ಅಮ್ಮ ಸೋಂಕಿಗೆ ಬಲಿ, ಅಪ್ಪ ಸೋಂಕಿನಿಂದ ಆಸ್ಪತ್ರೆಗೆ ದಾಖಲು; ಅಜ್ಜಿಯ ಆಸರೆಯಲ್ಲಿ ಒಂದೂವರೆ ವರ್ಷದ ಪುಟ್ಟ ಕಂದಮ್ಮ

|

Updated on: May 16, 2021 | 1:16 PM

ಕೊರೊನಾ ಸೋಂಕು ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಪಾಲಕರು ಸೋಂಕಿಗೆ ಬಲಿಯಾಗಿ ಮಕ್ಕಳು ಒಬ್ಬಂಟಿಯಾಗುತ್ತಿದ್ದಾರೆ. ಅಂಥಹುದೇ ಮನಕಲಕುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಅಮ್ಮ ಸೋಂಕಿಗೆ ಬಲಿ, ಅಪ್ಪ ಸೋಂಕಿನಿಂದ ಆಸ್ಪತ್ರೆಗೆ ದಾಖಲು; ಅಜ್ಜಿಯ ಆಸರೆಯಲ್ಲಿ ಒಂದೂವರೆ ವರ್ಷದ ಪುಟ್ಟ ಕಂದಮ್ಮ
ಕೊರೊನಾ ವೈರಸ್
Follow us on

ಬೆಂಗಳೂರು: ಕೊರೊನಾ ಸೋಂಕು ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಪಾಲಕರು ಸೋಂಕಿಗೆ ಬಲಿಯಾಗಿ ಮಕ್ಕಳು ಒಬ್ಬಂಟಿಯಾಗುತ್ತಿದ್ದಾರೆ. ಅಂಥಹುದೇ ಮನಕಲಕುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಒಂದೂವರೆ ವರ್ಷದ ಪುಟ್ಟ ಕಂದಮ್ಮನಿಗೆ ಅಮ್ಮ ಅಪ್ಪನ ಆಸರೆ ಎಷ್ಟು ಮುಖ್ಯವಲ್ಲವೇ? ಆದರೆ ಕೊರೊನಾ ಸೋಂಕು ಎಲ್ಲವನ್ನು ಕಿತ್ತುಕೊಳ್ಳುತ್ತಿದೆ. ಆ ಪುಟ್ಟ ಕಂದಮ್ಮನ ತಾಯಿ ರಷ್ಮಿ (34) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿನಿಂದ ಬಳಲುತ್ತಿರುವ ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಆಸರೆಯೂ ಇಲ್ಲದ ಒಂದೂವರೆ ವರ್ಷದ ಮಗುವಿಗೆ ಅಜ್ಜಿ ಆಸರೆಯಾಗಿದ್ದಾರೆ.

ಮೊದಲಿನಿಂದಲೂ ಲಂಗ್ಸ್​ ಸಮಸ್ಯೆಯಿಂದ ಬಳಲುತ್ತಿದ್ದ ರಷ್ಮಿ ಕಳೆದ ಐದು ದಿನಗಳಿಂದ ತೀವ್ರ ಸುಸ್ತಾಗಿದ್ದರು. ಈ ವೇಳೆ ದಂಪತಿಗೆ ಸ್ವ್ಯಾಬ್ ಟೆಸ್ಟ್ ಮಾಡಿಸಲಾಯಿತು. ಈ ಬಳಿಕ ಇಬ್ಬರಿಗೂ ಕೊರೊನಾ ಪಾಸಿಟಿವ್​ ವರದಿ ಬಂತು. ಇಬ್ಬರನ್ನು ಒಂದೇ ಅಸ್ಪತ್ರೆಗೆ ದಾಖಲು ಮಾಡಲಾಯಿತು. ವೈದ್ಯರ ಚಿಕಿತ್ಸೆಗೆ ದೇಹ ಸಹಕರಿಸದೇ ನಿನ್ನೆ ರಷ್ಮಿ ಸಾವಿಗೀಡಾಗಿದ್ದಾರೆ. ಮತ್ತೊಂದು ಕಡೆ ಪಾಸಿಟಿವ್ ವರದಿ ಬಂದ ಮಗುವಿನ ತಂದೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ ತಾಯಿಯ ಆಸರೆಯಲ್ಲಿರಬೇಕಾದ ಒಂದೂವರೆ ವರ್ಷದ ಪುಟ್ಟ ಕಂದಮ್ಮನಿಗೆ ಅಜ್ಜಿ ಆಸರೆ ನೀಡುತ್ತಿದ್ದಾರೆ.

ಇದನ್ನೂ ಓದಿ: ರೋಗಿಗಳ ನೆರವಿಗೆ ನಿಂತ ವೈದ್ಯರ ತಂಡ; ಕೊರೊನಾ ಸೋಂಕು ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಮನೆಯಲ್ಲೇ ಸೂಕ್ತ ಚಿಕಿತ್ಸೆ

(heart wrenching story one and half year baby lost mother by coronavirus and father admits to hospital in bengaluru)