ಜನ್ಮ ದಿನದಂದೇ ಕ್ವಾರಂಟೈನ್ನಲ್ಲಿದ್ದ ವೃದ್ಧ ಹೃದಯಾಘಾತಕ್ಕೆ ಬಲಿ
ಬೆಂಗಳೂರು: ಹುಟ್ಟಹಬ್ಬದ ದಿನವೇ ಕ್ವಾರಂಟೈನ್ನಲ್ಲಿದ್ದ ವೃದ್ಧ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ವಿಜಯನಗರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಗಾಯತ್ರಿ ನಗರದ ನಿರಾಶ್ರಿತರಾಗಿದ್ದ 68 ವರ್ಷದ ವೃದ್ಧ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸಾವಿಗೂ ಮುನ್ನ ಬೆಳಗ್ಗೆ ಕೇಂದ್ರದ ವಾರ್ಡನ್ಗೆ ಇಂದು ನನ್ನ ಹುಟ್ಟಿದ ಹಬ್ಬವಿದೆ ಪೂರಿ ಮಾಡಿಕೊಡಿ ಎಂದು ಅವರು ಕೇಳಿಕೊಂಡಿದ್ದರು. ನಂತರ ಸಂಜೆ ಕೇಕ್ ಕತ್ತರಿಸಿ ಎಲ್ಲರಿಗೂ ಕೇಕ್ ಕೊಡುವುದಾಗಿ ಹೇಳಿದ್ದರು. ಆದರೆ ಹೇಳಿದ ಕೆಲವೇ ಗಂಟೆಗಳಲ್ಲಿ ಅಸುನೀಗಿದ್ದಾರೆ. ಕ್ವಾರಂಟೈನ್ನಲ್ಲೇ ಅನಾಥವಾಗಿ ಬಿದ್ದಿರುವ […]
ಬೆಂಗಳೂರು: ಹುಟ್ಟಹಬ್ಬದ ದಿನವೇ ಕ್ವಾರಂಟೈನ್ನಲ್ಲಿದ್ದ ವೃದ್ಧ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ವಿಜಯನಗರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಗಾಯತ್ರಿ ನಗರದ ನಿರಾಶ್ರಿತರಾಗಿದ್ದ 68 ವರ್ಷದ ವೃದ್ಧ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಸಾವಿಗೂ ಮುನ್ನ ಬೆಳಗ್ಗೆ ಕೇಂದ್ರದ ವಾರ್ಡನ್ಗೆ ಇಂದು ನನ್ನ ಹುಟ್ಟಿದ ಹಬ್ಬವಿದೆ ಪೂರಿ ಮಾಡಿಕೊಡಿ ಎಂದು ಅವರು ಕೇಳಿಕೊಂಡಿದ್ದರು. ನಂತರ ಸಂಜೆ ಕೇಕ್ ಕತ್ತರಿಸಿ ಎಲ್ಲರಿಗೂ ಕೇಕ್ ಕೊಡುವುದಾಗಿ ಹೇಳಿದ್ದರು. ಆದರೆ ಹೇಳಿದ ಕೆಲವೇ ಗಂಟೆಗಳಲ್ಲಿ ಅಸುನೀಗಿದ್ದಾರೆ.
ಕ್ವಾರಂಟೈನ್ನಲ್ಲೇ ಅನಾಥವಾಗಿ ಬಿದ್ದಿರುವ ಮೃತದೇಹ: ಹೃದಯಾಘಾತದಿಂದ ಮೃತಪಟ್ಟ ವೃದ್ಧನ ಮೃತದೇಹ ಕ್ವಾರಂಟೈನ್ ಕೇಂದ್ರದಲ್ಲೇ ಅನಾಥವಾಗಿ ಬಿದ್ದಿದೆ. ಮೃತದೇಹವನ್ನು ಈವರೆಗೆ ಯಾರು ತೆಗೆದುಕೊಂಡು ಹೋಗಿಲ್ಲ. ಇನ್ನೂ ಸ್ಥಳಕ್ಕೆ ಪೊಲೀಸರು, ಅಧಿಕಾರಿಗಳು ಭೇಟಿ ನೀಡಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿ ಸುಮಾರು 30ರಿಂದ 40 ಜನರಿದ್ದಾರೆ. 2 ಗಂಟೆಗಳಿಂದ ಅಧಿಕಾರಿಗಳಿಗೆ ಕಾಲ್ ಮಾಡಿದ್ರೂ ಪ್ರತಿಕ್ರಿಯಿಸುತ್ತಿಲ್ಲ.
Published On - 12:29 pm, Mon, 27 April 20