ಕೊಟ್ಟ ಮಾತು ಉಳಿಸಿಕೊಂಡ ಸಿಎಂ BSY: ಮದಲೂರು ಕೆರೆಗೆ ಹರಿದುಬಂತು ಹೇಮಾವತಿ ನೀರು
ಅಂತೂ ಸಿಎಂ ಯಡಿಯೂರಪ್ಪ ಉಪಚುನಾವಣೆ ವೇಳೆ ಜಿಲ್ಲೆಯ ಶಿರಾ ಕ್ಷೇತ್ರದ ಜನರಿಗೆ ಕೊಟ್ಟ ಮಾತಿನಿಂತೆ ಮದಲೂರು ಕೆರೆಗೆ ನೀರು ಹರಿಸಿದ್ದಾರೆ. ಮದಲೂರು ಕೆರೆಗೆ ಇಂದು ಹೇಮಾವತಿ ನದಿಯ ನೀರು ಬಿಡುಗಡೆ ಮಾಡಲಾಯಿತು.
ತುಮಕೂರು: ಅಂತೂ ಸಿಎಂ ಯಡಿಯೂರಪ್ಪ ಉಪಚುನಾವಣೆ ವೇಳೆ ಜಿಲ್ಲೆಯ ಶಿರಾ ಕ್ಷೇತ್ರದ ಜನರಿಗೆ ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ನೀರು ಹರಿಸಿದ್ದಾರೆ. ಮದಲೂರು ಕೆರೆಗೆ ಇಂದು ಹೇಮಾವತಿ ನದಿಯ ನೀರು ಬಿಡುಗಡೆ ಮಾಡಲಾಯಿತು.
ಮುಖ್ಯಮಂತ್ರಿಯಿಂದ ‘ಶಿರಾ’ಸ ವಹಿಸಿ ಪಾಲನೆ ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ರಿಲೀಸ್ ಮಾಡಲಾಯಿತು. ಕ್ಷೇತ್ರದ ನೂತನ ಶಾಸಕ ಡಾ.ರಾಜೇಶ್ ಗೌಡ ಹಾಗೂ ಸಂಸದ ನಾರಾಯಣ ಸ್ವಾಮಿ ಪೂಜೆ ಸಲ್ಲಿಸಿದ ಬಳಿಕ ಗೇಟ್ ತೆರೆದು ನೀರು ಹರಿಸಿದರು. ಒಟ್ಟು 32 ಕಿ.ಮೀ ಉದ್ದವಿರುವ ಕಾಲುವೆಗೆ ಇದೀಗ 250mcft ಕ್ಕೂ ಹೆಚ್ಚು ನೀರು ಹರಿಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಮದಲೂರು ಕೆರೆ ತುಂಬುವವರೆಗೂ ನೀರು ಹರಿಯಲಿದೆ: ಶಿರಾ ಶಾಸಕ ರಾಜೇಶ್ಗೌಡ
‘ಮದಲೂರು ಕೆರೆಗೆ 6 ತಿಂಗಳಲ್ಲಿ ನೀರು ಹರಿಸುತ್ತಾರಂತಾ? ಅಲ್ಲಿವರೆಗೂ BSY ಇರ್ತಾರೋ ಇಲ್ವೋ ಗೊತ್ತಿಲ್ಲ’ ಮದಲೂರು ಕೆರೆಗೆ ನೀರು ಹರಿಸುವ ಯೋಜನೆ ಸ್ಥಗಿತ ಮಾಡಿದ್ದೇ ಯಡಿಯೂರಪ್ಪ-TB ಜಯಚಂದ್ರ ಕಿಡಿ ಶಿರಾ ಉಪಸಮರ: ಮದಲೂರು ಕೆರೆ ಮೇಲೆ ಕೈ-ಕಮಲ-ದಳ ತ್ರಿಕೋನ ಪ್ರೇಮ! ಹೇಗೆ?
Published On - 11:52 am, Mon, 30 November 20