ಗಾಂಧಿ ಪ್ರತಿಮೆ‌ ಧಾರ್ಮಿಕ ಕೇಂದ್ರವಲ್ಲ, ಅಲ್ಲಿ ಮದ್ಯ ಮಳಿಗೆ ಸ್ಥಾಪಿಸಬಹುದು: ಹೈಕೋರ್ಟ್

ಮಹಾತ್ಮ ಗಾಂಧಿ ಪ್ರತಿಮೆ ಬಳಿ ಮದ್ಯ ಮಳಿಗೆ ನಿರ್ಮಾಣ ಮಾಡಲಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ, ಮಹಾತ್ಮ ಗಾಂಧಿ ಪ್ರತಿಮೆ‌ ಧಾರ್ಮಿಕ ಕೇಂದ್ರವಲ್ಲ‌. ಹಾಗಾಗಿ ಪ್ರತಿಮೆಯನ್ನು ಪೂಜಾ ಕೇಂದ್ರವಾಗಿಸುವುದು ಗಾಂಧಿ ಸಿದ್ಧಾಂತವಾಗಿರಲಿಲ್ಲ ಎಂದು ಸಿಜೆ ಎ.ಎಸ್.ಒಕಾ, ನ್ಯಾ.ಎನ್.ಎಸ್.ಸಂಜಯ್ ಗೌಡ ಅವರಿದ್ದ ಪೀಠ ಅಭಿಪ್ರಾಯ ಪಟ್ಟಿದೆ. ಗಾಂಧಿ ಪ್ರತಿಮೆ ಬಳಿ ಮದ್ಯ ಮಳಿಗೆ ಸ್ಥಾಪಿಸಿದ್ದ ಹಿನ್ನೆಲೆಯಿಂದ ವಕೀಲ ಎ.ವಿ.ಅಮರನಾಥನ್ ಟಾನಿಕ್ ಮದ್ಯ ಮಳಿಗೆ ವಿರುದ್ಧದ PIL ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸಿಜೆ ಎ.ಎಸ್.ಒಕಾ, ನ್ಯಾ.ಎನ್.ಎಸ್.ಸಂಜಯ್ ಗೌಡರವರಿದ್ದ ಪೀಠ ಮಹಾತ್ಮ ಗಾಂಧಿ […]

ಗಾಂಧಿ ಪ್ರತಿಮೆ‌ ಧಾರ್ಮಿಕ ಕೇಂದ್ರವಲ್ಲ, ಅಲ್ಲಿ ಮದ್ಯ ಮಳಿಗೆ ಸ್ಥಾಪಿಸಬಹುದು: ಹೈಕೋರ್ಟ್
ಸಾಧು ಶ್ರೀನಾಥ್​

Updated on: Sep 07, 2020 | 12:55 PM

ಮಹಾತ್ಮ ಗಾಂಧಿ ಪ್ರತಿಮೆ ಬಳಿ ಮದ್ಯ ಮಳಿಗೆ ನಿರ್ಮಾಣ ಮಾಡಲಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ, ಮಹಾತ್ಮ ಗಾಂಧಿ ಪ್ರತಿಮೆ‌ ಧಾರ್ಮಿಕ ಕೇಂದ್ರವಲ್ಲ‌. ಹಾಗಾಗಿ ಪ್ರತಿಮೆಯನ್ನು ಪೂಜಾ ಕೇಂದ್ರವಾಗಿಸುವುದು ಗಾಂಧಿ ಸಿದ್ಧಾಂತವಾಗಿರಲಿಲ್ಲ ಎಂದು ಸಿಜೆ ಎ.ಎಸ್.ಒಕಾ, ನ್ಯಾ.ಎನ್.ಎಸ್.ಸಂಜಯ್ ಗೌಡ ಅವರಿದ್ದ ಪೀಠ ಅಭಿಪ್ರಾಯ ಪಟ್ಟಿದೆ.

ಗಾಂಧಿ ಪ್ರತಿಮೆ ಬಳಿ ಮದ್ಯ ಮಳಿಗೆ ಸ್ಥಾಪಿಸಿದ್ದ ಹಿನ್ನೆಲೆಯಿಂದ ವಕೀಲ ಎ.ವಿ.ಅಮರನಾಥನ್ ಟಾನಿಕ್ ಮದ್ಯ ಮಳಿಗೆ ವಿರುದ್ಧದ PIL ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸಿಜೆ ಎ.ಎಸ್.ಒಕಾ, ನ್ಯಾ.ಎನ್.ಎಸ್.ಸಂಜಯ್ ಗೌಡರವರಿದ್ದ ಪೀಠ ಮಹಾತ್ಮ ಗಾಂಧಿ ಪ್ರತಿಮೆ‌ ಧಾರ್ಮಿಕ ಕೇಂದ್ರವಲ್ಲ‌.

ಹಾಗಾಗಿ ಪ್ರತಿಮೆಯನ್ನು ಪೂಜಾ ಕೇಂದ್ರವಾಗಿಸುವುದು ಗಾಂಧಿ ಸಿದ್ಧಾಂತವಾಗಿರಲಿಲ್ಲ ಎಂದು ತಿಳಿಸಿದೆ. ಜೊತೆಗೆ ಸರ್ವೆ ನಂತರ ಲೈಸೆನ್ಸ್ ನಿಯಮಬದ್ಧವಾಗಿದೆ ಎಂದು ವರದಿ ಬಂದ ಹಿನ್ನೆಲೆಯಲ್ಲಿ ವಕೀಲ ಎ.ವಿ.ಅಮರನಾಥನ್ ಸಲ್ಲಿಸಿದ್ದ PILಅನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.

Published On - 12:53 pm, Mon, 7 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us