ಯುವರಾಜ್ ಕೇಸ್ನಲ್ಲಿ ತಳಕು ಹಾಕಿಕೊಂಡಿದೆ ಮತ್ತೊಬ್ಬ ನಟಿಯ ಹೆಸರು, ಯಾರದು?
ಯುವರಾಜ್ ಅಲಿಯಾಸ್ ಸ್ವಾಮಿ ಜತೆ ಸ್ಯಾಂಡಲ್ ವುಡ್ನ ಮತ್ತೊಬ್ಬ ಖ್ಯಾತ ನಟಿಯಿಂದ ಹಣಕಾಸು ವ್ಯವಹಾರ ನಡೆದಿದೆಯಂತೆ. ಆ ನಟಿ ಯುವರಾಜ್ಗೆ ಕರೆ ಮಾಡಿ ಹಲವು ಬಾರಿ ಚರ್ಚೆ ಮಾಡಿದ್ದಾರೆಂಬ ಮಾಹಿತಿ ಸಿಕ್ಕಿದೆ.
ಬೆಂಗಳೂರು: ಯುವರಾಜ್ ಜತೆ ಹಣಕಾಸು ವ್ಯವಹಾರ ಆರೋಪದ ವಿಚಾರವಾಗಿ ನಟಿ ರಾಧಿಕಾ ಕುಮಾರಸ್ವಾಮಿ ಸದ್ಯ ಭಾರಿ ಸುದ್ದಿಯಲ್ಲಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಮತ್ತೊಂದು ನಟಿಯ ಹೆಸರು ಕೇಳಿ ಬಂದಿದೆ. ಯುವರಾಜ್ ಕೇಸ್ನಲ್ಲಿ ಮತ್ತೊಬ್ಬ ನಟಿ ಹೆಸರು ತಳಕು ಹಾಕಿಕೊಂಡಿದೆ. ನಟೀಮಣಿಯಿಂದ ಯುವರಾಜ್ಗೆ ಹಲವು ಬಾರಿ ಕರೆ ಬಂದಿದೆ ಎಂಬ ಮಾಹಿತಿ ಸಿಕ್ಕಿದೆ.
ಯುವರಾಜ್ ಅಲಿಯಾಸ್ ಸ್ವಾಮಿ ಜತೆ ಸ್ಯಾಂಡಲ್ ವುಡ್ನ ಮತ್ತೊಬ್ಬ ಖ್ಯಾತ ನಟಿಯಿಂದ ಹಣಕಾಸು ವ್ಯವಹಾರ ನಡೆದಿದೆಯಂತೆ. ಆ ನಟಿ ಯುವರಾಜ್ಗೆ ಕರೆ ಮಾಡಿ ಹಲವು ಬಾರಿ ಚರ್ಚೆ ಮಾಡಿದ್ದಾರೆಂಬ ಮಾಹಿತಿ ಸಿಕ್ಕಿದೆ. ಆದರೆ ಆ ನಟಿಯ ಹೆಸರು ಮಾತ್ರ ಎಲ್ಲೂ ರಿವೀಲ್ ಆಗಿಲ್ಲ.
ಇನ್ನು ಯುವರಾಜ್ಗೆ ಸಂಬಂಧಿಸಿದ ಐಶಾರಾಮಿ ಲ್ಯಾಂಡ್ ರೋವರ್ ಮತ್ತು ಬೆಂಜ್ ಕಾರುಗಳನ್ನು ಸೀಜ್ ಮಾಡಿ ಸಿಸಿಬಿ ಕಚೇರಿ ಬಳಿ ನಿಲ್ಲಿಸಲಾಗಿದೆ. ಲ್ಯಾಂಡ್ ರೋವರ್ ಕಾರು ಯುವರಾಜ್ ಸ್ವಾಮಿಯ ಪತ್ನಿ ಪ್ರೇಮ ಎಂಬುವವರ ಹೆಸರಿನಲ್ಲಿದೆ.