ಹೆಚ್ ಡಿ ರೇವಣ್ಣ ಹೇಳಿದ್ದನ್ನು ತಿಳಿಸಿದಾಗ ನಿಖಿಲ್ ದೊಡ್ಡಪ್ಪನ ಹೆಸರು ಹೇಳದೆ ಪ್ರತಿಕ್ರಿಯೆ ನೀಡಿದರು!

ಅರುಣ್​ ಕುಮಾರ್​ ಬೆಳ್ಳಿ Edited By:

Updated on: Dec 01, 2024 | 3:32 PM

ರಾಮನಗರ ಜಿಲ್ಲೆಯ ಜನ ತಮ್ಮ ಕುಟುಂಬಕ್ಕೆ ಸಾಕಷ್ಟು ಪ್ರೀತಿ ಮತ್ತು ವಿಶ್ವಾಸ ತೋರಿದ್ದಾರೆ, 8ಬಾರಿ ಶಾಸಕ ಮತ್ತು 3 ಬಾರಿ ಸಂಸದನಾಗಿ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದಾರೆ, ಅದಕ್ಕೆ ಅನುಗುಣವಾಗಿ ತಮ್ಮ ಕುಟುಂಬ ರಾಮನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದೆ, ಚನ್ನಪಟ್ಟಣದ ಜನತೆ ಈ ಸಲ ನೀಡಿರುವ ಆದೇಶವನ್ನು ಶಿರಸಾವಹಿಸಿ ಪಾಲಿಸುತ್ತೇವೆ ಎಂದು ನಿಖಿಲ್ ಹೇಳಿದರು.

ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿ ಕುಟುಂಬದಲ್ಲಿ ಹೆಚ್ ಡಿ ರೇವಣ್ಣ ಈಗಲೂ ಅನಪೇಕ್ಷಿತ ವ್ಯಕ್ತಿಯೇ? ನಿಖಿಲ್ ಕುಮಾರಸ್ವಾಮಿಯ ಮಾತುಗಳನ್ನು ಕೇಳುತ್ತಿದ್ದರೆ ಹಾಗನ್ನಿಸದರದು. ಈ ಬಾರಿ ಸೋತರೂ ಚಿಂತೆಯಿಲ್ಲ, ರಾಮನಗರ ಜಿಲ್ಲೆಯಿಂದ ಮುಂದೆ ಗೆದ್ದೇಗೆಲ್ಲುತ್ತಾನೆ ಎಂದು ರೇವಣ್ಣ ಹೇಳಿರುವುದನ್ನು ನಿಖಿಲ್ ಗಮನಕ್ಕೆ ತಂದಾಗ, ಅವರು ತಮ್ಮ ದೊಡ್ಡಪ್ಪನ ಹೆಸರನ್ನು ಉಲ್ಲೇಖಿಸದೆ ಮಾತಾಡುತ್ತಾರೆ ಮತ್ತು ವಿಷಯಾಂತರ ಮಾಡುತ್ತಾರೆ. ಪಕ್ಷ ಸ್ಥಾಪನೆಯಾದ ಸಮಯದಿಂದ ಅಸೆಂಬ್ಲಿ ಚುನಾವಣೆಯಲ್ಲಿ 58 ಸ್ಥಾನಗಳನ್ನು ಗೆದ್ದಿರುವುದು ಒಂದು ದಾಖಲೆಯಾಗಿ ಇತಿಹಾಸ ಪುಟ ಸೇರಿದೆ, ಆ ದಾಖಲೆಯನ್ನು ಸರಿಗಟ್ಟಬೇಕು ಅಂತೆಲ್ಲ ತಮ್ಮ ಮುಂದಿನ ಗುರಿಯ ಬಗ್ಗೆ ಅವರು ಮಾತಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತಮ್ಮ ಕುರ್ಚಿಯನ್ನು ಗಟ್ಟಿಗೊಳಿಸಿಕೊಳ್ಳಲು ಸಿದ್ದರಾಮಯ್ಯ ಸಮಾವೇಶ ಮಾಡಿಸುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

Published on: Nov 30, 2024 01:56 PM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.