Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ಕಳೆದ ಸಲಕ್ಕಿಂತ ಹೆಚ್ಚಿನ ಅಂತರದಿಂದ ಗೆಲ್ಲಲಿದ್ದೇನೆ: ಡಿಕೆ ಸುರೇಶ್

ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ಕಳೆದ ಸಲಕ್ಕಿಂತ ಹೆಚ್ಚಿನ ಅಂತರದಿಂದ ಗೆಲ್ಲಲಿದ್ದೇನೆ: ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 26, 2024 | 1:57 PM

ನೀವೇ ಗೆಲ್ಲೋದು ಅಂತ ಅಷ್ಟು ನಿಖರವಾಗಿ ಹೇಗೆ ಹೇಳುತ್ತೀರಿ ಅಂದಾಗ ಸಿಡಿಮಿಡಿಗೊಂಡ ಸುರೇಶ್, ಹೇಗೆ ಗೆಲ್ತೀರಿ ಅಂದರೆ ಏನರ್ಥ? ನೀವು ಕ್ಷೇತ್ರದಲ್ಲಿ ಸುತ್ತಾಡದೆ, ವಸ್ತುಸ್ಥಿತಿಯನ್ನು ಅರಿಯದೆ ಈ ಪ್ರಶ್ನೆಯನ್ನು ಕೇಳುತ್ತಿದ್ದೀರಿ, ಕಳೆದ ಹತ್ತ ವರ್ಷಗಳಿಂದ ಕ್ಷೇತ್ರದ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿರುವ ನನಗೆ ಹಕೀಕತ್ತು ಗೊತ್ತು, ಜನರ ನಾಡ ಮಿಡಿತ ಗೊತ್ತು ಮತ್ತು ಅವರು ಏನು ಬಯಸುತ್ತಾರೆ ಅಂತ ಗೊತ್ತು ಎಂದು ಡಿಕೆ ಸುರೇಶ್ ಹೇಳಿದರು.

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ (Bengaluru Rural seat) ತಮ್ಮ ಮತ ಚಲಾಯಿಸುವ ಮೊದಲು ಟಿವಿ9 ಪ್ರತಿನಿಶಧಿಯೊಂದಿಗೆ ಮಾತಾಡಿದ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh), ಕ್ಷೇತ್ರದ ಎಲ್ಲ ಭಾಗಗಳಿಂದ ತಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಮತ್ತು ಕಳೆದ ಸಲಕ್ಕಿಂತ ಹೆಚ್ಚಿನ ಮತಗಳಿಂದ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದರು. ಎಷ್ಟು ಮತಗಳ ಅಂತರ ಗೆಲುವು ಸಿಗಲಿದೆ ಅಂತ ಈಗಲೇ ಹೇಳಲಾಗದು, ಎಲ್ಲ ಭಾಗಗಳಲ್ಲಿ ಎಷ್ಟು ಪ್ರಮಾಣದ ಮತದಾನ (voting percentage) ಆಗಿದೆ ಮತ್ತು ಇನ್ನೂ ಕೆಲ ಅಂಶಗಳನ್ನು ಅಳೆದು ತೂಗಿದ ಬಳಿಕ ಮತಗಳ ಅಂತರದ ಲೆಕ್ಕಾಚಾರ ಹಾಕಬಹುದು ಎಂದು ಹೇಳಿದರು. ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಜನರು ಮರೆಯಬಾರದು ಎಂಬ ಉದ್ದೇಶದಿಂದ ಕಾರ್ಡ್ ಗಳ ರೂಪದಲ್ಲಿ ನೀಡಿದ್ದೇವೆ ಮತ್ತು ಕ್ಯೂಆರ್ ಕೋಡ್ ಬಗ್ಗೆ ಹೇಳೋದಾದರೆ ಅದನ್ನು ಬಿಜೆಪಿ ಶಾಸಕರೊಬ್ಬರಿಂದ ಕಲಿತದ್ದು ಎಂದು ಸುರೇಶ್ ಹೇಳಿದರು.

ಅಷ್ಟರಲ್ಲಿ ಅವರನ್ನು ಸುತ್ತುವರಿದ ಅಂಗ್ಲ ಮಾಧ್ಯಮಗಳ ಪ್ರತಿನಿಧಿಗಳು, ನೀವೇ ಗೆಲ್ಲೋದು ಅಂತ ಅಷ್ಟು ನಿಖರವಾಗಿ ಹೇಗೆ ಹೇಳುತ್ತೀರಿ ಅಂದಾಗ ಸಿಡಿಮಿಡಿಗೊಂಡ ಸುರೇಶ್, ಹೇಗೆ ಗೆಲ್ತೀರಿ ಅಂದರೆ ಏನರ್ಥ? ನೀವು ಕ್ಷೇತ್ರದಲ್ಲಿ ಸುತ್ತಾಡದೆ, ವಸ್ತುಸ್ಥಿತಿಯನ್ನು ಅರಿಯದೆ ಈ ಪ್ರಶ್ನೆಯನ್ನು ಕೇಳುತ್ತಿದ್ದೀರಿ, ಕಳೆದ ಹತ್ತ ವರ್ಷಗಳಿಂದ ಕ್ಷೇತ್ರದ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿರುವ ನನಗೆ ಹಕೀಕತ್ತು ಗೊತ್ತು, ಜನರ ನಾಡ ಮಿಡಿತ ಗೊತ್ತು ಮತ್ತು ಅವರು ಏನು ಬಯಸುತ್ತಾರೆ ಅಂತ ಗೊತ್ತು ಎಂದು ಡಿಕೆ ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ದೇವೇಗೌಡರು ಮೊದಲಿಂದಲೂ ಕ್ಷುಲ್ಲಕ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ: ಡಿಕೆ ಸುರೇಶ್