ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ನಾಯಕರು ಗಿಫ್ಟ್​​​​ ಕಾರ್ಡ್​​ಗಳನ್ನು ವಿತರಿಸುತ್ತಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

|

Updated on: Apr 26, 2024 | 1:12 PM

ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ, ಜನರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗಿದೆ, ಮತದಾರರಿಹೆ ಕುಕ್ಕರ್ ಹಂಚಿದ ಸಂಗತಿಯನ್ನು ಈಗಾಗಲೇ ಮಾಧ್ಯಮ ಮತ್ತು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ, ಅದರೆ ಆಯೋಗ ಯಾವುದೇ ಕ್ರಮ ಜರುಗಿಸದ ಕಾರಣ, ಕಾಂಗ್ರೆಸ್ ನಾಯಕರು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು,

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ (Bengaluru Lok Sabha constituency) ತಮ್ಮ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ರಾಜ್ಯಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಮತದಾರರಿಗೆ ಅಮಿಶವೊಡ್ಡುವ ಕೆಲಸ ಕಾಂಗ್ರೆಸ್ ಮುಖಂಡರಿಂದ (Congress leaders) ಅವ್ಯಾಹತವಾಗಿ ಜಾರಿಯಲ್ಲಿದೆ ಎಂದು ಹೇಳಿದರು. ಚುನಾವಣಾ ಆಯೋಗ ಚುನಾವಣೆಗಳನ್ನು ಹೀಗೆ ನಡೆಸುವ ಬದಲು ಮತದಾರರಿಗೆ ಹಣ ನೀಡಿ ವೋಟು ಹಾಕಿಸುವ ಪದ್ಧತಿಯನ್ನು ಜಾರಿಗೆ ತರಬೇಕು ಅಂತ ಕುಹುಕವಾಡಿದರು. ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ, ಜನರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗಿದೆ, ಮತದಾರರಿಹೆ ಕುಕ್ಕರ್ ಹಂಚಿದ ಸಂಗತಿಯನ್ನು ಈಗಾಗಲೇ ಮಾಧ್ಯಮ ಮತ್ತು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ, ಅದರೆ ಆಯೋಗ ಯಾವುದೇ ಕ್ರಮ ಜರುಗಿಸದ ಕಾರಣ, ಕಾಂಗ್ರೆಸ್ ನಾಯಕರು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಿಫ್ಟ್​​ ಕಾರ್ಡ್ ಗಳನ್ನು ಹಂಚಿದ ಹಾಗೆ ಈಗಿನ ಲೋಕಸಭಾ ಚುನಾವಣೆಯಲ್ಲೂ ಹತ್ತ್ತತ್ತು ಸಾವಿರ ರೂ.ಗಳ  ಕಾರ್ಡ್ ಗಳನ್ನು ಮತದಾರರಿಗೆ ಹಂಚುತ್ತಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ ಕಾರ್ಡ್ ಗಳ ಜಿರಾಕ್ಸ್ ಪ್ರತಿಗಳನ್ನು ತೋರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಶಾಲೆಗಳನ್ನು ಕಟ್ಟಲು ಕೋಟ್ಯಾಂತರ ಬೆಲೆಬಾಳುವ ಜಮೀನುಗಳನ್ನು ದೇಣಿಗೆ ನೀಡಿದ್ದೇನೆ, ಕುಮಾರಸ್ವಾಮಿ ನೀಡಿದ್ದಾರಾ? ಶಿವಕುಮಾರ್

Follow us on