AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವೇ ಎಂಎಲ್​​ಸಿ ಅಂತ ಗ್ಯಾರಂಟಿ ಏನು? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ

ನೀವೇ ಎಂಎಲ್​​ಸಿ ಅಂತ ಗ್ಯಾರಂಟಿ ಏನು? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ

ರಮೇಶ್ ಬಿ. ಜವಳಗೇರಾ
|

Updated on: Dec 21, 2025 | 5:05 PM

Share

ನೀವು ಎಂಎಲ್​​ಸಿ ಎನ್ನುವುದನ್ನು ಏನು ಗ್ಯಾರಂಟಿ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಅವರನ್ನು ಟೋಲ್ ಸಿಬ್ಬಂದಿ ಪ್ರಶ್ನಿಸಿದ್ದು, ಬರೋಬ್ಬರಿ 1 ಗಂಟೆಗಳ ಕಾಲ ತಡೆ ನಿಲ್ಲಿಸಿದ್ದಾನೆ. ವಿಜಯಪುರ ಹೊರವಲಯದಲ್ಲಿರುವ ಟೋಲ್ ನಲ್ಲಿ ಈ ಘಟನೆ ನಡೆದಿದೆ. ನಾಳೆ‌ ಕೆಡಿಪಿ ಸಭೆ ಹಿನ್ನೆಲೆಯಲ್ಲಿ ಕೇಶವಪ್ರಸಾದ್ ಅವರು ಇಂದು (ಡಿಸೆಂಬರ್ 21) ವಿಜಯಪುರಕ್ಕೆ ಹೊರಟ್ಟಿದ್ದರು. ಮಾರ್ಗಮಧ್ಯೆ ಟೋಲ್ ಸಿಬ್ಬಂದಿ ಕಾರು ಬಿಡದೇ ನಿಲ್ಲಿಸಿದ್ದಾನೆ.

ವಿಜಯಪುರ, (ಡಿಸೆಂಬರ್ 21): ನೀವು ಎಂಎಲ್​​ಸಿ ಎನ್ನುವುದನ್ನು ಏನು ಗ್ಯಾರಂಟಿ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ (BJP MLC keshav prasad) ಅವರನ್ನು ಟೋಲ್ ಸಿಬ್ಬಂದಿ ಪ್ರಶ್ನಿಸಿದ್ದು, ಬರೋಬ್ಬರಿ 1 ಗಂಟೆಗಳ ಕಾಲ ತಡೆ ನಿಲ್ಲಿಸಿದ್ದಾನೆ. ವಿಜಯಪುರ (Vijayapura) ಹೊರವಲಯದಲ್ಲಿರುವ ಟೋಲ್ ನಲ್ಲಿ ಈ ಘಟನೆ ನಡೆದಿದೆ. ನಾಳೆ‌ ಕೆಡಿಪಿ ಸಭೆ ಹಿನ್ನೆಲೆಯಲ್ಲಿ ಕೇಶವಪ್ರಸಾದ್ ಅವರು ಇಂದು (ಡಿಸೆಂಬರ್ 21) ವಿಜಯಪುರಕ್ಕೆ ಹೊರಟ್ಟಿದ್ದರು. ಮಾರ್ಗಮಧ್ಯೆ ಟೋಲ್ ಸಿಬ್ಬಂದಿ ಕಾರು ಬಿಡದೇ ನಿಲ್ಲಿಸಿದ್ದಾನೆ. ನೀವು ಎಂಎಲ್​​ಸಿ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದಾನೆ. ಇದನ್ನು ಕಾರು ಚಾಲಕ ವಿಡಿಯೋ ವಿಡಿಯೋ ಮಾಡಲು ಮುಂದಾಗಿದ್ದ ವೇಳೆ ಮೊಬೈಲ್ ಕಿತ್ತುಕೊಂಡಿದ್ದಾನೆ. ಇದರಿಂದ ಕೆಂಡಾಮಂಡಲರಾದ ಕೇಶವ ಪ್ರಸಾದ್ ಕೂಡಲೇ ವಿಜಯಪುರ ಎಸ್ಪಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಸಿಪಿಐ, ಡಿವೈಎಸ್​ಪಿ ದೌಡಾಯಿಸಿದ್ದಾರೆ. ಆಗ ಟೋಲ್ ಸಿಬ್ಬಂದಿ ಕೇಶವ ಪ್ರಸಾದ್ ಅವರ ಕಾರು ಬಿಟ್ಟಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ