ಕೊರೊನಾ ಕೇಸ್ ಹೇಳೋದ್ರಲ್ಲೂ ನಡೀತಿದ್ಯಾ ಕಳ್ಳಾಟ, ಟಿವಿ9 ಬಯಲು ಮಾಡಿದೆ ಬಹುದೊಡ್ಡ ಸತ್ಯ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಕೊರೊನಾ ಸೋಂಕಿತರು, ಬಲಿಯಾದವರ ಸಂಖ್ಯೆ ಸರಿಯಾಗಿ ಹೇಳ್ತಿಲ್ಲವಾ ಆರೋಗ್ಯ ಇಲಾಖೆ ಎಂಬ ಅನುಮಾನ ಉಂಟಾಗಿದೆ. ದಿನೇ ದಿನೆ ಬೆಂಗಳೂರಿನಲ್ಲಿ ಕೇಸ್ ಹೆಚ್ಚಾಗ್ತಿದೆ. ಕಂಟೇನ್ಮೆಂಟ್ ಏರಿಯಾಗಳು ಜಾಸ್ತಿಯಾಗ್ತಿದೆ. ಅಪಾಯದ ದಿಕ್ಕಿಗೆ ಬೆಂಗಳೂರು ಹೋಗ್ತಿದೆ. ಈ ಟೈಮಲ್ಲಿ ಬಹಳ ದೊಡ್ಡ ನಾಟಕ ನಡೀತಿದ್ಯಾ ತೆರೆಮರೆಯಲ್ಲಿ ಎಂಬ ಅನುಮಾನ ಕಾಡುತ್ತಿದೆ. ಕೆಲ ಆರೋಗ್ಯ ಅಧಿಕಾರಿಗಳು ಹೇಳೋ ಪ್ರಕಾರ ಕಳ್ಳಾಟ? ಕೆಲ ಆರೋಗ್ಯ ಅಧಿಕಾರಿಗಳು ಹೇಳೂ ಪ್ರಕಾರ ದಿನಕ್ಕೆ […]

ಕೊರೊನಾ ಕೇಸ್ ಹೇಳೋದ್ರಲ್ಲೂ ನಡೀತಿದ್ಯಾ ಕಳ್ಳಾಟ, ಟಿವಿ9 ಬಯಲು ಮಾಡಿದೆ ಬಹುದೊಡ್ಡ ಸತ್ಯ
Follow us
ಆಯೇಷಾ ಬಾನು
|

Updated on:Jun 15, 2020 | 11:22 AM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಕೊರೊನಾ ಸೋಂಕಿತರು, ಬಲಿಯಾದವರ ಸಂಖ್ಯೆ ಸರಿಯಾಗಿ ಹೇಳ್ತಿಲ್ಲವಾ ಆರೋಗ್ಯ ಇಲಾಖೆ ಎಂಬ ಅನುಮಾನ ಉಂಟಾಗಿದೆ. ದಿನೇ ದಿನೆ ಬೆಂಗಳೂರಿನಲ್ಲಿ ಕೇಸ್ ಹೆಚ್ಚಾಗ್ತಿದೆ. ಕಂಟೇನ್ಮೆಂಟ್ ಏರಿಯಾಗಳು ಜಾಸ್ತಿಯಾಗ್ತಿದೆ. ಅಪಾಯದ ದಿಕ್ಕಿಗೆ ಬೆಂಗಳೂರು ಹೋಗ್ತಿದೆ. ಈ ಟೈಮಲ್ಲಿ ಬಹಳ ದೊಡ್ಡ ನಾಟಕ ನಡೀತಿದ್ಯಾ ತೆರೆಮರೆಯಲ್ಲಿ ಎಂಬ ಅನುಮಾನ ಕಾಡುತ್ತಿದೆ.

ಕೆಲ ಆರೋಗ್ಯ ಅಧಿಕಾರಿಗಳು ಹೇಳೋ ಪ್ರಕಾರ ಕಳ್ಳಾಟ? ಕೆಲ ಆರೋಗ್ಯ ಅಧಿಕಾರಿಗಳು ಹೇಳೂ ಪ್ರಕಾರ ದಿನಕ್ಕೆ 41ಕೇಸ್ ಪತ್ತೆಯಾದ್ರೆ ಕೇವಲ 30ರಷ್ಟು ತೋರಿಸ್ತಿದೆಯಂತೆ. 50 ಪಾಸಿಟಿವ್ ಪ್ರಕರಣ ಬಂದಿದ್ರೆ 35 ರಷ್ಟು ತೋರಿಸ್ತಿದೆಯಂತೆ. ಅಲ್ದೆ 2 ದಿನಗಳ ಹಿಂದೆ ಪತ್ತೆಯಾದ ಸೋಂಕಿತರನ್ನು ಹೆಲ್ತ್ ಬುಲೆಟಿನ್​ಗೆ ಸೇರಿಸಿ ಕೆಲ ಸೋಂಕಿತರನ್ನ ಲಿಸ್ಟ್​ನಿಂದ ಕೈ ಬಿಡ್ತಿದ್ದಾರಂತೆ. ವೈದ್ಯಕೀಯ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಗಳ ಮುಸುಕಿನ ಗುದ್ದಾಟ ಇಲ್ಲೂ ಕಾಣಿಸ್ತಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಕ್ಟೋರಿಯಾ ಆಸ್ಪತ್ರೆ ಸಾವಿನ ಸಂಖ್ಯೆಯ ಅಂಕಿ ಅಂಶ ನೀಡಿದ್ರೆ, ಆರೋಗ್ಯ ಇಲಾಖೆಯೇ ಮತ್ತೊಂದು ಅಂಕಿ ಅಂಶ ನೀಡ್ತಿದೆ. ಆರೋಗ್ಯ ಇಲಾಖೆ ಪ್ರಕಾರ ಬೆಂಗಳೂರಲ್ಲಿ ಜೂನ್ 10 ರಿಂದ 11 ಮಂದಿ ಸಾವು. ವಿಕ್ಟೋರಿಯಾ ಮೂಲಗಳ ಪ್ರಕಾರ 17 ಮಂದಿ ಸಾವನ್ನಪ್ಪಿದ್ದಾರೆ. ಈ ರೀತಿ ವರದಿ ಬೇರೆನೇ ನೀಡ್ತಿದಿಯಾ ಆರೋಗ್ಯ ಇಲಾಖೆ ಎನ್ನವಂತಾಗಿದೆ. ಸೋಂಕಿತರು, ಮೃತರ ಅಂಕಿ ಅಂಶ ಮುಚ್ಚಿಡ್ತಿರೋದು ಸ್ಪಷ್ಟವಾಗಿ ತಿಳಿಯುತ್ತಿದೆ. ಸರಿಯಾದ ಅಂಕಿ ಅಂಶ ನೀಡಿದ್ರೆ ಆರೋಗ್ಯ ಇಲಾಖೆಗೆ ಕೆಟ್ಟ ಹೆಸರು ಬರಬಹುದು ಅಂತಾ ಚಿಂತಿಸುತ್ತಿರಬಹುದು. ಅಥವಾ ಹೆಚ್ಚು ಸಂಖ್ಯೆ ತೋರಿಸಿದ್ರೆ ಜನರು ಹೆದರುತ್ತಾರೆಂದು ಯೋಚಿಸಿರಬಹುದು. ಆದ್ರೆ, ಜನರ ದಿಕ್ಕನ್ನು ತಪ್ಪಿಸ್ತಿರೋದು ಮಾತ್ರ ಇಲ್ಲಿ ಸ್ಪಷ್ಟವಾಗುತ್ತಿದೆ.

ಬೆಂಗಳೂರಿನಲ್ಲಿ ಮರಣ ಮೃದಂಗ: ಜೂನ್ 1ರ ಬಳಿಕ ಬೆಂಗಳೂರಿನಲ್ಲಿ ಸೋಂಕಿತರು, ಸಾವಿನ ಸಂಖ್ಯೆ ಹೆಚ್ಚಾಗಿದೆ. ಮಾರ್ಚ್ 22 ರಂದು ಬೆಂಗಳೂರಿನಲ್ಲಿ ಮೊದಲ ಬಲಿ ಬಳಿಕ ವಾರದಿಂದ ವಾರಕ್ಕೆ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಳವಾಗಿದೆ. ಏಪ್ರಿಲ್ 26ರ ವೇಳೆಗೆ ಬೆಂಗಳೂರಲ್ಲಿ ನಾಲ್ವರನ್ನ ಬಲಿ ಪಡೆದಿದ್ದ ವೈರಸ್ಮೇ 3 – 7 ಮಂದಿ ಬಲಿ, ಮೇ 8 – 8 ಮಂದಿ ಬಲಿ. ಮೇ 17ರ ವೇಳೆಗೆ ಮೃತರ ಸಂಖ್ಯೆ 8ರಲ್ಲೇ ಇತ್ತು. ಮೇ 31ಕ್ಕೆ 12ಕ್ಕೇರಿದೆ.

ಕಿಲ್ಲರ್ ವೈರಸ್ ಅಸಲಿ ಆಟ ಶುರುವಾಗಿದ್ದೆ ಜೂನ್ ತಿಂಗಳಲ್ಲಿ. ಜೂನ್ 7 ರ ವೇಳೆಗೆ ಮೃತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಜೂನ್ 14 ರ ವೇಳೆಗೆ ಮೃತರ ಸಂಖ್ಯೆ 31ಕ್ಕೆ ಏರಿಕೆ ಒಂದೇ ವಾರದಲ್ಲಿ 16 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

Published On - 9:30 am, Mon, 15 June 20

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್