ರಾಜ್ಯದಲ್ಲಿ ಲಾಕ್​​ಡೌನ್ ಘೋಷಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಬೇಡಿ -ಡಾ. ಕೆ.ಸುಧಾಕರ್​ ಮನವಿ

| Updated By: ಸಾಧು ಶ್ರೀನಾಥ್​

Updated on: Mar 26, 2021 | 5:44 PM

ಕೆಲ ರಾಜ್ಯಗಳಲ್ಲಿ ಲಾಕ್​ಡೌನ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಲಾಕ್​​ಡೌನ್ ಘೋಷಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಬೇಡಿ. ಮುಂದಿನ 2 ತಿಂಗಳು ಅತ್ಯಂತ ಮಹತ್ವ ಪಡೆದಿದೆ, ಉದಾಸೀನ ಮಾಡಬೇಡಿ. ಎಲ್ಲರೂ ಹಬ್ಬಗಳನ್ನ ಸರಳವಾಗಿ ಆಚರಣೆ ಮಾಡಬೇಕು ಎಂದು ಮಂಚೇನಹಳ್ಳಿಯಲ್ಲಿ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ರಾಜ್ಯದಲ್ಲಿ ಲಾಕ್​​ಡೌನ್ ಘೋಷಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಬೇಡಿ -ಡಾ. ಕೆ.ಸುಧಾಕರ್​ ಮನವಿ
ಡಾ.ಕೆ. ಸುಧಾಕರ್​
Follow us on

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನೂ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಎಲ್ಲರೂ ಮಾಸ್ಕ್​ ಧರಿಸಬೇಕು, ಅಂತರ ಕಾಪಾಡಬೇಕು ಎಂದು ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಕೆಲ ರಾಜ್ಯಗಳಲ್ಲಿ ಲಾಕ್​ಡೌನ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಲಾಕ್​​ಡೌನ್ ಘೋಷಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಬೇಡಿ. ಮುಂದಿನ 2 ತಿಂಗಳು ಅತ್ಯಂತ ಮಹತ್ವ ಪಡೆದಿದೆ, ಉದಾಸೀನ ಮಾಡಬೇಡಿ. ಎಲ್ಲರೂ ಹಬ್ಬಗಳನ್ನ ಸರಳವಾಗಿ ಆಚರಣೆ ಮಾಡಬೇಕು ಎಂದು ಮಂಚೇನಹಳ್ಳಿಯಲ್ಲಿ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ಕೊರೊನಾದಿಂದ ಎಷ್ಟೋ ಮನೆಗಳಲ್ಲಿ ಸಾವು ನೋವು ಸಂಭವಿಸಿದೆ. ಹೀಗಾಗಿ ನಾನು, ನನ್ನ ಮನೆಗೆ ಕೊರೊನಾ ಬಂದಿಲ್ಲವೆಂದು ಉದಾಸೀನ ಬೇಡ. 40 ವರ್ಷ ಮೇಲ್ಪಟ್ಟವರೆಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಸುಧಾಕರ್​ ಮನವಿ ಮಾಡಿದರು. ಬೆಂಗಳೂರು ಕರಗ ಸೇರಿದಂತೆ ಪ್ರತಿಯೊಂದು ಹಬ್ಬವನ್ನು ಸರಳವಾಗಿ ಆಚರಿಸಿ ಅಂತಾ ಸುಧಾಕರ್​ ಮನವಿ ಮಾಡಿದರು.

ಮಹಾರಾಷ್ಟ್ರ, ಕೇರಳ, ಪಂಜಾಬ್​ ಹಾಗೂ ಚಂಡೀಗಢದಿಂದ ಬೆಂಗಳೂರಿಗೆ ಬರುವವರಿಗೆ ಕೊರೊನಾ ಟೆಸ್ಟ್​ ಕಡ್ಡಾಯ. ಆದರೆ, ಇತರೆ ರಾಜ್ಯಗಳಿಂದ ಬರುವವರಿಗೆ ಟೆಸ್ಟ್ ಕಡ್ಡಾಯ ಇಲ್ಲ ಎಂದು ಮಂಚೇನಹಳ್ಳಿಯಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಆದರೆ, ಬೆಂಗಳೂರಿನಲ್ಲೇ ಉಳಿಯುವ ಹೊರ ರಾಜ್ಯದವರಿಗೆ ಟೆಸ್ಟ್​ ಕಡ್ಡಾಯ. ಬೆಂಗಳೂರಿಗೆ ಬಂದು ಹೋಗುವವರಿಗೆ ಟೆಸ್ಟ್​ ಕಡ್ಡಾಯ ಇಲ್ಲ. ಶೇ. 60ರಷ್ಟು ಹೊರ ರಾಜ್ಯದಿಂದ ಬಂದವರಿಂದ ಸೋಂಕು ಹರಡುತ್ತಿದೆ ಎಂದು ಮಂಚೇನಹಳ್ಳಿಯಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿದರು.

ಇದನ್ನೂ ಓದಿ: ದೂರಿನ ಬೆನ್ನಲ್ಲೇ ಅರೆಸ್ಟ್ ಆಗಿಬಿಡ್ತಾರಾ ರಮೇಶ್ ಜಾರಕಿಹೊಳಿ? ಎಸ್​ಐಟಿ ಮುಂದಿನ ನಡೆ ಏನು?