ಚಿನಕಾಳ ಗ್ರಾ ಪಂ‌ ಅಧ್ಯಕ್ಷೆಯ ಗಂಡನ ಅಂಧಾ ದರ್ಬಾರ್, ಊರಿನ ಸಿಸಿಟಿವಿ ದೃಶ್ಯಾವಳಿಯೆಲ್ಲ ಈತನ ಮೊಬೈಲಿಗೇ ಲಿಂಕ್​! ಗ್ರಾಮಸ್ಥರು ಚಿಂತಾಕ್ರಾಂತ

ಚಿನಕಾಳ ಊರಿನಲ್ಲಿ ಏನೇ ನಡೆಯಲಿ ಅದಷ್ಟೂ ಗ್ರಾ ಪಂ ಅಧ್ಯಕ್ಷೆಯ ಪತಿ‌ ತಿಪ್ಪಣ್ಣವರ ಖರ್ಚು ಮಾಡಿಸಿ ಹಾಕಿಸಿರುವ ಸಿಸಿ ಕ್ಯಾಮೆರಾಗಳ ಮೂಲಕ ಆತನ ಮೊಬೈಲಿಗೆ ಹೋಗಿ ಬೀಳುತ್ತಿದೆ! ಈತ ತನ್ನ ಮೊಬೈಲ್ ಗೆ ಲಿಂಕ್‌ ಮಾಡಿಸಿಕೊಂಡು ಒಣ ಕಾರುಬಾರು ನಡೆಸುತ್ತಿರುವುದು ಊರಿನ ದೌರ್ಭಾಗ್ಯವೇ ಸರಿ. ಇನ್ನು ಗ್ರಾ ಪಂ ನಲ್ಲಿರುವ ಸಿಸಿ ಕ್ಯಾಮೆರಾ ಫೀಡ್​​ ಕೂಡ ಆತನ ಮೊಬೈಲಿಗೆ ಲಿಂಕ್‌ ಮಾಡಿಸಿಕೊಂಡಿದ್ದಾನೆ.

ಚಿನಕಾಳ ಗ್ರಾ ಪಂ‌ ಅಧ್ಯಕ್ಷೆಯ ಗಂಡನ ಅಂಧಾ ದರ್ಬಾರ್, ಊರಿನ ಸಿಸಿಟಿವಿ ದೃಶ್ಯಾವಳಿಯೆಲ್ಲ ಈತನ ಮೊಬೈಲಿಗೇ ಲಿಂಕ್​! ಗ್ರಾಮಸ್ಥರು ಚಿಂತಾಕ್ರಾಂತ
ಚಿನಕಾಳ ಗ್ರಾ ಪಂ‌ ಅಧ್ಯಕ್ಷೆಯ ಗಂಡನ ಅಂಧಾ ದರ್ಬಾರ್
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on:Sep 01, 2023 | 5:01 PM

ಬಾಗಲಕೋಟೆ, ಸೆಪ್ಟೆಂಬರ್​ 1: ಬಾಗಲಕೋಟೆ (Bagalkote) ಜಿಲ್ಲೆ ಇಳಕಲ್ ತಾಲ್ಲೂಕಿನ ಚಿನಕಾಳ ಗ್ರಾಮ ಪಂಚಾಯಿತಿ (Chinakala Gram Panchayat) ಇತರೆ ಗ್ರಾ. ಪಂ‌. ಗಳಂತೆ ಅಲ್ಲ. ಇಲ್ಲಿ ಮಹಿಳೆಯೊಬ್ಬರು ಗ್ರಾ ಪಂ ಅಧ್ಯಕ್ಷೆಯಾಗಿದ್ದು, ಅವರ ಗಂಡನ ಕೈಯಲ್ಲಿ ಇಡೀ ಪಂಚಾಯಿತಿಯ ರಿಮೋಟ್ ಕಂಟ್ರೋಲ್ ಸ್ಥಾಪಿತವಾಗಿದೆ. ಗ್ರಾ ಪಂ‌ ಅಧ್ಯಕ್ಷೆಯ ಗಂಡನ (Husband) ಅಂಧಾ ದರ್ಬಾರ್ ಯಾವುದೇ ಎಗ್ಗುಸಿಗ್ಗು ಇಲ್ಲದೆ ಢಾಳಾಗಿ ನಡೆದಿದೆ. ಈತ ಪ್ರಸ್ತುತ ಏನು ಮಾಡಿದ್ದಾನೆ ಅಂದರೆ ಇಡೀ ಊರಿನ ತುಂಬೆಲ್ಲಾ ಸಾವಿರಾರು ರೂ ಖರ್ಚು‌ ಮಾಡಿ 6 ಸಿಸಿಟಿವಿ ಕ್ಯಾಮೆರಾ (CCTV footage) ಅಳವಡಿಸಿದ್ದಾನೆ. ಇದಕ್ಕೆ ಆತ ಸ್ವಂತ ಹಣವನ್ನೇ ಬಳಸಿದ್ದಾನೆ. ಆದರೆ ಇದು ಅಷ್ಟಕ್ಕೇ ನಿಂತಿಲ್ಲ. ಹಣ ತಾನು ಖರ್ಚು ಮಾಡಿರುವುದಾಗಿ ಹೇಳಿ ಈತ ಅಷ್ಟೂ ಕ್ಯಾಮರಾ ವಿಡಿಯೋ ಫೀಡ್​​ ಅನ್ನು ತನ್ನ ಮೊಬೈಲಿಗೆ ಬರುವಂತೆ ಲಿಂಕ್ ಮಾಡಿಕೊಂಡಿದ್ದಾನೆ.

ಊರಿನಲ್ಲಿ ಏನೇ ನಡೆಯಲಿ ಅದಷ್ಟೂ ಈತನೇ ಖರ್ಚು ಮಾಡಿ, ಹಾಕಿಸಿರುವ ಸಿಸಿ ಕ್ಯಾಮೆರಾಗಳ ಮೂಲಕ ಆತನ ಮೊಬೈಲಿಗೆ ಹೋಗಿ ಬೀಳುತ್ತಿದೆ! ಈತ ತನ್ನ ಮೊಬೈಲ್ ಗೆ ಲಿಂಕ್‌ ಮಾಡಿಸಿಕೊಂಡು ಒಣ ಕಾರುಬಾರು ನಡೆಸುತ್ತಿರುವುದು ಊರಿನ ದೌರ್ಭಾಗ್ಯವೇ ಸರಿ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಸದರಿ ಅಧ್ಯಕ್ಷೆಯ ಪತಿರಾಯ ಗ್ರಾ ಪಂ ನಲ್ಲಿರುವ ಸಿಸಿ ಕ್ಯಾಮೆರಾ ಫೀಡ್​​ ಕೂಡ ತನ್ನ ಮೊಬೈಲಿಗೆ ಲಿಂಕ್‌ ಮಾಡಿಸಿಕೊಂಡಿದ್ದಾನೆ.

ಇದನ್ನೂ ಓದಿ: ಒಬಾಮಾ- ದಲೈಲಾಮಾ ಡಿಸೆಂಬರ್​ನಲ್ಲಿ ಹಲ್ಲೆಗೆರೆ ಭೂತಾಯಿ ಟ್ರಸ್ಟ್ ಅಂತಾರಾಷ್ಟ್ರೀಯ ಯೋಗ ಕೇಂದ್ರಕ್ಕೆ ಭೇಟಿ

ಮೊಬೈಲ್ ಲಿಂಕ್‌ ಮೂಲಕ‌ ಪಂಚಾಯಿತಿಗೆ ಯಾರು ಬಂದರು, ಯಾರು ಹೋದರು, ಯಾಕೆ‌ ಬಂದರು ಎಂದೆಲ್ಲ ಗ್ರಾ ಪಂ ಸಿಬ್ಬಂದಿಗೆ ಹತ್ತಾರು ಪ್ರಶ್ನೆ ಹಾಕಿ ತಲೆ ತಿನ್ನುತ್ತಿದ್ದಾನೆ. ರತ್ನವ್ವ ತಿಪ್ಪಣ್ಣವರ ಚಿಕನಾಳ ಗ್ರಾಪಂ ಅಧ್ಯಕ್ಷೆಯ ಪತಿ‌ ತಿಪ್ಪಣ್ಣ‌ ತಿಪ್ಪಣ್ಣವರ ಅಂಧಾ ದರ್ಬಾರ್ ಸದ್ಯಕ್ಕೆ ಹೀಗೆ ಸಾಗಿದೆ. ಊರಿನ ಮರ್ಯಾದೆ ಬೀದಿಗೆ ಬಿದ್ದಿದೆ. ಅಧ್ಯಕ್ಷೆಯ ಪತಿ ಆಟಕ್ಕೆ ಸಹ ಸದಸ್ಯರು ಹಾಗೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ನಿ ಹೆಸರಿಗೆ ಮಾತ್ರ ಅಧ್ಯಕ್ಷೆಯಾಗಿದ್ದರೆ, ಪತಿ ತಿಪ್ಪಣ್ಣನದ್ದೇ ಆಡಳಿತ‌ ನಡೆದಿರುವುದು ಎಂದು ಗ್ರಾಮಸ್ಥರು ಚಿಂತಾಕ್ರಾಂತರಾಗಿದ್ದಾರೆ.

ನನ್ನ ಪತಿ ನನ್ನ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ- ಟಿವಿ 9ಗೆ ಗ್ರಾ ಪಂ ಅಧ್ಯಕ್ಷೆ ಸ್ಪಷ್ಟನೆ

ಚಿಕನಾಳ ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷೆಯ ಪತಿ ಸಿಸಿ ಕ್ಯಾಮೆರಾ ಅಳವಡಿಕೆ ಪ್ರಕರಣದಲ್ಲಿ ಟಿವಿ 9ಗೆ ಗ್ರಾ ಪಂ ಅಧ್ಯಕ್ಷೆ ಸ್ಪಷ್ಟನೆ ನೀಡಿದ್ದಾರೆ. ಸುಮ್ಮನೆ ನಮಗೆ ಆಗದವರು ಇಂತಹ ಸುದ್ದಿ ಹಬ್ಬಿಸಿದ್ದಾರೆ ಎಂದ ಪತಿ ತಿಪ್ಪಣ್ಣ ತಿಪ್ಪಣ್ಣವರ ಸ್ಪಷ್ಟನೆ ನೀಡಿದ್ದಾರೆ. ಊರಲ್ಲಿ ಇತ್ತೀಚೆಗೆ ಕುರಿಗಳ ಕಳ್ಳತನ ನಡೆದಿತ್ತು. ಊರ ದೇವಸ್ಥಾನ ಬಳಿ ಕೆಲವರು ಇಸ್ಪೀಟ್ ಆಟ ಆಡುತ್ತಿದ್ದರು. ಗ್ರಾ ಪಂ ಸಿಬ್ಬಂದಿ ಪಂಚಾಯಿತಿಗೆ ತಡವಾಗಿ ಬರುತ್ತಿದ್ದರು. ಇದೆಲ್ಲ ತಡೆಯೋದಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದ್ದೇವೆ. ಅದರ ದೃಶ್ಯಾವಳಿ ಆನ್ ಲೈನ್ ಲಿಂಕ್ ಚೆಕ್‌ ಮಾಡೋದಕ್ಕೆ ಅಂತ‌‌ ಕೆಲ ದಿನ ಮೋಬೈಲ್ ನಲ್ಲಿ ಇಟ್ಟುಕೊಂಡಿದ್ದೆವು. ಅದನ್ನು ಈಗ ತೆಗೆಯಲಾಗಿದೆ. ಊರ ಒಳಿತಿಗಾಗಿ ೨೩ ಸಾವಿರ ರೂ ಖರ್ಚು ಮಾಡಿ ಸಿಸಿ ಕ್ಯಾಮೆರಾ ಹಾಕಲಾಗಿದೆ. ಹಾಕಿದ ಮೇಲೆ ಕಳ್ಳತನ ಹಾಗೂ ಇಸ್ಪೀಟ್ ಆಟ ಆಡೋದು ಬಂದ್ ಆಗಿದೆ. ನನ್ನ ಪತಿ ನನ್ನ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ನಾನು ಸಾಮಾಜಿಕ ಕಾರ್ಯದ ಒಂದು ಭಾಗವಾಗಿ ಸಿಸಿ‌ ಕ್ಯಾಮೆರಾ ಅಳವಡಿಸಿದ್ದೇನೆ. ಇದರಲ್ಲಿ ಬೇರೆ ಯಾವ ಉದ್ದೇಶವಿಲ್ಲ ಎಂದ ಅಧ್ಯಕ್ಷೆ ರತ್ನಾ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

Published On - 9:51 am, Fri, 1 September 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ