ಬೆಂಗಳೂರು: ಕಿಲ್ಲರ್ ಕೊರೊನಾ ಬಗ್ಗೆ ಆರೋಗ್ಯ ಇಲಾಖೆ ಮತ್ತೊಂದು ಬೆಚ್ಚಿಬೀಳಿಸೋ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದೆ. ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಹೊಂದಿರುವವರು ರಾಜ್ಯಕ್ಕೆ ಕಂಡಕವಾಗಲಿದ್ದಾರೆ. ಒಬ್ಬ ‘ಎ’ ಸಿಂಪ್ಟಮ್ ಕ್ಯಾರಿಯರ್ನಿಂದ 20 ಮಂದಿಗೆ ಸೋಂಕು ಬರುತ್ತೆ. ಹೀಗಾಗಿ ‘ಎ’ ಸಿಂಪ್ಟಮ್ ಕ್ಯಾರಿಯರ್ ಸಮುದಾಯಕ್ಕೆ ಸೋಂಕು ಹರಡುತ್ತಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬೆಚ್ಚಿಬೀಳಿಸೋ ಮಾಹಿತಿಯನ್ನು ನೀಡಿದ್ದಾರೆ.
ಲಾಕ್ಡೌನ್ ಸಡಿಲಿಕೆಯಿಂದ ಜನ ರೋಡಿಗಿಳಿಯುತ್ತಿದ್ದಾರೆ. ರೋಡಿಗಿಳಿದವರಲ್ಲಿ ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಇದ್ರೆ ಅಪಾಯ ಫಿಕ್ಸ್. ಇವರಿಂದ ಕೊರೊನಾ 4ನೇ ಹಂತ ತಲುಪೋ ಸಾಧ್ಯತೆ ಹೆಚ್ಚಾಗಿದೆ. ‘ಎ’ ಸಿಂಪ್ಟಮ್ ಕ್ಯಾರಿಯರ್ಗೆ ರೋಗದ ಲಕ್ಷಣಗಳು ಇರುವುದಿಲ್ಲ. ಆದ್ರೆ ಡಯಾಬಿಟೀಸ್, ಕ್ಯಾನ್ಸರ್, ಕಿಡ್ನಿ ಫೇಲ್ಯೂರ್ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ವೈರಸ್ ಹಬ್ಬಿಸ್ತಾರೆ ಇಂಥಾ ರೋಗಿಗಳನ್ನ ‘ಬಿ’ ಕ್ಯಾಟಗರಿ ಎನ್ನಲಾಗ್ತಿದೆ.
ಮೊದಲಿಗೆ ‘ಬಿ’ ಕ್ಯಾಟಗರಿಯವರಿಗೆ ರೋಗದ ಗುಣಲಕ್ಷಣ ಕಾಣಿಸಿಕೊಳ್ಳುತ್ತೆ. ‘ಬಿ’ ಕ್ಯಾಟಗರಿಯವರನ್ನ ಟೆಸ್ಟ್ ಮಾಡಿದಾಗ ಪಾಸಿಟಿವ್ ಬರುತ್ತೆ. ‘ಬಿ’ ಕ್ಯಾಟಗರಿಯವರ ಮೂಲಕ ‘ಎ’ ಸಿಂಪ್ಟಮ್ ಕ್ಯಾರಿಯರ್ಗಳನ್ನ ಪತ್ತೆ ಹಚ್ಚಲಾಗುತ್ತದೆ. ಮೊದಲಿಗೆ ರೋಗ ಹರಡಿದವರೇ ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಆದ್ರೆ ‘ಬಿ’ ಕ್ಯಾಟಗರಿಯವರಿಗೆ ಗೊತ್ತಾದ ಮೇಲೆ ‘ಎ’ ಕ್ಯಾಟಗರಿಯವರು ಪತ್ತೆಯಾಗ್ತಾರೆ.
ಭಾರಿ ಡೇಂಜರಸ್ ರೋಗ ಹರಡಿಸಿರೋರು ತಡವಾಗಿ ಪತ್ತೆಯಾಗ್ತಿದ್ದಾರೆ. ರೋಗ ಅಂಟಿಸಿಕೊಂಡವರು, ಹರಡಿದವರಿಗಿಂತ ಬೇಗ ಪತ್ತೆಯಾಗ್ತಿದ್ದಾರೆ. ವೈರಸ್ ಸಮುದಾಯಕ್ಕೆ ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ‘ಎ’ ಮತ್ತು ‘ಬಿ’ ಸಿಂಪ್ಟಮ್ ಕ್ಯಾರಿಯರ್ಸ್ ಕುರಿತು ಎಚ್ಚರವಹಿಸಿ. ರಸ್ತೆಗಲಲ್ಲಿ ಓಡಾಡ ಬೇಡಿ. ಸಾಮಾಜಿಕ ಅಂತರ ಕಾಪಡಿಕೊಳ್ಳಿ ಎಂದು ತಜ್ಞ ವಾರ್ನಿಂಗ್ ನೀಡಿದ್ದಾರೆ.