ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ನನಗೆ ದುಪ್ಪಟ್ಟು ಕೂಲಿ ನೀಡುವ ನಿರ್ಧಾರ ಮಾಡಿದ್ದಾರೆ: ಡಿಕೆ ಸುರೇಶ್
ಬಿಜೆಪಿ ನಾಯಕ ಆರ್ ಅಶೋಕ ಅವರು ಕಟುಕ ಹೃದಯಿ ಎಂದು ಮಾಡಿರುವ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿದ ಸುರೇಶ್, ಅವರಿಗೆ ತನ್ನ ಬಗ್ಗೆ ಕಾಮೆಂಟ್ ಮಾಡುವ ಯೋಗ್ಯತೆ ಇಲ್ಲ, ಬಿಜೆಪಿಯೊಂದಿಗೆ ಮೈತ್ರಿ ಬೆಳೆಸಿರುವವರ ಬಗ್ಗೆ ಅವರು ಏನು ಬೇಕಾದರೂ ಹೇಳಿಕೊಳ್ಳಲಿ, ಅವರ ಹಾಗೆ ತಾನು ಪಲಾಯನವಾದಿ ಅಲ್ಲ, ಕಟುಕ ಹೃದಯ ಇರೋದು ಬಿಜೆಪಿಗೆ ಹೊರತು ಕಾಂಗ್ರೆಸ್ ಗೆ ಅಲ್ಲ ಎಂದರು.
ಆನೇಕಲ್: ಆನೇಕಲ್ ಪಟ್ಟಣದಲ್ಲಿ ಇಂದು ಮತಬೇಟೆ ನಡೆಸಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh) ಮಾಧ್ಯಮಗಳೊಂದಿಗೆ ಮಾತಾಡುವಾಗ, ಬೇಸಿಗೆ ಧಗೆಯ ಹೊರತಾಗಿಯೂ ಜನ ಮನೆಗಳಿಂದ ಆಚೆಬಂದು ಬೆಂಬಲ ಸೂಚಿಸುತ್ತಿದ್ದಾರೆ ಎಂದು ಹೇಳಿದರು. ತಾವು ಮಾಡಿದ ದುಡಿಮೆ ಜನ ದುಪ್ಪಟ್ಟು ಕೂಲಿ (double wages) ನೀಡಲು ನಿರ್ಧರಿದ್ದಾರೆ ಎಂದು ಹೇಳಿದ ಸುರೇಶ್ ಗೆಲುವಿನ ಬಗ್ಗೆ ತನಗೆ ಯಾವುದೇ ಅನುಮಾನವಿಲ್ಲ ಎಂದರು. ಬಿಜೆಪಿ ನಾಯಕ ಆರ್ ಅಶೋಕ (R Ashoka) ಅವರು ಕಟುಕ ಹೃದಯಿಗಳು ಎಂದು ಮಾಡಿರುವ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿದ ಸುರೇಶ್, ಅವರಿಗೆ ತನ್ನ ಬಗ್ಗೆ ಕಾಮೆಂಟ್ ಮಾಡುವ ಯೋಗ್ಯತೆ ಇಲ್ಲ, ಬಿಜೆಪಿಯೊಂದಿಗೆ ಮೈತ್ರಿ ಬೆಳೆಸಿರುವವರ ಬಗ್ಗೆ ಅವರು ಏನು ಬೇಕಾದರೂ ಹೇಳಿಕೊಳ್ಳಲಿ, ಅವರ ಹಾಗೆ ತಾನು ಪಲಾಯನವಾದಿ ಅಲ್ಲ, ಕಟುಕ ಹೃದಯ ಇರೋದು ಬಿಜೆಪಿಗೆ ಹೊರತು ಕಾಂಗ್ರೆಸ್ ಗೆ ಅಲ್ಲ, ತಮ್ಮ ಪಕ್ಷ ಬಡವರ ಸಂಕಷ್ಟಗಳನ್ನು ಅರ್ಥಮಾಡಿಕೊಂಡು ಅವರಿಗೆ ನೆರವಾಗುವ ಕೆಲಸಮಾಡುತ್ತದೆ ಎಂದರು. ಕೋವಿಡ್ ಸಮಯದಲ್ಲಿ ತಾನು ಮಾಡಿದ ಕೆಲಸಗಳು ಜನರಿಗೆ ಗೊತ್ತಿವೆ, ಅವರು ಯಾವುದನ್ನೂ ಮರೆತಿಲ್ಲ ಎಂದು ಸುರೇಶ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಮತದಾರರ ಮೇಲಿನ ಕೋಪಕ್ಕೆ ಡಿಕೆ ಸಹೋದರರ ಗೂಂಡಾಗಿರಿ: ಆರ್ ಅಶೋಕ ಕಿಡಿ