ಹಾಸನ: ಇಂದು ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಹೆಚ್.ಡಿ.ರೇವಣ್ಣ ಹಾಲು ಉತ್ಪಾದನೆಯಿಂದ ಬಂದ ಲಾಭದ ಕುರಿತು ಮಾತನಾಡಿದ್ದಾರೆ.
2019-20 ರ ಸೆಪ್ಟೆಂಬರ್ ವರೆಗೆ 40 ಕೋಟಿ ರೂಪಾಯಿ ಲಾಭಗಳಿಸಿದೆ. ಲಾಭವನ್ನು ರೈತರಿಗೆ ನೀಡುತ್ತೇವೆ. ರೈತರಿಗೆ ನೀಡುತ್ತಿದ್ದ ಪ್ರತೀ ಲೀಟರ್ ದರದಲ್ಲಿ ಒಂದು ರೂಪಾಯಿ ಏರಿಕೆ ಮಾಡುತ್ತೇವೆ. ಅಲ್ಲದೆ 504 ಕೋಟಿ ವೆಚ್ಚದಲ್ಲಿ ನೂತನ ಡೈರಿ, ಹಾಗೂ ಹಾಲಿನ ಪುಡಿ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಾಸನ ಹಾಲು ಒಕ್ಕೂಟ ಅಧ್ಯಕ್ಷ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
Published On - 3:16 pm, Sat, 26 October 19