
ಬೆಂಗಳೂರು: ಸಿದ್ದರಾಮಯ್ಯನವರು ನನ್ನನ್ನು ಪೆದ್ದ ಎಂದು ಹೇಳ್ತಾರೆ. ಅವರು ಹೇಳುವ ಪ್ರಕಾರ ನಾನು ಪೆದ್ದ ಎಂದು ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವನ್ನು 10% ಸರ್ಕಾರ ಎಂದು ಸಿದ್ದರಾಮಯ್ಯ ಆರೋಪಿಸುತ್ತಾರೆ. ನಮ್ಮ ಜೊತೆಯೂ ಸಿದ್ದರಾಮಯ್ಯನವರು ಸರ್ಕಾರ ನಡೆಸಿದ್ರು. ನಾನು ರೈತರ 25 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೆ. ಇವರ ಪ್ರಕಾರ 10 ಪರ್ಸೆಂಟ್ ಪಡೆದಿದ್ರೆ ಹಣ ಬರುತ್ತಿತ್ತು. ಅಂದರೆ, ನನಗೆ 2,500 ಕೋಟಿ ರೂಪಾಯಿ ಬರುತ್ತಿತ್ತು. ಆದರೆ ನಾನು ಬಡವರ ಕಷ್ಟವನ್ನು ಹೃದಯದಿಂದ ನೋಡಿದ್ದೆ ಎಂದು ಸಿದ್ದರಾಮಯ್ಯ ವಿರುದ್ಧ HDK ವಾಗ್ದಾಳಿ ನಡೆಸಿದರು.
‘ಸಿದ್ದರಾಮಯ್ಯಗೆ HD ಕುಮಾರಸ್ವಾಮಿ ಬಗ್ಗೆ ಭಯವಿದೆ’
ಸಿದ್ದರಾಮಯ್ಯ ತಮ್ಮನ್ನು ಟಾರ್ಗೆಟ್ ಮಾಡುವ ವಿಚಾರವಾಗಿ ಸಿದ್ದರಾಮಯ್ಯಗೆ ಹೆಚ್.ಡಿ. ಕುಮಾರಸ್ವಾಮಿ ಬಗ್ಗೆ ಭಯವಿದೆ. ಇದು ಅವರ ಹೇಳಿಕೆಗಳಿಂದಲೇ ಗೊತ್ತಾಗುತ್ತದೆ. ಅವರು ಮಾತನಾಡುವುದರಿಂದಲೇ ನಾನು ಮಾತನಾಡುತ್ತಿರುವುದು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.