ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಕಡೆ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಾಲೆಗಳು (Schools) ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ (Education Department) ಹೊರಡಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಯಾ ಮುಖ್ಯೋಪಾದ್ಯಯರಿಗೆ ಸುತ್ತೋಲೆ ಮೂಲಕ ಆದೇಶ ರವಾನಿಸಲಾಗಿದೆ.
1. ವರುಣನ ಆರ್ಭಟ ಜಾಸ್ತಿಯಾಗುತ್ತಿದ್ದು, ಶಿಥಿಲಾವಸ್ಥೆ ಅಲ್ಲಿರುವ ಕಟ್ಟಡ ಅಥವಾ ಶೌಚಾಲಯಗಳನ್ನು ಮಕ್ಕಳು ಬಳಸದಂತೆ ನಿಗಾವಹಿಸಬೇಕು.
2. ಶಿಥಿಲಾವಸ್ಥೆಯ ಕಟ್ಟಡದಿಂದ ಮಕ್ಕಳನ್ನು ತಕ್ಷಣವೇ ಸ್ಥಳಾಂತರ ಮಾಡಬೇಕು.
3. ಮಕ್ಕಳಲ್ಲಿ ಕೆಮ್ಮು, ನೆಗಡಿ, ಜ್ವರ ಕೋವಿಡ್ ಅಂತಹ ಲಕ್ಷಣ ಕಂಡು ಬಂದರೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು.
4. ಕೆಲವು ಶಾಲೆಯ ತರಗತಿ ಒಳಗಡೆ ನೀರು ತುಂಬಿದರೆ ಆ ಶಾಲೆಯ ನೀರು ಸ್ವಚ್ಚ ಮಾಡಿದ ಬಳಿಕ ಮಕ್ಕಳಿಗೆ ಬರಲು ಹೇಳಬೇಕು.
5. ಸ್ಥಳೀಯ ಪುರಸಭೆ ಅಥವಾ ಗ್ರಾಮ ಪಂಚಾಯಿತಿ ನೆರವಿನೊಂದಿಗೆ ಶಾಲಾ ತರಗತಿಯ ಸ್ವಚ್ಛಗೊಳಿಸಬೇಕು.
6. ಕ್ಷೇತ್ರ ಶಿಕ್ಷಾಧಿಕಾರಿಗಳ ಪೂರ್ವ ಅನುಮತಿ ಪಡೆದು ಆ ದಿನ ಶಾಲೆ ರಜೆ ಘೋಷಣೆ ಮಾಡಬೇಕು.
7. ಮಳೆಯಿಂದ ಮಕ್ಕಳಿಗೆ ಯಾವುದೇ ತೊಂದರೆ ಜೀವಹಾನಿ ಆಗದಂತೆ ನೋಡಿ ಕೊಳ್ಳಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ
Published On - 10:35 pm, Mon, 11 July 22