ಒಂದಡಿ ನೀರಲ್ಲಿ ಸಾಯೋಕಾಗುತ್ತಾ? ಬಿಎಸ್​ವೈ ಪತ್ನಿ ಸಾವಿನ ಬಗ್ಗೆ ಹೆಚ್​ಡಿಕೆ ಪ್ರಶ್ನೆ

|

Updated on: Sep 20, 2019 | 5:10 PM

ರಾಮನಗರ: ಬೆಳಗ್ಗೆಯಷ್ಟೇ ಸಿಎಂ ಬಿಎಸ್​ ಯಡಿಯೂರಪ್ಪ ಮೇಲೆ ಟ್ವಿಟ್ಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಇದೀಗ ರಾಮನಗರದಲ್ಲಿ ಬಿಎಸ್​ವೈ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದಾರೆ. ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಕೆಲ ಘಟನೆಗಳನ್ನು ಹೇಳಿ ಬಿಎಸ್​ವೈ ವಿರುದ್ಧ ಹೆಚ್​ಡಿಕೆ ವಾಗ್ದಾಳಿ ನಡೆಸಿದ್ದಾರೆ. ಒಂದಡಿ ನೀರಿನ ಟ್ಯಾಂಕ್​ನಲ್ಲಿ ಕಾಲು ಜಾರಿ ಬಿದ್ದು ಸಾಯಲು ಸಾಧ್ಯವೇ? ಆದ್ರೆ ಜನರು ಅದನ್ನೇ ಒಪ್ಪಿಕೊಂಡಿದ್ದಾರೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿ ಸಾವಿನ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಡಿಕೆಶಿ […]

ಒಂದಡಿ ನೀರಲ್ಲಿ ಸಾಯೋಕಾಗುತ್ತಾ? ಬಿಎಸ್​ವೈ ಪತ್ನಿ ಸಾವಿನ ಬಗ್ಗೆ ಹೆಚ್​ಡಿಕೆ ಪ್ರಶ್ನೆ
Follow us on

ರಾಮನಗರ: ಬೆಳಗ್ಗೆಯಷ್ಟೇ ಸಿಎಂ ಬಿಎಸ್​ ಯಡಿಯೂರಪ್ಪ ಮೇಲೆ ಟ್ವಿಟ್ಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಇದೀಗ ರಾಮನಗರದಲ್ಲಿ ಬಿಎಸ್​ವೈ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದಾರೆ. ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಕೆಲ ಘಟನೆಗಳನ್ನು ಹೇಳಿ ಬಿಎಸ್​ವೈ ವಿರುದ್ಧ ಹೆಚ್​ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಒಂದಡಿ ನೀರಿನ ಟ್ಯಾಂಕ್​ನಲ್ಲಿ ಕಾಲು ಜಾರಿ ಬಿದ್ದು ಸಾಯಲು ಸಾಧ್ಯವೇ? ಆದ್ರೆ ಜನರು ಅದನ್ನೇ ಒಪ್ಪಿಕೊಂಡಿದ್ದಾರೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿ ಸಾವಿನ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಡಿಕೆಶಿ ವಿರುದ್ಧ ಐಟಿಗೆ ಬಿಎಸ್​ವೈ ಲೆಟರ್​:
ಡಿ‌.ಕೆ.ಶಿವಕುಮಾರ್ ವಿರುದ್ಧ ಯಡಿಯೂರಪ್ಪನವರೇ ಐಟಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಗುಜರಾತ್ ಶಾಸಕರನ್ನು ಡಿಕೆಶಿ ರಕ್ಷಿಸಿದ್ದಕ್ಕೆ ಈ ಕೊಡುಗೆ ಕೊಟ್ಟಿದ್ದಾರೆ. ಇಂಧನ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ. ವಿದ್ಯುತ್ ಖರೀದಿ ಹಗರಣದಲ್ಲಿ ಲೂಟಿ ಮಾಡಿದ್ದಾರೆ ಹೀಗಾಗಿ ತನಿಖೆ ಮಾಡಿಸಿ ಎಂದು ಹೇಳಿದ್ದೆ. ಆದ್ರೆ, ಡಿ.ಕೆ.ಶಿವಕುಮಾರ್ ಸುಮ್ಮನಾದರು ಎಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನನಗೆ ಜಾತಿ ಮುಖ್ಯವಲ್ಲ:
ಇನ್ನು ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದವರು ಪ್ರತಿಭಟನೆ ನಡೆಸಿದ್ರು. ನಾನು ಱಲಿಗೆ ಹೋಗದಿದ್ದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಿದ್ದಾರೆ. ಇಲ್ಲಿ ಜಾತಿ ಮುಖ್ಯವಲ್ಲ ಎಂದರು.

ಇಡಿ & ಸಿಬಿಐ ತನಿಖೆಗೆ ಹೆದರಲ್ಲ:
ಇ.ಡಿ ಮತ್ತು ಸಿಬಿಐ ಸೇರಿದಂತೆ ನಾನು ಯಾವುದೇ ತನಿಖೆಗೆ ಹೆದರುವುದಿಲ್ಲ. ನಾನು ಯಾವುದೇ ಪಾಪದ ಹಣ ಸಂಪಾದನೆ ಮಾಡಿಲ್ಲ, ನಾಲ್ಕು ಜನಕ್ಕೆ ಒಳ್ಳೆಯದೇ ಮಾಡಿದ್ದೇನೆ. ರಾಜಕೀಯದಿಂದ ನಾನು ದೂರ ಹೋಗಬೇಕು ಅಂದುಕೊಂಡಿದ್ದೆ. ಹೀಗಾಗಿ ರಾಜಕೀಯದಿಂದ ನಾನು ಒಂದು ಕಾಲು ಹೊರಗಿಟ್ಟಿದ್ದೇನೆ. ರಾಜಕಾರಣ ಇರೋದೆ ಕಳ್ಳಕಾರರಿಗೆ ಮಾತ್ರ ಒಳ್ಳೆಯವರಿಗೆ ಅಲ್ಲ. ನಾನೇ ಸಿಎಂ ಆಗಿದ್ದರೆ ಅದರ ಕತೆಯೇ ಬೇರೆ ಇರುತಿತ್ತು, ಆದರೆ ಜನಕ್ಕೆ ನನ್ನ ಮೇಲೆ ನಂಬಿಕೆ ಇಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯಕ್ಕೆ ಮೋದಿ ಬಿಡಿಗಾಸೂ ಕೊಟ್ಟಿಲ್ಲ:
ಹಾಸನ, ಮಂಡ್ಯ, ರಾಮನಗರ ಜಿಲ್ಲೆಗೆ ಕೊಟ್ಟ ಅನುದಾನವನ್ನು ಕಡಿತ ಮಾಡಿದ್ದಾರೆ. ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸರಿಯಾಗಿ ಸ್ವಂದಿಸುತ್ತಿಲ್ಲ. ಈ ಬಗ್ಗೆ ಸಿಎಂ ‌ಯಡಿಯೂರಪ್ಪರನ್ನ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದರು ಉತ್ತರ ಕರ್ನಾಟಕದ ಕಡೆಗೆ ತಿರುಗಿಯೂ ನೋಡುವುದಿಲ್ಲ. ಇದುವರೆಗೂ ರಾಜ್ಯಕ್ಕೆ ಮೋದಿ  ಬಿಡಿಗಾಸುಕೊಟ್ಟಿಲ್ಲ. ಅವರ ಅಪ್ಪನ ಮನೆಯಿಂದ ಹಣ ಕೊಡುತ್ತಾರಾ? ಅವರೇನು ಧರ್ಮಕ್ಕೆ ಕೊಡುವುದಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ದೋಸ್ತಿ ಸರ್ಕಾರ ಬೀಳಲು ಯೋಗೇಶ್ವರ್ ಕಾರಣ:
ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿಯ ಯೋಗೇಶ್ವರ್ ಪ್ರಮುಖ ಪಾತ್ರ ವಹಿಸಿದ್ದಾರೆ. 20-30 ಕೋಟಿ ರೂ. ಖರ್ಚು ಮಾಡಿ ನನ್ನ ಸರ್ಕಾರ ಉರುಳಿಸಿದ್ದಾರೆ. ಇಲ್ಲಿನ ಬಗೀರಥ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಯಲಹಂಕ ತಹಶೀಲ್ದಾರ್​ ಒಂದು ಮುಕ್ಕಾಲು ಕೋಟಿ ರೂ. ಕೊಟ್ಟು ಪೋಸ್ಟಿಂಗ್ ತಗೊಂಡಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ದಂಗೆ ಏಳಬೇಕು ಅಂತ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Published On - 5:06 pm, Fri, 20 September 19