ಗಂಡುಮೆಟ್ಟಿದ ನಾಡಲ್ಲಿ ಗಾಂಜಾ ಘಾಟು: 3 KG ಗಾಂಜಾ ಖಾಕಿ ವಶಕ್ಕೆ
ಧಾರವಾಡ: ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ಆರು ಮಂದಿಯನ್ನ ಪೊಲೀಸರು ಬಂಧಿಸಿರುವ ಘಟನೆ ನಗರದ ನುಚ್ಚಂಬ್ಲಿ ಬಾವಿ ಬಳಿ ನಡೆದಿದೆ. ಧಾರವಾಡ ಟೌನ್ ಠಾಣೆ ಪೊಲೀಸರು ಆರೋಪಿಗಳನ್ನ ಸೆರೆಹಿಡಿದಿದ್ದಾರೆ. ಬಂಧಿತ ಗಾಂಜಾ ಮಾರಾಟಗಾರರನ್ನ ಪೃಥ್ವಿ ಕೊಂಡಪಲ್ಲಿ, ಸತ್ಕಾರ್ ಮಾಡಲಗಿ, ಜಾವಿದ್ ಅಹ್ಮದ್, ಮೆಹಬೂಬ್ ಸಾಬ್, ರಾಜೇಸಾಬ್ ಹಂಚಿನಾಳ ಹಾಗೂ ಮೊಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 3 ಕೆ.ಜಿ ಗಾಂಜಾ, 1 ಬೈಕ್ ಹಾಗೂ 1 ಕಾರ್ನ ವಶಕ್ಕೆ ಪಡೆಯಲಾಗಿದೆ. 8.57 ಲಕ್ಷ ರೂಪಾಯಿ ಒಟ್ಟು ಮೌಲ್ಯದ ವಸ್ತುಗಳನ್ನ […]

ಧಾರವಾಡ: ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ಆರು ಮಂದಿಯನ್ನ ಪೊಲೀಸರು ಬಂಧಿಸಿರುವ ಘಟನೆ ನಗರದ ನುಚ್ಚಂಬ್ಲಿ ಬಾವಿ ಬಳಿ ನಡೆದಿದೆ. ಧಾರವಾಡ ಟೌನ್ ಠಾಣೆ ಪೊಲೀಸರು ಆರೋಪಿಗಳನ್ನ ಸೆರೆಹಿಡಿದಿದ್ದಾರೆ.
ಬಂಧಿತ ಗಾಂಜಾ ಮಾರಾಟಗಾರರನ್ನ ಪೃಥ್ವಿ ಕೊಂಡಪಲ್ಲಿ, ಸತ್ಕಾರ್ ಮಾಡಲಗಿ, ಜಾವಿದ್ ಅಹ್ಮದ್, ಮೆಹಬೂಬ್ ಸಾಬ್, ರಾಜೇಸಾಬ್ ಹಂಚಿನಾಳ ಹಾಗೂ ಮೊಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 3 ಕೆ.ಜಿ ಗಾಂಜಾ, 1 ಬೈಕ್ ಹಾಗೂ 1 ಕಾರ್ನ ವಶಕ್ಕೆ ಪಡೆಯಲಾಗಿದೆ. 8.57 ಲಕ್ಷ ರೂಪಾಯಿ ಒಟ್ಟು ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಲಾಗಿದೆ.