ಶುಕ್ರವಾರ ಸದನ ಪ್ರವೇಶಿಸಿ ಗೊಂದಲ ಸೃಷ್ಟಿಸಿದ ವ್ಯಕ್ತಿ ಸಜ್ಜನ ಮತ್ತು ಚಿತ್ರದುರ್ಗದಲ್ಲಿ ವಕೀಲರಾಗಿದ್ದಾರೆ: ಶಿವು ಯಾದವ್, ಚಿತ್ರದುರ್ಗ ವಕೀಲ ಸಂಘದ ಅಧ್ಯಕ್ಷ

ಶುಕ್ರವಾರ ಸದನ ಪ್ರವೇಶಿಸಿ ಗೊಂದಲ ಸೃಷ್ಟಿಸಿದ ವ್ಯಕ್ತಿ ಸಜ್ಜನ ಮತ್ತು ಚಿತ್ರದುರ್ಗದಲ್ಲಿ ವಕೀಲರಾಗಿದ್ದಾರೆ: ಶಿವು ಯಾದವ್, ಚಿತ್ರದುರ್ಗ ವಕೀಲ ಸಂಘದ ಅಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 08, 2023 | 12:53 PM

ತಿಪ್ಪೆರುದ್ರಪ್ಪ ಸದನದಲ್ಲಿ ಪ್ರೇಕ್ಷಕರ ಗ್ಯಾಲರಿಗೆ ಹೋಗಲು ಪಾಸ್ ಪಡೆದಿರುತ್ತಾರೆ ಆದರೆ, ಅಲ್ಲಿಗೆ ಹೋಗುವ ದಾರಿ ಗೊತ್ತಾಗದೆ ಸದನದೊಳಗೆ ಹೋಗಿರುತ್ತಾರೆ ಎಂದು ಯಾದವ್ ಹೇಳುತ್ತಾರೆ.

ಚಿತ್ರದುರ್ಗ: ನಿನ್ನೆ ವಿಧಾನ ಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದ್ದಾಗ ಸದನ ಪ್ರವೇಶಿಸಿ ಶಾಸಕರಿಗೆ ಮೀಸಲಾಗಿದ್ದ ಆಸನದಲ್ಲಿ ಸ್ವಲ್ಪ ಹೊತ್ತು ಕೂತು ಕೋಲಾಹಲ ಸೃಷ್ಟಿಸಿ ನಂತರ ಪೊಲೀಸರಿಂದ ಬಂಧನಕ್ಕೊಳಗಾದ ಹಿರಿಯ ವ್ಯಕ್ತಿಯ ಬಗ್ಗೆ ಚಿತ್ರದುರ್ಗ ವಕೀಲರ ಸಂಘದ ಜಿಲ್ಲಾಧ್ಯಕ್ಷ ಶಿವು ಯಾದವ್ (Shivu Yadav) ಬೆಳಕು ಚೆಲ್ಲಿದ್ದಾರೆ. ಅವರು ಹೇಳುವ ಪ್ರಕಾರ ಸದನದೊಳಗೆ ಹೋಗಿದ್ದ ವ್ಯಕ್ತಿ ಚಿತ್ರದುರ್ಗದಲ್ಲಿ ವಕೀಲಿ ವೃತ್ತಿಯನ್ನು ಮಾಡಿಕೊಂಡಿದ್ದು ಅವರ ಹೆಸರು ತಿಪ್ಪೇರುದ್ರಪ್ಪ (Tipperudrappa) ಆಗಿದೆ. ಮೊದಲು ಅವರು ಜಡ್ಜ್ ಮೆಂಟ್ ರೈಟರ್ (judgement writer) ಅಗಿ ಕೆಲಸ ಮಾಡುತ್ತಿದ್ದರು ಆದರೆ ವೃತ್ತಿಯಿಂದ ವಿಅರ್ ಎಸ್ ಪಡೆದು ವಕೀಲಿಕೆ ಆರಂಭಿಸಿದ್ದರು. ಅವರಲ್ಲಿಗೆ ಕೇಸ್ ಗಳು ಬಹಳ ಕಡಿಮೆ ಬರುತ್ತಿದ್ದ ಕಾರಣ ಪಟ್ಟಣದ ನ್ಯಾಯಾಲಯಗಳಿಗೆ ಅಲೆದಾಡುತ್ತಾ ಸಮಯ ವ್ಯಯಿಸುತ್ತಿದ್ದರು. ವಯಸ್ಸು ಸುಮಾರು 75 ರಷ್ಟಾಗಿರುವುದರಿಂದ ಮರೆಗುಳಿನದ ಕಾಯಿಲೆಯಿಂದ ಬಳಲುತ್ತಿರುವ ಸಾಧ್ಯತೆ ಇದೆ. ಆದರೆ ಅವರೊಬ್ಬ ಸಜ್ಜನ ಮತ್ತು ನಿರಪಯಕಾರಿ ವ್ಯಕ್ತಿ ಎಂದು ಯಾದವ್ ಹೇಳುತ್ತಾರೆ. ನಿನ್ನೆ ಅವರು ಸದನದಲ್ಲಿ ಪ್ರೇಕ್ಷಕರ ಗ್ಯಾಲರಿಗೆ ಹೋಗಲು ಪಾಸ್ ಪಡೆದಿರುತ್ತಾರೆ ಆದರೆ, ಅಲ್ಲಿಗೆ ಹೋಗುವ ದಾರಿ ಗೊತ್ತಾಗದೆ ಸದನದೊಳಗೆ ಹೋಗಿರುತ್ತಾರೆ, ಅವರಲ್ಲಿ ಬೇರೆ ಯಾವುದೇ ಉದ್ದೇಶ ಇರೋದು ಸಾಧ್ಯವಿಲ್ಲ ಎಂದು ಯಾದವ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ