ಆರ್ಗ್ಯಾನಿಕ್ ಚೀಲದ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಎನ್ವಿ ಗ್ರೀನ್ ಬಯೋಟೆಕ್ ಮಾಲೀಕನ ವಿರುದ್ಧ ಎಫ್ಐಆರ್
ಸದ್ಯ ಅಶ್ವತ್ಥ್ ಹೆಗ್ಡೆ ವಿರುದ್ಧ ಐಪಿಸಿ ಸೆಕ್ಷನ್ 406, 420ರಡಿ ಪ್ರಕರಣ ದಾಖಲಿಸಲಾಗಿದೆ. ಚೀಲದ ಹೆಸರಲ್ಲಿ ಕೋಟಿಗಟ್ಟಲೇ ಫಂಡ್ ಕಲೆಕ್ಷನ್ ಆರೋಪ ಹಿನ್ನೆಲೆಯಲ್ಲಿ ನಾಗ್ಪುರ, ಛತ್ತೀಸ್ಗಢ, ಹೈದರಾಬಾದ್ನಲ್ಲೂ ಅಶ್ವತ್ಥ್ ವಿರುದ್ಧ ಕೇಸ್ ದಾಖಲಾಗಿದೆ.
ಬೆಂಗಳೂರು, ನವೆಂಬರ್ 2: ಆರ್ಗ್ಯಾನಿಕ್ ಚೀಲದ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಮಾಡಿದ ಆರೋಪದ ಮೇಲೆ ಎನ್ವಿ ಗ್ರೀನ್ ಬಯೋಟೆಕ್ (EnviGreen Biotech) ಮಾಲೀಕ ಅಶ್ವತ್ಥ್ ಹೆಗ್ಡೆ ಎಂಬವರ ವಿರುದ್ಧ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಶ್ವತ್ಥ್ ಹೆಗ್ಡೆ (Ashwath Hegde) ವಿರುದ್ಧ ದೂರು ನೀಡಿದ್ದ ಉದ್ಯಮಿ ನೀಲಿಮಾ ಎಂಬವರು ದೂರು ನೀಡಿದ್ದರು.
ಪ್ಲಾಸ್ಟಿಕ್ ಬದಲು ಆರ್ಗ್ಯಾನಿಕ್ ಬ್ಯಾಗ್ ಕಂಡು ಹಿಡಿದಿದ್ದಾಗಿ ನಂಬಿಸಿದ್ದ ಅಶ್ವತ್ಥ್ ಹೆಗ್ಡೆ, ಬಿಸಿ ನೀರಿನಲ್ಲಿ ಕರಗುವ ಕೈಚೀಲ ಮಾಡುವುದಾಗಿ ಭರವಸೆ ನೀಡಿದ್ದರು. ಯಂತ್ರ ಹಾಗೂ ಕಾರ್ಮಿಕರನ್ನು ಕೊಡುವುದಾಗಿ ಹೇಳಿದ್ದರು. 1.26 ಕೋಟಿ ರೂಪಾಯಿ ಮೌಲ್ಯದ ಯಂತ್ರ ಕೊಡುವುದಾಗಿ ಹೇಳಿದ್ದರು ಎಂಬುದಾಗಿ ನೀಲಿಮಾ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕಾಗಿ ಅಶ್ವತ್ಥ್ ಹೆಗ್ಡೆಗೆ 74 ಲಕ್ಷ ರೂಪಾಯಿ ಹಣವನ್ನು ದೂರುದಾರೆ ನೀಲಿಮಾ ನೀಡಿದ್ದರು. ಆದರೆ, 5 ಲಕ್ಷ ರೂಪಾಯಿ ಮೌಲ್ಯದ ಯಂತ್ರ ಕೊಟ್ಟು ಅಶ್ವತ್ಥ್ ಹೆಗ್ಡೆ ಮೋಸ ಮಾಡಿದ್ದಾರೆ. ತಯಾರಿಕಾ ಜ್ಞಾನವೇ ಇಲ್ಲದ ಕಾರ್ಮಿಕರನ್ನು ನೀಡಿದ್ದಾರೆ. ಆರ್ಗ್ಯಾನಿಕ್ ಬ್ಯಾಗ್ ತಯಾರಿಕೆಗೆ ಕಚ್ಚಾ ವಸ್ತು ಸಹ ನೀಡಲಿಲ್ಲ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಕೌಟುಂಬಿಕ ಕಲಹ, ಚಾಕುವಿನಿಂದ ಇರಿದು ಸೋದರ ಮಾವನನ್ನೇ ಕೊಲೆಗೈದ ಅಳಿಯ
ಈ ವಿಚಾರವಾಗಿ ಪ್ರಶ್ನೆ ಮಾಡಿದಾಗ ಹೊಸ ಯಂತ್ರ ಕೊಡಿಸುವುದಾಗಿ ಹೇಳಿದ್ದರು. ನಂತರ ಯಂತ್ರ ಕೊಡದೇ, ಹಣವನ್ನೂ ವಾಪಸ್ ಕೊಡದೆ ವಂಚನೆ ಎಸಗಿದ್ದಾರೆ ಎಂದು ನಿಲೀಮಾ ದೂರು ನೀಡಿದ್ದರು.
ಸದ್ಯ ಅಶ್ವತ್ಥ್ ಹೆಗ್ಡೆ ವಿರುದ್ಧ ಐಪಿಸಿ ಸೆಕ್ಷನ್ 406, 420ರಡಿ ಪ್ರಕರಣ ದಾಖಲಿಸಲಾಗಿದೆ. ಚೀಲದ ಹೆಸರಲ್ಲಿ ಕೋಟಿಗಟ್ಟಲೇ ಫಂಡ್ ಕಲೆಕ್ಷನ್ ಆರೋಪ ಹಿನ್ನೆಲೆಯಲ್ಲಿ ನಾಗ್ಪುರ, ಛತ್ತೀಸ್ಗಢ, ಹೈದರಾಬಾದ್ನಲ್ಲೂ ಅಶ್ವತ್ಥ್ ವಿರುದ್ಧ ಕೇಸ್ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ