‘ಲಾಕ್‌ಡೌನ್ ಮುಗಿದ ತಕ್ಷಣ ಆರ್ಥಿಕ ಸ್ಥಿತಿ ಯಥಾಸ್ಥಿತಿಗೆ ಬರಲ್ಲ, ವರ್ಷಗಳೇ ಬೇಕು’

‘ಲಾಕ್‌ಡೌನ್ ಮುಗಿದ ತಕ್ಷಣ ಆರ್ಥಿಕ ಸ್ಥಿತಿ ಯಥಾಸ್ಥಿತಿಗೆ ಬರಲ್ಲ, ವರ್ಷಗಳೇ ಬೇಕು’

ಬೆಂಗಳೂರು: ಲಾಕ್‌ಡೌನ್ ಬಳಿಕ ತಕ್ಷಣ ಆರ್ಥಿಕ ಸ್ಥಿತಿ ಯಥಾಸ್ಥಿತಿಗೆ ಬರಲ್ಲ, ಹಿಂದಿನ ಸ್ಥಿತಿಗೆ ಬರುವುದಕ್ಕೆ ವರ್ಷಗಳೇ ಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಹೇಳಿದ್ದಾರೆ.

ಜಿಡಿಪಿ ಬೆಳವಣಿಗೆ ತೀವ್ರ ಕುಸಿತದ ಬಗ್ಗೆ ಮುನ್ನೆಚ್ಚರಿಕೆ ನೀಡಿವೆ. ಆರ್‌ಬಿಐ ಸೇರಿದಂತೆ ಅನೇಕ ಸಂಸ್ಥೆಗಳಿಂದ ಮುನ್ಸೂಚನೆ ಇದೆ. ಹೀಗಾಗಿ ಸರ್ಕಾರಗಳು ಮಾರ್ಗೋಪಾಯ ಹುಡುಕಬೇಕು ಎಂದೂ ಅವರು ಹೇಳಿದ್ದಾರೆ.

ಇದರಿಂದ ಹೊರಬರಲು ಜನರ ಬಳಿ ಹಣ ಉಳಿಸುವ ಮಾರ್ಗೋಪಾಯ ಹುಡುಕಲಿ. ಕಾಸ್ಟ್ ಆಫ್ ಲಿವಿಂಗ್ ಕಡಿಮೆ ಮಾಡಲು ಆದ್ಯತೆ ನೀಡಲಿ ಎಂದು ಅವರು ಆಗ್ರಹಿಸಿದ್ದಾರೆ.

ಇದರಿಂದ ಸುಧಾರಿಸಿಕೊಳ್ಳಲು ಜನರಿಗೆ ಬಾಡಿಗೆ ವಿನಾಯಿತಿ ಕಲ್ಪಿಸಬೇಕು. ಶಾಲಾ-ಕಾಲೇಜುಗಳ ಪ್ರವೇಶ ಶುಲ್ಕ ಕಡಿಮೆ ಮಾಡಬೇಕು. ಪೆಟ್ರೋಲ್, ಡೀಸೆಲ್ ದರ ಕಡಿತ ಮಾಡುವುದು ಸೂಕ್ತ. ವಿದ್ಯುತ್ ಬಿಲ್ ಕಡಿತ ಮಾಡುವ ಬಗ್ಗೆ ಘೋಷಿಸಬೇಕು ಎಂದಿದ್ದಾರೆ.

ರೈತರು, ಅಸಂಘಟಿತ ವಲಯದ ಕಾರ್ಮಿಕರ ರಕ್ಷಣೆಗೆ ಆದ್ಯತೆ. ಟ್ಯಾಕ್ಸಿ, ಆಟೋ ಚಾಲಕರು, ಗಾರ್ಮೆಂಟ್ಸ್ ಕೆಲಸಗಾರರು, ಕಟ್ಟಡ ಕಾರ್ಮಿಕರಿಗೆ ಸರ್ಕಾರ ಹೆಚ್ಚು ಪರಿಹಾರ ನೀಡಬೇಕು. ಕುಬೇರ ಉದ್ಯೋಗಪತಿಗಳಿಂದ ಕೊರೊನಾ ತೆರಿಗೆ ಸಂಗ್ರಹಿಸಲಿ ಎಂದೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.

Published On - 11:27 am, Mon, 27 April 20

Click on your DTH Provider to Add TV9 Kannada