ಬರಗಾಲದ ಆತಂಕ ದೂರ ಮಾಡಿದ ವರದಾ; ನದಿಯಲ್ಲಿ ನೀರು ಕಂಡು ಸಂತಸ ವ್ಯಕ್ತಪಡಿಸಿದ ಅನ್ನದಾತರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 11, 2023 | 1:36 PM

ಆ ನದಿ ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿನ ಆಕರ ಆಗಿತ್ತು. ಕಳೆದ ಮೂರು ತಿಂಗಳಿನಿಂದ ಮಳೆ ಇಲ್ಲದೆ ನದಿ ಸಂಪೂರ್ಣವಾಗಿ ಬತ್ತಿ ಹೋಗಿ, ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಇನ್ನೇನು ಬರಗಾಲ ಆರಂಭ ಆಗುತ್ತೆ ಎಂಬ ಆತಂಕದಲ್ಲಿದ್ದ ಜನಕ್ಕೆ, ಕಳೆದ ಒಂದು ವಾರದಿಂದ ಆದ ಮಳೆಯಿಂದ ಹಾವೇರಿ ಜಿಲ್ಲೆಯ ವರದಾ ನದಿ ತುಂಬಿ ಹರಿಯುತ್ತಿದೆ.

ಬರಗಾಲದ ಆತಂಕ ದೂರ ಮಾಡಿದ ವರದಾ; ನದಿಯಲ್ಲಿ ನೀರು ಕಂಡು ಸಂತಸ ವ್ಯಕ್ತಪಡಿಸಿದ ಅನ್ನದಾತರು
ಹಾವೇರಿ ರೈತರು
Follow us on

ಹಾವೇರಿ: ಮೈ ತುಂಬಿ ಹರಿಯುತ್ತಿರುವ ನದಿ, ಪೂಜೆ ಸಲ್ಲಿಸುತ್ತಿರುವ ಅನ್ನದಾತರು. ನದಿ ನೋಡಲು ಆಗಮಿಸುತ್ತಿರುವ ಜನಗಳು. ಈ ದೃಶ್ಯ ಕಂಡು ಬಂದಿದ್ದು ಹಾವೇರಿ(Haveri) ಜಿಲ್ಲೆಯ ವರದಾ ನದಿ (Varada River)ದಡದಲ್ಲಿ. ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆದ್ರು, ಮಳೆ ಆಗದ ಪರಿಣಾಮ ಹಾವೇರಿ ಜಿಲ್ಲೆಯ ಜೀವ ನದಿಗಳಲ್ಲಿ ಒಂದಾದ ವರದಾ ನದಿ ಸಂಪೂರ್ಣವಾಗಿ ಬತ್ತಿ ಹೊಗಿತ್ತು. ಮೂರು ತಿಂಗಳಿನಿಂದ ಕುಡಿಯಲು ಒಂದು ಹನಿ ನೀರು ಕೂಡ ನದಿಯಲ್ಲಿ ಇರಲಿಲ್ಲ. ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತಿತ್ತು. 193 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡಬೇಕಿತ್ತು. ಆದ್ರೆ, ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗುತ್ತಿರುವ ನೀರಂತರ ಮಳೆಯ ಪರಿಣಾಮದಿಂದ ಜಿಲ್ಲೆಯ ವರದಾ ನದಿ ತುಂಬಿ ಹರಿಯುತ್ತಿದೆ.

ವರದಾ ನದಿಗೆ ಪೂಜೆ ಮಾಡಿ ಪ್ರಾರ್ಥಿಸಿದ ರೈತರು

ಕುಡಿಯಲು ನೀರು ಸಿಕ್ರೆ ಸಾಕು ಎನ್ನುತ್ತಿರುವ ಸಂದರ್ಭದಲ್ಲಿ ತಮ್ಮೆಲ್ಲರ ಜೀವ ನದಿ ವರದಾ ತುಂಬಿ ಹರಿಯುತ್ತಿರುವುದನ್ನು ಕಂಡು ಜಿಲ್ಲೆಯ ವರದಾ ನದಿ ದಡದ ಕೃಷಿಕರಿಗೆ ದೊಡ್ಡ ಆತಂಕದಿಂದ ದೂರ ಆದಷ್ಟೆ ಖುಷಿ ಆಗಿದೆ. ಕಳೆದ ಒಂದು ತಿಂಗಳಿನಿಂದ ಕೈ ಕಟ್ಟಿ ಕುತಿದ್ದ ರೈತರಿಗೆ ವರದೆ ಪುಷ್ಟಿ ಕೊಟ್ಟಿದ್ದಾಳೆ. ಕೃಷಿ ಚಟುವಟಿಕೆ ಆರಂಭ ಮಾಡುವ ಮುನ್ನ, ಗುಂಪು ಗುಂಪಾಗಿ ಬಂದು ವರದೆಗೆ ಪೂಜೆ ಸಲ್ಲಿಸಿ, ನಮ್ಮ ಕೈ ಬಿಡದಿರು ತಾಯಿ ನಿನ್ನ ಕೃಪೆಯಿಂದ ನಾವು ಕೃಷಿ ಚಟುವಟಿಕೆ ಆರಂಭ ಮಾಡುತ್ತೇವೆ ಎಂದು ವರದಾ ನದಿ ದಡದ ರೈತರು ಸರಳವಾಗಿ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ:Davanagere: ಮಲೆನಾಡ ಭಾಗದಲ್ಲಿ ಧಾರಾಕಾರ ಮಳೆ, ತುಂಗಭದ್ರೆಯಲ್ಲಿ ಹರಿಯಲಾರಂಭಿಸಿತು ನೀರು, ರೈತರು ಖುಷ್!

ಒಟ್ಟಾರೆಯಾಗಿ ರಾಜ್ಯದಲ್ಲಿ ಬರದ ಛಾಯೆ ಆರಂಭ ಆಗುತ್ತೆ ಎಂಬ ಆತಂಕದಲ್ಲಿದ್ದ ಜನರಿಗೆ ಮುಂಗಾರು ಮಳೆಯ ಆರಂಭ ಖುಷಿ ತಂದಿದೆ. ಅದ್ರಲ್ಲೂ ಕೃಷಿಕರಿಗೆ ಮಾತ್ರ ಹೇಳಿಕೊಳ್ಳಲಾರದಷ್ಟು ಖುಷಿ ಆಗಿದೆ. ಇನ್ನೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರದ ಛಾಯೆ ಇದ್ದು, ಆದಷ್ಟು ಬೇಗ ಅಲ್ಲಿಯೂ ಮಳೆಯಾಗಿ, ರೈತರ ಸಂಕಷ್ಟ ದೂರವಾಗಲಿ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ