ಬೀದರ್: ದಾಳಿ ನಡೆಸಿ ಗೋ ಹತ್ಯೆ ತಡೆದ ಬಸವಕಲ್ಯಾಣ ಶಾಸಕ ಶರಣು ಸಲಗರ್
ಶಾಸಕ ಶರಣು ಸಲಗರ್ ಅವರು ಕಾರ್ಯಾಚರಣೆಗೆ ಇಳಿದು ಗೋ ಹತ್ಯೆ ತಡೆದ ಘಟನೆ ಬಸವಕಲ್ಯಾಣ ಪಟ್ಟಣದಲ್ಲಿ ನಡೆದಿದೆ. ಅಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಗೋ ಹತ್ಯೆ ವಿರುದ್ಧದ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.
ಬೀದರ್: ಮನೆಯೊಂದರಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಲು ಮುಂದಾಗಿರುವ ಬಗ್ಗೆ ಮಾಹಿತಿ ತಿಳಿದು ಅಖಾಡಕ್ಕಿಳಿದ ಬಸವಕಲ್ಯಾಣ ಶಾಸಕ ಶರಣು ಸಲಗರ್ (Sharanu Salgar) ಅವರು ದಾಳಿ ನಡೆಸಿ ಗೋವನ್ನು ರಕ್ಷಿಸಿದ್ದಾರೆ. ಇನಾಮುಲ್ಲಾಖಾನ್ ಅವರ ಮನೆಯಲ್ಲಿ ಕಾನೂನು ಬಾಹಿರವಾಗಿ ಗೋಹತ್ಯೆ ನಡೆಸಲು ತಯಾರಿ ನಡೆಸಲಾಗುತ್ತಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕರು ಗೋಹತ್ಯೆ ತಡೆದು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶಾಸಕರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಕಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಶಾಸಕರು, ಗೋ ಹತ್ಯೆ ಮಾಡುವವರ ವಿರುದ್ಧ ನಮ್ಮದು ನಿರಂತರ ಹೋರಾಟವಿರಬೇಕು. ಹಿಂದೂಗಳ ಪುಕಳ ಇದ್ದಾರೆ ಇವರು ಏನು ಮಾಡುವುದಿಲ್ಲ ಎಂದು ಇವರು ತಿಳಿದುಕೊಂಡಿದ್ದಾರೆ. ಹಿಂದೂಗಳು ಏನು ಅನ್ನುವುದನ್ನ ನಾವು ತೋರಿಸಬೇಕು. ಕಾಂಗ್ರೇಸ್ ಸರಕಾರ ಇದ್ದರೂ ಗೋಹತ್ಯೆಯ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಬೇಕು ಎಂದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos