ಹಾವೇರಿ, ನ.6: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ (Union Bank Of India) ಕುರಂಬಗೊಂಡ ಶಾಖೆ ಸಿಬ್ಬಂದಿ ಸಾವಿರಾರು ರೈತರು ಇಟ್ಟಿದ್ದ ಎಫ್ಡಿ ಹಣ ನೀಡದೆ ವಂಚಿಸಿರುವ ಆರೋಪ ಕೇಳಿಬಂದಿದೆ. ಗ್ರಾಹಕರ ಪಾಸ್ಬುಕ್ನಲ್ಲಿ ಲಕ್ಷಾಂತರ ರೂಪಾಯಿ ಜಮೆ ಇದೆ, ಬ್ಯಾಂಕ್ ಸಿಸ್ಟಮ್ನಲ್ಲಿ ಮಾತ್ರ ಹಣ ಇಲ್ಲವೆಂದು ತೋರಿಸುತ್ತಿದೆ. ನಾವು ಹಣ ಪಡೆದಿಲ್ಲ, ಹಣ ಎಲ್ಲಿ ಹೋಯಿತು ಎಂದು ಗ್ರಾಹಕರ ಪ್ರಶ್ನಿಸುತ್ತಿದ್ದಾರೆ.
ಹಾವೇರಿ ತಾಲೂಕಿನ ಕುರಂಬಗೊಂಡ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಕುರುಬಗೊಂಡ, ಚಿಕ್ಕಲಿಂಗದಹಳ್ಳಿ, ಕನಕಾಪುರ ಸುತ್ತಮುತ್ತಲಿನ ಸಾವಿರಾರು ರೈತರು ಲಕ್ಷಾಂತರ ರೂಪಾಯಿ ಎಫ್ಡಿ ಇಟ್ಟಿದ್ದರು. ಇದನ್ನು ಕೇಳಲು ಹೋದ ಗ್ರಾಹಕರಿಗೆ ಹಣ ಇಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಹೇಳುತ್ತಿದ್ದಾರೆ.
ಇದನ್ನೂ ಓದಿ: ಸ್ಟಾರ್ಟ್ಅಪ್ ಕಂಪನಿ ಮಾಲೀಕನಿಂದ ಮಹಿಳಾ ಉದ್ಯಮಿಗೆ ವಂಚನೆ, ದೂರು ದಾಖಲು
ಗ್ರಾಹಕರ ಪಾಸ್ಬುಕ್ನಲ್ಲಿ ಲಕ್ಷಾಂತರ ರೂಪಾಯಿ ಜಮೆ ಇದೆ. ಬ್ಯಾಂಕ್ ಸಿಸ್ಟಮ್ನಲ್ಲಿ ಮಾತ್ರ ಹಣ ಇಲ್ಲವೆಂದು ತೋರಿಸುತ್ತಿದೆ. ನಾವು ಹಣ ಪಡೆದಿಲ್ಲ, ಹಣ ಎಲ್ಲಿ ಹೋಯಿತು ಎಂದು ಗ್ರಾಹಕರ ಪ್ರಶ್ನಿಸುತ್ತಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಹಣ ನೀಡುವುದಾಗಿ ಬ್ಯಾಂಕ್ ಸಿಬ್ಬಂದಿ ಹೇಳುತ್ತಿದ್ದಾರೆ. ಇದುವರೆಗೂ ಕೇವಲ ಕಾರಣಗಳನ್ನೆ ಹೇಳುತ್ತಿದ್ದಾರೆ. ಆದರೆ ಹಣ ನೀಡಿಲ್ಲವೆಂದು ಬ್ಯಾಂಕ್ ಸಿಬ್ಬಂದಿ ವಿರುದ್ಧ ರೈತರು ಆರೋಪ ಮಾಡಿದ್ದಾರೆ. ಈ ಬಗ್ಗೆ ವಂಚನೆಗೆ ಒಳಗಾದ ಗ್ರಾಹಕರು ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:33 pm, Mon, 6 November 23