ಕೊರೊನಾ ಲಾಕ್​ಡೌನ್ 2.O ಮಧ್ಯೆಯೇ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

ಬೆಂಗಳೂರು: ಕೊರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸದಾ ಗಿಜಿಗುಡುತ್ತಿದ್ದ ಉದ್ಯಾನ ನಗರಿ ಸಂಪೂರ್ಣ ಸ್ತಬ್ಧವಾಗಿತ್ತು. ರಸ್ತೆಗಳು ಖಾಲಿ ಖಾಲಿಯಾಗಿದ್ವು. ಆದರೆ ಇಂದು ಮತ್ತೆ ಬೆಂಗಳೂರು ನಗರ ತನ್ನ ವಾಸ್ತವ ಸ್ಥಿತಿಗೆ ಮರಳಿದಂತೆ ಭಾಸವಾಗ್ತಿದೆ. ಸರ್ಕಾರ ಕೆಲ ಷರತ್ತುಗಳನ್ನು ಹಾಕಿ ಐಟಿ ಕಂಪನಿಗಳನ್ನು ತೆರೆಯಲು ಅವಕಾಶ ನೀಡಿದೆ. ಹೀಗಾಗಿ ಐಟಿ ಉದ್ಯೋಗಿಗಳಿಗೆ ಹೆಚ್ಚು ಸಂಖ್ಯೆಯಲ್ಲಿ ಪಾಸ್ ವಿತರಣೆ ಮಾಡಿರುವ ಹಿನ್ನೆಲೆಯಲ್ಲಿ ವಾಹನಗಳು ರೋಡಿಗಿಳಿದಿವೆ. ಕಾವೇರಿ ಜಂಕ್ಷನ್ ಬಳಿ ನಿರಂತರ ಟ್ರಾಫಿಕ್ ಜಾಮ್ ಉಂಟಾಗಿದೆ. ಪೊಲೀಸರು ಬ್ಯಾರಿಕೇಡ್​ಗಳನ್ನ ಹಾಕಿ ವಾಹನಗಳ ಪಾಸ್ […]

ಕೊರೊನಾ ಲಾಕ್​ಡೌನ್ 2.O ಮಧ್ಯೆಯೇ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

Updated on: Apr 20, 2020 | 11:06 AM

ಬೆಂಗಳೂರು: ಕೊರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸದಾ ಗಿಜಿಗುಡುತ್ತಿದ್ದ ಉದ್ಯಾನ ನಗರಿ ಸಂಪೂರ್ಣ ಸ್ತಬ್ಧವಾಗಿತ್ತು. ರಸ್ತೆಗಳು ಖಾಲಿ ಖಾಲಿಯಾಗಿದ್ವು. ಆದರೆ ಇಂದು ಮತ್ತೆ ಬೆಂಗಳೂರು ನಗರ ತನ್ನ ವಾಸ್ತವ ಸ್ಥಿತಿಗೆ ಮರಳಿದಂತೆ ಭಾಸವಾಗ್ತಿದೆ. ಸರ್ಕಾರ ಕೆಲ ಷರತ್ತುಗಳನ್ನು ಹಾಕಿ ಐಟಿ ಕಂಪನಿಗಳನ್ನು ತೆರೆಯಲು ಅವಕಾಶ ನೀಡಿದೆ. ಹೀಗಾಗಿ ಐಟಿ ಉದ್ಯೋಗಿಗಳಿಗೆ ಹೆಚ್ಚು ಸಂಖ್ಯೆಯಲ್ಲಿ ಪಾಸ್ ವಿತರಣೆ ಮಾಡಿರುವ ಹಿನ್ನೆಲೆಯಲ್ಲಿ ವಾಹನಗಳು ರೋಡಿಗಿಳಿದಿವೆ.

ಕಾವೇರಿ ಜಂಕ್ಷನ್ ಬಳಿ ನಿರಂತರ ಟ್ರಾಫಿಕ್ ಜಾಮ್ ಉಂಟಾಗಿದೆ. ಪೊಲೀಸರು ಬ್ಯಾರಿಕೇಡ್​ಗಳನ್ನ ಹಾಕಿ ವಾಹನಗಳ ಪಾಸ್ ಪರೀಕ್ಷೆಗೆ ಮುಂದಾಗಿದ್ದಾರೆ. ಪರೀಕ್ಷೆ ವೇಳೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಆದರೆ ಬಂದಿರುವ ಪ್ರತೀ ವಾಹನಕ್ಕೂ ಪಾಸ್ ಇರುವುದು ಪೊಲೀಸರಿಗೆ ಶಾಕ್ ಆಗಿದೆ. ಮುಖ್ಯರಸ್ತೆಯಲ್ಲಿ ಜಾಮ್ ಆಗುವಷ್ಟು ವಾಹನಗಳು ಇಂದು ರಸ್ತೆಗಿಳಿದಿವೆ. ಲಾಕ್ ಡೌನ್ ಸಂದರ್ಭದಲ್ಲೂ ಎಂದಿನಂತೆ ವಾಹನ ಸಂಚಾರ ಆರಂಭವಾಗಿದೆ.