ಮೈಸೂರು: ಮೈಸೂರು ಜಿಲ್ಲೆಯಲ್ಲಿ ಹಕ್ಕಿ ಜ್ವರದ ಆತಂಕ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿಯ ಬಾವಲಿ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ಮುಂದುವರೆದಿದೆ. ಜೊತೆಗೆ, ಕೋಳಿ ಮಾಂಸ ಸಾಗಾಟದ ಬಗ್ಗೆ ಪೊಲೀಸರೊಂದಿಗೆ ಪಶು ಸಂಗೋಪನೆ ಇಲಾಖೆ ಸಿಬ್ಬಂದಿ ನಿಗಾವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ.
ನಿನ್ನೆಯಿಂದ (ಜ.07) ಕೇರಳದಿಂದ ಬರುವ ವಾಹನಗಳ ತಪಾಸಣೆಯನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸೂಚನೆಯಂತೆ, ಮಳೆಯನ್ನು ಲೆಕ್ಕಿಸದೆ ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾರೆ.
ಕೇರಳದಿಂದ ರಾಜ್ಯಕ್ಕೆ ಬರುವ ಪ್ರತಿಯೊಂದು ವಾಹನವನ್ನು ಪರಿಶೀಲಿಸಿ, ವಾಹನ ನಂಬರ್ ನಮೂದಿಸಿಕೊಳ್ಳಲಾಗುತ್ತಿದೆ. ತೀವ್ರ ಕಟ್ಟೆಚ್ಚರದ ಜೊತೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಹೆಚ್ಚಾಯ್ತು ಹಕ್ಕಿಜ್ವರ ಆತಂಕ.. ಮೈಸೂರು-ಕೇರಳ ಗಡಿಯಲ್ಲಿ DC ಸಿಂಧೂರಿಯಿಂದ ಕಟ್ಟೆಚ್ಚರದ ಆದೇಶ