ದೀಪಾವಳಿ ಕಲೆಕ್ಷನ್ಗಾಗಿ ಮಂಗಳಮುಖಿಯರು ಹೀಗಾ ಮಾಡೋದು!?
ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ಕಲೆಕ್ಷನ್ ವಿಚಾರವಾಗಿ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದ ಮಂಗಳಮುಖಿಯರನ್ನ ಆರ್ ಎಮ್ ಸಿ ಯಾರ್ಡ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುಮಿತ್ರ, ರೇಣುಕಾ, ಬಬ್ಲು ಸೇರಿ 12ಜನ ಮಂಗಳಮುಖಿಯರನ್ನ ಪೊಲೀಸರು ಬಂಧಿಸಿದ್ದಾರೆ. ಇದೇ ತಿಂಗಳ 25ರಂದು ಮಂಗಳಮುಖಿಯರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ವಾಣಿಶ್ರೀ, ಪ್ರೀತಿ ಗುಂಪು ಹಾಗೂ ಸುಮಿತ್ರ, ರೇಣುಕಾ ಗುಂಪುಗಳ ನಡುವೆ ಈ ಗಲಾಟೆ ನಡೆದಿತ್ತು. ದೀಪಾವಳಿ ಹಬ್ಬದ ಕಲೆಕ್ಷನ್ ವಿಚಾರವಾಗಿ ಶ್ರೀರಾಮಪುರದಿಂದ, ಆರ್ ಎಮ್ ಸಿ […]
ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ಕಲೆಕ್ಷನ್ ವಿಚಾರವಾಗಿ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದ ಮಂಗಳಮುಖಿಯರನ್ನ ಆರ್ ಎಮ್ ಸಿ ಯಾರ್ಡ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುಮಿತ್ರ, ರೇಣುಕಾ, ಬಬ್ಲು ಸೇರಿ 12ಜನ ಮಂಗಳಮುಖಿಯರನ್ನ ಪೊಲೀಸರು ಬಂಧಿಸಿದ್ದಾರೆ.
ಇದೇ ತಿಂಗಳ 25ರಂದು ಮಂಗಳಮುಖಿಯರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ವಾಣಿಶ್ರೀ, ಪ್ರೀತಿ ಗುಂಪು ಹಾಗೂ ಸುಮಿತ್ರ, ರೇಣುಕಾ ಗುಂಪುಗಳ ನಡುವೆ ಈ ಗಲಾಟೆ ನಡೆದಿತ್ತು. ದೀಪಾವಳಿ ಹಬ್ಬದ ಕಲೆಕ್ಷನ್ ವಿಚಾರವಾಗಿ ಶ್ರೀರಾಮಪುರದಿಂದ, ಆರ್ ಎಮ್ ಸಿ ಯಾರ್ಡ್ ವರೆಗೂ ಬಂದಿದ್ದ ಸುಮಿತ್ರ ಗುಂಪು ಆರ್ ಎಮ್ ಸಿ ಯಾರ್ಡ್ ಬಳಿ ದಬ್ಬಾಳಿಕೆ ನಡೆಸಿ, ಜನರಿಂದ ಹೆಚ್ಚಿನ ಹಣ ಕಲೆಕ್ಷನ್ ಮಾಡುತ್ತಿತ್ತು. ಈ ವಿಚಾರ ತಿಳಿದು ವಾಣಿಶ್ರೀ ತನ್ನ ಗುಂಪಿನೊಂದಿಗೆ ಬಂದು ನಮ್ಮ ಏರಿಯಾಗೆ ಬಂದು ಹಣ ಕಲೆಕ್ಟ್ ಮಾಡಬೇಡಿ ಎಂದಿದ್ರು.
ಮುಂದುವರಿದು ಇದೇ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಸುಮಿತ್ರ ಗ್ಯಾಂಗ್, ನಂತರ ಆರ್ ಎಮ್ ಸಿ ಯಾರ್ಡ್ ನಿಂದ ಶ್ರೀರಾಮ್ ಪುರಕ್ಕೆ ವಾಪಸ್ ತೆರಳಿತ್ತು. ಆದ್ರೆ ಸುಮಿತ್ರಾ ಗುಂಪು ಅಲ್ಲಿಂದ ತನ್ನ ಸ್ನೇಹಿತರ ಗುಂಪಿನೊಂದಿಗೆ ಆಟೋದಲ್ಲಿ ಆರ್ ಎಮ್ ಸಿ ಯಾರ್ಡ್ ಗೆ ಮತ್ತೆ ಬಂದಿದೆ. ವಾಣಿಶ್ರೀ ಪ್ರೀತಿ ಇದ್ದ ಜಾಗಕ್ಕೆ ಹೋಗಿ, ಸುಮಿತ್ರಾ ಗುಂಪು ಹಲ್ಲೆ ಮಾಡಿ ಚಾಕುವಿನಿಂದ ಕೊಲೆಗೆ ಯತ್ನಿಸಿದೆ.
ಬಳಿಕ ಸುಮಿತ್ರಾ ಗುಂಪು, ವಾಣಿಶ್ರಿ ಗುಂಪಿನ ಸದಸ್ಯರ ಕೂದಲು ಕಟ್ ಮಾಡಿ ವಿಕೃತಿ ಮೆರೆದು ಎಸ್ಕೇಪ್ ಆಗಿತ್ತು. ಈ ಬಗ್ಗೆ ಆರ್ ಎಮ್ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Published On - 12:50 pm, Mon, 28 October 19