Chikmagalur: ವಿರೋಧ ಪಕ್ಷದ ನಾಯಕ ಯಾರು ಅನ್ನೋದು ನಾಳೆ ಗೊತ್ತಾಗಲಿದೆ: ಬಸವರಾಜ ಬೊಮ್ಮಾಯಿ, ಶಾಸಕ
ಬಜೆಟ್ ಆಧಿವೇಶನದಲ್ಲಿ ಸಾಕಷ್ಟು ವಿಷಯಗಳನ್ನು ಚರ್ಚಿಸಬೇಕಿದೆ ಎಂದು ಬೊಮ್ಮಾಯಿ ಹೇಳಿದರು.
ಚಿಕ್ಕಮಗಳೂರು: ಬಿಜೆಪಿ ಶಾಸಕ ಆರ್ ಅಶೋಕ (R Ashoka) ಹುಟ್ಟುಹಬ್ಬ ಆಚರಿಸಲು ನಗರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ನಾಳೆ ಸಾಯಂಕಾಲದೊಳಗೆ ವಿರೋಧ ಪಕ್ಷದ ನಾಯಕ ಯಾರು ಅನ್ನೋದು ಗೊತ್ತಾಗುತ್ತದೆ ಎಂದರು. ಬಜೆಟ್ ಆಧಿವೇಶನದಲ್ಲಿ (Budget session) ಸಾಕಷ್ಟು ವಿಷಯಗಳನ್ನು ಚರ್ಚಿಸಬೇಕಿದೆ ಎಂದ ಬೊಮ್ಮಾಯಿ, ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್ ಅವುಗಳನ್ನು ಗೊಂದಲದ ಗೂಡಾಗಿ ಪರಿವರ್ತಿಸಿದೆ ಎಂದು ಟೀಕಿಸಿದರು. ಬಿಜೆಪಿಯಲ್ಲಿ ಹೆಚ್ಚುತ್ತಿರುವ ಭಿನ್ನಮತ ಮತ್ತು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಪ್ರತಿದಿನ ಮಾಧ್ಯಮದವರೊಂದಿಗೆ ಮಾತಾಡಿ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿರುವುದು ಮತ್ತು ಶಿಸ್ತು ಸಮಿತಿ ನೀಡಿರುವ ನೊಟೀಸ್ ಗೆ ಉತ್ತರ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಬೊಮ್ಮಾಯಿ, ಅದನ್ನೆಲ್ಲ ಪಕ್ಷದ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos