ಬಳ್ಳಾರಿ ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಗ್ರಾಮವೇ ಜಲಾವೃತ

ಬಳ್ಳಾರಿ: ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇಬ್ರಾಹಿಂಪುರ ಗ್ರಾಮದಲ್ಲಿ ಭಾರೀ ಮಳೆಯಿಂದ ಮನೆ, ಹೋಟೆಲ್, ಅಂಗಡಿಗಳು ಜಲಾವೃತವಾಗಿವೆ. ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರದಲ್ಲಿದ್ದ ಧವಸಧಾನ್ಯಗಳು ಸಹ ನೀರುಪಾಲಾಗಿದೆ. ಹೀಗಾಗಿ ಸಾಮಾಗ್ರಿ ಹೊರತೆಗೆಯಲು ಗ್ರಾಮದ ಜನರ ಹರಸಾಹಸ ಪಡುತ್ತಿದ್ದಾರೆ. ಇಬ್ರಾಹಿಂಪುರ ಸೇರಿದಂತೆ ಹಲವು ಗ್ರಾಮಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಕೆಲ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಅಪಾರ ಪ್ರಮಾಣದ ಬೆಳೆಗಳೂ ಹಾನಿಗೊಳಗಾಗಿವೆ.

ಬಳ್ಳಾರಿ ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಗ್ರಾಮವೇ ಜಲಾವೃತ

Updated on: Oct 28, 2019 | 10:47 AM

ಬಳ್ಳಾರಿ: ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇಬ್ರಾಹಿಂಪುರ ಗ್ರಾಮದಲ್ಲಿ ಭಾರೀ ಮಳೆಯಿಂದ ಮನೆ, ಹೋಟೆಲ್, ಅಂಗಡಿಗಳು ಜಲಾವೃತವಾಗಿವೆ. ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರದಲ್ಲಿದ್ದ ಧವಸಧಾನ್ಯಗಳು ಸಹ ನೀರುಪಾಲಾಗಿದೆ. ಹೀಗಾಗಿ ಸಾಮಾಗ್ರಿ ಹೊರತೆಗೆಯಲು ಗ್ರಾಮದ ಜನರ ಹರಸಾಹಸ ಪಡುತ್ತಿದ್ದಾರೆ.

ಇಬ್ರಾಹಿಂಪುರ ಸೇರಿದಂತೆ ಹಲವು ಗ್ರಾಮಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಕೆಲ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಅಪಾರ ಪ್ರಮಾಣದ ಬೆಳೆಗಳೂ ಹಾನಿಗೊಳಗಾಗಿವೆ.

Published On - 10:34 am, Mon, 28 October 19