ಕುಮಾರಸ್ವಾಮಿ ಹೆಲ್ತ್​ ಅಪ್​ಡೇಟ್​: ಮಾಜಿ ಮುಖ್ಯಮಂತ್ರಿ ಹೆಚ್​ಡಿಕೆಗೆ ಮಹತ್ವದ ಸಲಹೆಗಳನ್ನು ನೀಡಿದ ವೈದ್ಯರು

| Updated By: ರಮೇಶ್ ಬಿ. ಜವಳಗೇರಾ

Updated on: Sep 01, 2023 | 9:40 AM

HD Kumaraswamy health Update : ಹೆಚ್​​.ಡಿ.ಕುಮಾರಸ್ವಾಮಿ ಅವರಿಗೆ ಆಗಸ್ಟ್ 30 ನಸುಕಿನ ಜಾವ ಮೈಲ್ಡ್ ಸ್ಟ್ರೋಕ್ ಆಟ್ಯಾಕ್ ಆಗಿದ್ದು, ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇನ್ನು 2 ದಿನ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯಲಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಕುಮಾರಸ್ವಾಮಿ ಅವರಿಗೆ ವೈದ್ಯರು ಕೆಲ ಸಲಹೆಗಳನ್ನು ನೀಡಿದ್ದಾರೆ.

ಕುಮಾರಸ್ವಾಮಿ ಹೆಲ್ತ್​ ಅಪ್​ಡೇಟ್​: ಮಾಜಿ ಮುಖ್ಯಮಂತ್ರಿ ಹೆಚ್​ಡಿಕೆಗೆ ಮಹತ್ವದ ಸಲಹೆಗಳನ್ನು ನೀಡಿದ ವೈದ್ಯರು
ಹೆಚ್​ಡಿ ಕುಮಾರಸ್ವಾಮಿ
Image Credit source: PTI
Follow us on

ಬೆಂಗಳೂರು, (ಸೆಪ್ಟೆಂಬರ್ 01):  ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ (HD Kumaraswamy) ಆರೋಗ್ಯದಲ್ಲಿ (Health) ಚೇತರಿಕೆ ಕಂಡಿದ್ದು ಐಸಿಯುನಿಂದ ಜನರಲ್ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ, ಇನ್ನೂ 2 ದಿನ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯಲಿದೆ ಎನ್ನಲಾಗಿದೆ. ವಿಶೇಷ ವಾರ್ಡ್​ನಲ್ಲಿ ನುರಿತ ವೈದ್ಯರಿಂದ ಕುಮಾರಸ್ವಾಮಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಯಾರನ್ನು ಭೇಟಿ ಮಾಡದಂತೆ ಸಲಹೆ ನೀಡಿದ್ದಾರೆ. ಮೂರು ವಾರ ಯಾವುದೇ ಸ್ಟ್ರೆಸ್ ತೆಗೆದುಕೊಳ್ಳಬಾರದು, ಪ್ರವಾಸ ಮಾಡದೇ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಆಗಸ್ಟ್ 30 ನಸುಕಿನ ಜಾವ ಮಾಜಿ ಸಿಎಂ ಕುಮಾರಸ್ವಾಮಿಗೆ ಮೈಲ್ಡ್ ಸ್ಟ್ರೋಕ್ ಆಟ್ಯಾಕ್ ಆಗಿತ್ತು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಹೀಗಾಗಿ ನಿನ್ನೆ (ಆಗಸ್ಟ್ 31) ಐಸಿಯುನಿಂದ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಚಿಕಿತ್ಸೆಗೆ ಕುಮಾರಸ್ವಾಮಿ ಸ್ಪಂದಿಸುತ್ತಿದ್ದಾರೆ. ಹೀಗಾಗಿ ಯಾರು ಆತಂಕ ಪಎಉವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ್ರು.

ಇದನ್ನೂ ಓದಿ: ಆಸ್ಪತ್ರೆಗೆ ತೆರಳಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ; ರಾಜಕೀಯ-ವೈಯಕ್ತಿಕ ಬಾಂಧವ್ಯ ಬೇರೆ ಬೇರೆ ಅಂತ ಪುನಃ ಪ್ರೂವ್ ಮಾಡಿದ ಮುಖ್ಯಮಂತ್ರಿ!

ಪುತ್ರ ನಿಖಿಲ್​ ಕುಮಾರಸ್ವಾಮಿ, ಚೆನ್ನಮ್ಮ, ಅನಿತಾ ಕುಮಾರಸ್ವಾಮಿ, ರೇವತಿ ನಿಖಿಲ್ ಸೇರಿದಂತೆ ಮಾಜಿ ಹಾಲಿ‌ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ್ದಾರೆ. ಮಗನ ಆರೋಗ್ಯ ಸರಿಯಾಗಲು ವಿಶೇಷ ಪೂಜೆ ಮಾಡಿಸಿ ತಾಯಿ ಚನ್ನಮ್ಮ ಪ್ರಸಾದವನ್ನು ಮಗನಿಗೆ ಆಸ್ಪತ್ರೆಯಲ್ಲಿ ಕೊಟ್ಟಿದ್ದಾರೆ. ಮತ್ತೊಂದೆಡೆ ಕುಮಾರಸ್ವಾಮಿ ಶೀಘ್ರವೇ ಗುಣಮುಖರಾಗಲಿ ಎಂದು ಅಭಿಮಾನಿಗಳು ಪೂಜೆ ಮಾಡಿಸಿದ್ದಾರೆ.

ನಿಮ್ಮ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:38 am, Fri, 1 September 23