೆ. ಈ ಮೊಬೈಲ್ ಕ್ಯಾಂಟೀನ್‌ಗಳಿಂದ ಗ್ರಾಹಕರು ನಮ್ಮ ಅಂಗಡಿಗಳ ಕಡೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹಳೆಯ ರಾಷ್ಟ್ರೀಯ ಹೆದ್ದಾರಿ-48 ರ ಬಸ್ ಟರ್ಮಿನಲ್ ಬಳಿಯ ಅಂಗಡಿಯವರೊಬ್ಬರು ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ.
ಹಾವೇರಿ ನಗರ ವಾಸಿಗಳಿಗೆ ಕುಡಿಯುವ ನೀರಿನ ಜಲಮೂಲ ಅಕ್ಕಮಹಾದೇವಿ ಕೊಳವಾಗಿದೆ. ಇಲ್ಲಿ ಸಣ್ಣ ಕ್ಯಾಂಟೀನ್‌ಗಳಿದ್ದು, ಅವುಗಳ ಆವರಣದಲ್ಲಿ ಆಹಾರ ಸೇವೆ ಒದಗಿಸಲು, ಆಹಾರ ಸೇವಿಸಲು ಸಾಕಷ್ಟು ಸ್ಥಳಾವಕಾಶವಿಲ್ಲ. ಜನರು ತಮ್ಮ ವಾಹನಗಳನ್ನು ರಸ್ತೆಗಳಲ್ಲಿಯೇ ನಿಲ್ಲಿಸಿ ಆಹಾರ ಸೇವಿಸುತ್ತಾರೆ. ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರ ಸಂಚಾರಕ್ಕೆ ತೊಡಕುಂಟಾಗುತ್ತದೆ. ಕೆರೆಗೆ ತ್ಯಾಜ್ಯ ಸುರಿಯುವ ಮೂಲಕವೂ ಸಹ ಕೆರೆಯನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದು ಹಾವೇರಿಯ ಜೆಡಿಎಸ್ ಮುಖಂಡ ಮಾಂತೇಶ ಬೇವಿನಹಿಂಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ