Davanagere: ಮಲೆನಾಡ ಭಾಗದಲ್ಲಿ ಧಾರಾಕಾರ ಮಳೆ, ತುಂಗಭದ್ರೆಯಲ್ಲಿ ಹರಿಯಲಾರಂಭಿಸಿತು ನೀರು, ರೈತರು ಖುಷ್!

Davanagere: ಮಲೆನಾಡ ಭಾಗದಲ್ಲಿ ಧಾರಾಕಾರ ಮಳೆ, ತುಂಗಭದ್ರೆಯಲ್ಲಿ ಹರಿಯಲಾರಂಭಿಸಿತು ನೀರು, ರೈತರು ಖುಷ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 08, 2023 | 11:47 AM

ದೇಶದ ರೈತ ಖುಷಿಯಾಗಿದ್ದರೆ ಇಡೀ ದೇಶ ಖುಷಿಯಾಗಿರುತ್ತದೆ ಅನ್ನೋದು ಸುಳ್ಳಲ್ಲ ಸ್ವಾಮಿ!

ದಾವಣಗೆರೆ: ಮೊನ್ನೆಯಷ್ಟೇ ತುಂಗಭಧ್ರಾ ನದಿಯ (Tungabhadra River) ಬರಿದಾದ ಒಡಲಿನ ದೃಶ್ಯಗಳನ್ನು ನಿಮಗೆ ತೋರಿಸಲಾಗಿತ್ತು. ಆದರೆ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಪಶ್ಚಿಮ ಘಟ್ಟ (Western Ghat Region) ಮತ್ತು ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ತುಂಗಭದ್ರೆಯಲ್ಲಿ ನೀರು ಹರಿಯಲಾರಂಭಿಸಿ ಅದಕ್ಕೆ ಜೀವಕಳೆ ಬಂದಿದೆ. ಜಿಲ್ಲೆಯ ನ್ಯಾಮತಿ-ಹೊನ್ನಾಳಿ (Honnali-Nyamati) ಹಾಗೂ ಹರಿಹರ ತಾಲ್ಲೂಕಿನ ರೈತರು ಸಂತಸದಿಂದ ಬೀಗುತ್ತಿದ್ದಾರೆ. ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮಳೆ ಮೂಡಿಸುವ ಸಂತಸವನ್ನು ಪದಗಳಲ್ಲಿ ಹೇಳಲು ಬಾರದು ಮಾರಾಯ್ರೇ. ನಮ್ಮ ಅನ್ನದಾತರು ಮಳೆಯನ್ನೇ ನೆಚ್ಚಿಕೊಂಡಿರುತ್ತಾರೆ. ಹಾಗಾಗಿ ತಕ್ಕ ಸಮಯದಲ್ಲಿ ಮಳೆಯಾದರೆ ಎಲ್ಲರಿಗಿಂತ ಜಾಸ್ತಿ ಖುಷಿ ಆವರಿಗಾಗುತ್ತದೆ. ದೇಶದ ರೈತ ಖುಷಿಯಾಗಿದ್ದರೆ ಇಡೀ ದೇಶ ಖುಷಿಯಾಗಿರುತ್ತದೆ ಅನ್ನೋದು ಸುಳ್ಳಲ್ಲ ಸ್ವಾಮಿ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ