IMA ಬಹುಕೋಟಿ ವಂಚನೆ; ಪ್ರಕರಣ ರದ್ದು ಕೋರಿ ಹೇಮಂತ್ ನಿಂಬಾಳ್ಕರ್ ಸಲ್ಲಿಸಿರುವ ಅರ್ಜಿಗೆ ಹೈಕೋರ್ಟ್ ಹೇಳಿದ್ದೇನು?

ಒಂದೇ ಪ್ರಕರಣಕ್ಕೆ ಎರಡು FIR ದಾಖಲು ಹಿನ್ನೆಲೆಯಲ್ಲಿ ಪ್ರಕರಣ ರದ್ದುಪಡಿಸುವಂತೆ ಹೇಮಂತ್ ನಿಂಬಾಳ್ಕರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದು ಪ್ರತ್ಯೇಕ ಪ್ರಕರಣವೆಂದು ಸಿಬಿಐ ಎಸ್‌ಪಿಪಿ ವಾದ ಮಂಡಿಸಿದೆ

IMA ಬಹುಕೋಟಿ ವಂಚನೆ; ಪ್ರಕರಣ ರದ್ದು ಕೋರಿ ಹೇಮಂತ್ ನಿಂಬಾಳ್ಕರ್ ಸಲ್ಲಿಸಿರುವ ಅರ್ಜಿಗೆ ಹೈಕೋರ್ಟ್ ಹೇಳಿದ್ದೇನು?
ಹೇಮಂತ್ ನಿಂಬಾಳ್ಕರ್

Updated on: Dec 22, 2020 | 5:54 PM

ಬೆಂಗಳೂರು: IMA ಸಂಸ್ಥೆಯಿಂದ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಪ್ರಕರಣಕ್ಕೆ ಎರಡು FIR ದಾಖಲಾದ ಹಿನ್ನೆಲೆಯಲ್ಲಿ ಪ್ರಕರಣ ರದ್ದುಪಡಿಸುವಂತೆ ಹೇಮಂತ್ ನಿಂಬಾಳ್ಕರ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಸೂಚನೆ ನೀಡಿದೆ.

ಅಲ್ಲದೆ ಮುಂದಿನ ವಿಚಾರಣೆವರೆಗೆ ಆರೋಪಪಟ್ಟಿ ದಾಖಲಿಸಬೇಡಿ ಎಂದು ಸಿಬಿಐಗೆ ಹೈಕೋರ್ಟ್​ನ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಸೂಚನೆ ನೀಡಿದ್ದಾರೆ. ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ತನಿಖೆ ಮುಂದುವರಿಸಬಹುದು ಆದರೆ ಅಂತಿಮ ವರದಿ ಸಲ್ಲಿಸದಂತೆ ಸೂಚನೆ ನೀಡಿದೆ.

ಒಂದೇ ಪ್ರಕರಣಕ್ಕೆ ಎರಡು FIR ದಾಖಲು ಹಿನ್ನೆಲೆಯಲ್ಲಿ ಪ್ರಕರಣ ರದ್ದುಪಡಿಸುವಂತೆ ಹೇಮಂತ್ ನಿಂಬಾಳ್ಕರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದು ಪ್ರತ್ಯೇಕ ಪ್ರಕರಣವೆಂದು ಸಿಬಿಐ ಎಸ್‌ಪಿಪಿ ವಾದ ಮಂಡಿಸಿದೆ. ಪ್ರಕರಣ ಗಮನಿಸಿದ ಹೈಕೋರ್ಟ್ ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿದೆ.

IMA ಹಗರಣ: ಸಕ್ಷಮ ಪ್ರಾಧಿಕಾರದಿಂದ ರೋಷನ್​ ಬೇಗ್ ಆಸ್ತಿ ಜಪ್ತಿಗೆ ಚಿಂತನೆ- ಕೋರ್ಟ್​ಗೆ ಮಾಹಿತಿ