Budget session: ವಿಧಾನ ಮಂಡಲದ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲರನ್ನು ಸ್ವಾಗತಿಸಲು ವಿರೋಧ ಪಕ್ಷದ ನಾಯಕನೇ ಇರಲಿಲ್ಲ!
ಕಾಂಗ್ರೆಸ್ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು 3-4 ದಿನ ತಡವಾದಾಗ ರಾಜ್ಯ ಬಿಜೆಪಿ ನಾಯಕರು ತಲೆಗೊಂದು ಮಾತಾಡಿದ್ದರು.
ಬೆಂಗಳೂರು: ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ (Budget Session) ಇಂದಿನಿಂದ ಆರಂಭವಾಗಿದೆ. ಇದೇ ಹಿನ್ನೆಲೆಯಲ್ಲಿ ವಿಧಾನ ಸಭೆಯ ಎರಡೂ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thaawar Chand Gehlot) ಆಗಮಿಸಿದರು. ಶಿಷ್ಟಾಚಾರದ ಪ್ರಕಾರ ಮೇಲ್ಮನೆ ಸಭಾಪತಿ, ವಿಧಾನಸಭಾಧ್ಯಕ್ಷರು, ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ (Leader of Opposition) ರಾಜ್ಯಪಾಲರನ್ನು ಸ್ವಾಗತಿಸಿ ಅವರನ್ನು ಸಭಾಧ್ಯಕ್ಷರ ಆಸನದವರೆಗೆ ಕರೆತರಬೇಕು. ಆದರೆ ಇಲ್ನೋಡಿ, ರಾಜ್ಯಪಾಲರ ಸ್ವಾಗತಕ್ಕೆ ಎಲ್ಲರೂ ಇದ್ದಾರೆ, ಬಿಜೆಪಿಯ ವಿರೋಧ ಪಕ್ಷದ ನಾಯಕ ಮಾತ್ರ ಇಲ್ಲ. ಹೊಸ ವಿಧಾನ ಸಭೆಯ ರಚನೆಯಾಗಿ ಹೆಚ್ಚು ಕಡಿಮೆ ಒಂದೂವರೆ ತಿಂಗಳಾದರೂ ರಾಷ್ಟ್ರೀಯ ಪಕ್ಷವೊಂದಕ್ಕೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದು ಸಾಧ್ಯವಾಗುತ್ತಿಲ್ಲವೇ? ರಾಜ್ಯದಲ್ಲಿ ಪಕ್ಷದ ಯಾವ ಸ್ಥಿತಿಯಲ್ಲಿದೆ ಅಂತ ಹೇಳಲು ಇದಕ್ಕಿಂತ ಉತ್ತಮ ಉದಾಹರಣೆ ಇಲ್ಲ. ನಿಮಗೆ ಗೊತ್ತಿದೆ, ಕಾಂಗ್ರೆಸ್ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು 3-4 ದಿನ ತಡವಾದಾಗ ರಾಜ್ಯ ಬಿಜೆಪಿ ನಾಯಕರು ತಲೆಗೊಂದು ಮಾತಾಡಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ