Belagavi; ಅನ್ನಭಾಗ್ಯ ಯೋಜನೆ ಇವತ್ತಿನಿಂದ ಜಾರಿಯಾಗಿದೆ, ಕಾರ್ಡುದಾರರ ಖಾತೆಗೆ ಆಗಸ್ಟ್ 1 ರಿಂದ ಹಣ ಜಮಾ ಆಗುತ್ತದೆ: ಸತೀಶ್ ಜಾರಕಿಹೊಳಿ

Belagavi; ಅನ್ನಭಾಗ್ಯ ಯೋಜನೆ ಇವತ್ತಿನಿಂದ ಜಾರಿಯಾಗಿದೆ, ಕಾರ್ಡುದಾರರ ಖಾತೆಗೆ ಆಗಸ್ಟ್ 1 ರಿಂದ ಹಣ ಜಮಾ ಆಗುತ್ತದೆ: ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 01, 2023 | 4:18 PM

ಹಿಡ್ಕಲ್ ಡ್ಯಾಂನಲ್ಲಿ 2 ತಿಂಗಳಿಗೆ ಸಾಕಾಗುವಷ್ಟು ನೀರು ಇರೋದ್ರಿಂದ ಡ್ಯಾಂ ನೀರನ್ನು ಆಶ್ರಯಿಸಿಕೊಂಡವರು ಚಿಂತಿಸಬೇಕಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಚಿಕ್ಕೋಡಿ: ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಇಂದು ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಬೆಳಗಾವಿ ಜಿಲ್ಲೆಯಲ್ಲಿ ಜನ ಕುಡಿಯುವ ನೀರಿಗಾಗಿ ಅತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು. ಹಿಡ್ಕಲ್ ಡ್ಯಾಂನಲ್ಲಿ (Hidkal Dam) 2 ತಿಂಗಳಿಗೆ ಸಾಕಾಗುವಷ್ಟು ನೀರು ಇರೋದ್ರಿಂದ ಡ್ಯಾಂ ನೀರನ್ನು ಆಶ್ರಯಿಸಿಕೊಂಡವರು ಚಿಂತಿಸಬೇಕಿಲ್ಲ ಮತ್ತು ಡ್ಯಾಂನೊಳಗೆ ಹೊಸ ನೀರಿ ಹರಿದು ಬರೋದು ಕೂಡ ಆರಂಭವಾಗಿದೆ ಎಂದರು. ಅನ್ನಭಾಗ್ಯ ಯೋಜನೆ (Anna Bhagya Scheme) ಬಗ್ಗೆ ಮಾತಾಡಿದ ಸಚಿವ, ಯೋಜನೆ ಈ ತಿಂಗಳು ಆರಂಭವಾಗಿದೆ ಮತ್ತು ಆಗಸ್ಟ್ 1 ರಿಂದ ಬಿಪಿಎಲ್ ಕಾರ್ಡುದಾರರ ಖಾತೆಗೆ ಹಣ ಜಮಾ ಆಗಲಿದೆ ಎಂದರು. ಈ ಮೊದಲು ಸಿಗುತ್ತಿದ್ದ 5 ಕೆಜಿ ಅಕ್ಕಿ ಯಥಾಪ್ರಕಾರ ಸಿಗಲಿದೆ ಅದಕ್ಕೇನೂ ಅಡಚಣೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ