ಒಬಾಮಾ- ದಲೈಲಾಮಾ ಡಿಸೆಂಬರ್ನಲ್ಲಿ ಹಲ್ಲೆಗೆರೆ ಭೂತಾಯಿ ಟ್ರಸ್ಟ್ ಅಂತಾರಾಷ್ಟ್ರೀಯ ಯೋಗ ಕೇಂದ್ರಕ್ಕೆ ಭೇಟಿ
Barack Obama And Dalai Lama To Visit Mandya: ಡಿಸೆಂಬರ್ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಟಿಬೆಟಿಯನ್ ಧರ್ಮಗುರು ದಲೈಲಾಮಾ ಮಂಡ್ಯಕ್ಕೆ ಭೇಟಿ ಕೊಡ್ತಿದ್ದಾರೆ.. ಎಲ್ಲಿಯ ಮಂಡ್ಯ.. ಎಲ್ಲಿಯ ಅಮೆರಿಕ.. ಇಷ್ಟಕ್ಕೂ ಒಬಾಮಾ ಸಕ್ಕರೆನಾಡಿಗೆ ಬರ್ತಿರೋದು ಏಕೆ.. ಇಲ್ಲಿದೆ ಡಿಟೇಲ್ಸ್..
ಡಿಸೆಂಬರ್ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಟಿಬೆಟಿಯನ್ ಧರ್ಮಗುರು ದಲೈಲಾಮಾ ಮಂಡ್ಯಕ್ಕೆ ಭೇಟಿ ಕೊಡ್ತಿದ್ದಾರೆ.. ಎಲ್ಲಿಯ ಮಂಡ್ಯ.. ಎಲ್ಲಿಯ ಅಮೆರಿಕ.. ಇಷ್ಟಕ್ಕೂ ಒಬಾಮಾ ಸಕ್ಕರೆನಾಡಿಗೆ ಬರ್ತಿರೋದು ಏಕೆ.. ಇಲ್ಲಿದೆ ಡಿಟೇಲ್ಸ್.. ಮಂಡ್ಯದ ಹಲ್ಲೆಗೆರೆಯ (Mandya) ಭೂತಾಯಿ ಟ್ರಸ್ಟ್ ವತಿಯಿಂದ ಹಲ್ಲೆಗೆರೆಯಲ್ಲಿ ನಿರ್ಮಿಸಲಾಗುತ್ತಿರುವ ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರ (International Yoga And Meditation Centre) ಶಂಕುಸ್ಥಾಪನೆಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ (Barack Obama) ದಂಪತಿ, ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಡಿಸೆಂಬರ್ ತಿಂಗಳಲ್ಲಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಅಧ್ಯಕ್ಷರಾಗಿರುವ ಅಮೆರಿಕದ ವೈದ್ಯ ಡಾ. ಲಕ್ಷ್ಮಿನರಸಿಂಹ ಮೂರ್ತಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಶಾಸಕರಾದ ರವಿಕುಮಾರ್ ಗಣಿಗ, ಬಾಬು ಬಂಡಿಸಿದ್ದೇಗೌಡ ನೇತೃತ್ವದ ನಿಯೋಗವು ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published on: Sep 01, 2023 09:10 AM
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ್ಯಾಪಿಡೋ ಆ್ಯಪ್ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
