ಬೆಂಗಳೂರು: ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಹೈಕೋರ್ಟ್ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. 5 ಲಕ್ಷ ರೂ. ದಂಡ ವಿಧಿಸಿ ಗೈರುಹಾಜರಿಯನ್ನು ಹೈಕೋರ್ಟ್ ಮನ್ನಿಸಿದೆ.
ಸಿಎಂ ಕೊವಿಡ್ ನಿಧಿಗೆ 5 ಲಕ್ಷ ಮೊತ್ತವನ್ನು ಪಾವತಿಸಲು ಹೈಕೋರ್ಟ್ ಸೂಚನೆ ನೀಡಿದೆ. ಡಿ.ಕೆ. ಸಿದ್ರಾಮ ಎಂಬುವವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆಸಿದ ಆರೋಪದಡಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ, ಶಾಸಕರಾಗಿ ಈಶ್ವರ ಖಂಡ್ರೆ ಆಯ್ಕೆ ಅಸಿಂಧು ಕೋರಿದ್ದರು. ಆಸ್ತಿ ವಿವರ ಬಹಿರಂಗಪಡಿಸಿಲ್ಲವೆಂದು ಅರ್ಜಿಯಲ್ಲಿ ಆರೋಪ ಸಹ ಮಾಡಲಾಗಿತ್ತು.
ನೋಟಿಸ್ ನೀಡಿದ್ದರೂ ವಿಚಾರಣೆಗೆ ಈಶ್ವರ ಖಂಡ್ರೆ ಗೈರಾಗಿದ್ದಕ್ಕೆ ತಮ್ಮ PAಗೆ ಮರೆವಿನ ರೋಗವಿದೆ. ಆದ್ದರಿಂದ, ಕೇಸ್ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲವೆಂದು ಈಶ್ವರ ಖಂಡ್ರೆ ಅರ್ಜಿ ಸಲ್ಲಿಸಿದ್ದರು. ಹಾಗಾಗಿ, ನ್ಯಾ. ಕೃಷ್ಣ ಎಸ್.ದೀಕ್ಷಿತ್ರವರ ಏಕಸದಸ್ಯ ಪೀಠ 5 ಲಕ್ಷ ದಂಡ ವಿಧಿಸಿ ಎಕ್ಸ್ ಪಾರ್ಟೆ ಆದೇಶ ತೆರವುಗೊಳಿಸಿದೆ.