ಜಾತಿ ರಾಜಕೀಯ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ; ಹೆಚ್​ಡಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2021 | 5:35 PM

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಸಭಾಪತಿ ಸ್ಥಾನಕ್ಕಾಗಿ ಮೈತ್ರಿಯಾಗಿದ್ದೇವೆ. ಅದನ್ನ ಬಿಟ್ಟು ಬೇರೆ ರೀತಿ ಹೊಂದಾಣಿಕೆ ಇಲ್ಲ ಎಂದು ಹೆಚ್​ಡಿಕೆ ಹೇಳಿದರು.

ಜಾತಿ ರಾಜಕೀಯ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ; ಹೆಚ್​ಡಿಕೆ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (ಫೈಲ್ ಚಿತ್ರ)
Follow us on

ರಾಮನಗರ: ಪಂಚಮಸಾಲಿ ಸಮುದಾಯ ಹಾಗೂ ಕುರುಬರ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಜಾತಿ ರಾಜಕೀಯ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಧಾರ್ಮಿಕ ಗುರುಗಳೇ ಸಮಾಜದ ಪರವಾಗಿ ಹೋರಾಟಕ್ಕಿಳಿದಿದ್ದಾರೆ. ಹಾಗಾಗಿ ಇದು ದಾರಿ ತಪ್ಪುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕು. ಧಾರ್ಮಿಕ ಗುರುಗಳ ಭಾವನೆಗೂ ಸರ್ಕಾರ ಗೌರವ ಕೊಡಬೇಕು ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಭಾಪತಿ ಸ್ಥಾನಕ್ಕಾಗಿ ಮೈತ್ರಿಯಾಗಿದ್ದೇವೆ. ಅದನ್ನ ಬಿಟ್ಟು ಬೇರೆ ರೀತಿ ಹೊಂದಾಣಿಕೆ ಇಲ್ಲ. ವಿಷಯಾಧಾರಿತವಾಗಿ, ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿಯಾಗುತ್ತೇವೆ ಹೊರತು ಜನವಿರೋಧಿ ನೀತಿಗಳ ವಿರುದ್ಧ ಎಂದಿಗೂ ರಾಜೀ ಇಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಸಭೆ ಮಾಡಬೇಕಿತ್ತು
ರೈತರು ಕಳೆದ 70 ದಿನಕ್ಕೂ ಹೆಚ್ಚು ದಿನಗಳಿಂದ ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗೆ ರೈತರ ಬಗ್ಗೆ ಗೌರವ ಇದ್ದರೆ ಸಭೆ ಮಾಡಬೇಕಿತ್ತು. ಕೃಷಿ ಮಂತ್ರಿಯನ್ನ ಬಿಟ್ಟು ಸಭೆ ಮಾಡಿಸುವ ಬದಲು ಇವರೇ ಸಭೆ ಮಾಡಿ ಕಾಯ್ದೆಗಳಿಂದ ರೈತರಿಗೆ ಅನುಕೂಲ ಏನು ಎಂದು ತಿಳಿಸಲಿ ಎಂದು ಅಭಿಪ್ರಾಯಪಟ್ಟರು.

ಇಂಟರ್ನೆಟ್ ಬಂದ್ ವಿಚಾರದಲ್ಲಿ ಭಾರತಕ್ಕೆ ಅಗ್ರಸ್ಥಾನ; ಹೆಚ್.ಸಿ.ಮಹದೇವಪ್ಪ ಟೀಕೆ