ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಬೆಡ್ಗಳ ವ್ಯವಸ್ಥೆ ಏಕೆ ಕಡಿಮೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗರಂ
ಕಟ್ಟಡದ ವ್ಯವಸ್ಥೆ ಇಲ್ಲದಿದ್ದಕ್ಕೆ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿಲ್ಲ ಎಂದು ಸಚಿವರಿಗೆ ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್. ಭೂಸರೆಡ್ಡಿ ಮಾಹಿತಿ ನೀಡಿದ್ದಾರೆ. ಹೊಸ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಗದಗ: ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ 750 ಬೆಡ್ಗಳ ವ್ಯವಸ್ಥೆ ಆಗಬೇಕಿತ್ತು. ಬೆಡ್ ವ್ಯವಸ್ಥೆ ಯಾಕೆ ಕಡಿಮೆ ಇದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪ್ರಶ್ನೆ ಮಾಡಿದ್ದಾರೆ. ಗದಗ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವರು ಅಧಿಕಾರಿಗಳನ್ನು ಬೆಡ್ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದ್ದಾರೆ.
ಕಟ್ಟಡದ ವ್ಯವಸ್ಥೆ ಇಲ್ಲದಿದ್ದಕ್ಕೆ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿಲ್ಲ ಎಂದು ಸಚಿವರಿಗೆ ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್. ಭೂಸರೆಡ್ಡಿ ಮಾಹಿತಿ ನೀಡಿದ್ದಾರೆ. ಹೊಸ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, 2021ರ ಮಾರ್ಚ್ ಅಂತ್ಯದಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಇನ್ನೂ ಮುಗಿದಿಲ್ಲ, ಯಾವಾಗ ಮುಗಿಯುತ್ತೆ ಎಂದು ಸುಧಾಕರ್ ಕೇಳಿದ್ದಾರೆ.
ಜೂನ್, ಆಗಸ್ಟ್ ವೇಳೆಗೆ ಕಾಮಗಾರಿ ಮುಗಿಯುತ್ತೆ ಎಂದು ಇಂಜಿನಿಯರ್ ಪ್ರತಿಕ್ರಿಯಿಸಿದ್ದಾರೆ. ಇಂಜಿನಿಯರ್ ಉತ್ತರಕ್ಕೆ ಸುಧಾಕರ್ ಗರಂ ಆಗಿದ್ದಾರೆ. ಯಾಕೆ ಸುಳ್ಳು ಹೇಳುತ್ತೀಯಾ ಎಂದು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಮಗಾರಿ ಬೇಗ ಮುಗಿಸಿ ಎಂದು ಇಂಜಿನಿಯರ್ಗೆ ತಾಕೀತು ಮಾಡಿದ್ದಾರೆ.
ಹೋಮ್ ಐಸೋಲೇಷನ್ನಲ್ಲಿರುವವರು ಸಿಸಿಸಿಗೆ ಬರುತ್ತಿಲ್ಲ ಹೋಮ್ ಐಸೋಲೇಷನ್ನಲ್ಲಿರುವವರು ಸಿಸಿಸಿಗೆ ಬರುತ್ತಿಲ್ಲ. ಕೊರೊನಾ ಸೋಂಕಿತರು ಕೊವಿಡ್ ಕೇರ್ ಸೆಂಟರ್ಗೆ ಬರುತ್ತಿಲ್ಲ ಎಂದು ಸಚಿವ ಸುಧಾಕರ್ ಮುಂದೆ ಎಂಎಲ್ಸಿ ಸಂಕನೂರು ಅಳಲು ತೋಡಿಕೊಂಡಿದ್ದಾರೆ. ಗದಗ ಜಿಲ್ಲಾಡಳಿತ ಭವನದಲ್ಲಿ ಸಚಿವ ಡಾ.ಕೆ.ಸುಧಾಕರ್ ಸಭೆ ವೇಳೆ ಸಂಕನೂರು ಹೀಗೆ ಹೇಳಿದ್ದಾರೆ. ಕೇವಲ ಆಶಾ ಕಾರ್ಯಕರ್ತೆಯರನ್ನು ಬಿಟ್ಟಿದ್ದಾರೆ. ಆದ್ರೆ ಸೋಂಕಿತರು ಆಶಾ ಕಾರ್ಯಕರ್ತೆಯರ ಮಾತು ಕೇಳುತ್ತಿಲ್ಲ. ಸಿಸಿಸಿಗೆ ಕರೆದೊಯ್ಯಲು ಜಿಲ್ಲಾಡಳಿತ ಹಿಂದೇಟು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ಕಾರ್ಯವೈಖರಿ ವಿರುದ್ಧ ಎಸ್.ವಿ. ಸಂಕನೂರು ಬೇಸರಪಟ್ಟಿದ್ದಾರೆ. ಇದರಿಂದ ಕೊರೊನಾ ಹೆಚ್ಚಳ ಆಗುತ್ತಿದೆ ಎಂದು ಸಂಕನೂರು ತಿಳಿಸಿದ್ದಾರೆ. ಸಂಕನೂರ ಆರೋಪಕ್ಕೆ ಸಚಿವ ಸಿ.ಸಿ.ಪಾಟೀಲ್ ಗರಂ ಆಗಿದ್ದಾರೆ.
ಆಸ್ಪತ್ರೆಗೆ ವೈದ್ಯರೇ ಬರುತ್ತಿಲ್ಲ ಆರೋಗ್ಯ ಸಚಿವ ಸುಧಾಕರ್ ಸಭೆಯಲ್ಲಿ ಡಿಹೆಚ್ಒವನ್ನು ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ತರಾಟೆಗೆ ತೆಗೆದುಕೊಂಡಿದ್ದಾರೆ. ಲಕ್ಷ್ಮೇಶ್ವರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಬರುತ್ತಿಲ್ಲ. ಸರ್ಕಾರದ ವ್ಯವಸ್ಥೆ ಹದಗೆಡಿಸುತ್ತಿದ್ದೀರಿ ಎಂದು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.
ಒಂದೊಂದು ವಾರ ವೈದ್ಯರು ಆಸ್ಪತ್ರೆಗೆ ಬರುವುದಿಲ್ಲ. ವೈದ್ಯರು ಒಂದು ವಾರದ ಸಹಿ ಮೊದಲೇ ಮಾಡುತ್ತಾರೆ. ಎಷ್ಟು ಹೇಳಿದ್ರೂ ಏಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ. ದಾಖಲೆ ಸಮೇತ ಸುಧಾಕರ್ಗೆ ಲಮಾಣಿ ದೂರು ನೀಡಿದ್ದಾರೆ. ಡಿಹೆಚ್ಒವನ್ನು ಸಚಿವ ಕೆ.ಸುಧಾಕರ್ ಕೂಡ ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ನಡೆದ ಸಚಿವ ಡಾ.ಕೆ.ಸುಧಾಕರ್ ಸಭೆಯಲ್ಲಿ ಕೇಂದ್ರ ಸಚಿವ ಜೋಶಿ, ಸಚಿವ ಸಿ.ಸಿ.ಪಾಟೀಲ್, ಸಂಸದರಾದ ಶಿವಕುಮಾರ್ ಉದಾಸಿ, ಪಿ.ಸಿ.ಗದ್ದಿಗೌಡರ್, ಶಾಸಕರಾದ ಹೆಚ್.ಕೆ.ಪಾಟೀಲ್, ಕಳಕಪ್ಪ ಬಂಡಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆಯನ್ನು ಕೈಗೆ ಏಕೆ ನೀಡಲಾಗುತ್ತದೆ? ಸೊಂಟಕ್ಕೆ ಏಕಿಲ್ಲ? ಇಲ್ಲಿದೆ ಸಂಪೂರ್ಣ ವಿವರ
ಹಾಸನ ಜಿಲ್ಲೆಯ ಆರೋಗ್ಯ ವ್ಯವಸ್ಥೆಗೆ ಸೋಮವಾರವೇ 10 ಕೋಟಿ ರೂಪಾಯಿ ಮಂಜೂರು: ಡಿಸಿಎಂ ಅಶ್ವತ್ಥ್ ನಾರಾಯಣ
Published On - 9:08 pm, Sat, 22 May 21