ಬೆಂಗಳೂರು: ಧರ್ಮಯುದ್ಧಕ್ಕಿಳಿದಿರೋ ವಿದ್ಯಾರ್ಥಿಗಳಿಗಿಂದು ಅಗ್ನಿಪರೀಕ್ಷೆಯ ದಿನ. ಇಷ್ಟು ದಿನ ಕ್ಲಾಸ್ ಬಹಿಷ್ಕರಿಸಿ, ಧರ್ಮವೇ ಹೆಚ್ಚು ಅಂತಾ ಕಾಲೇಜಿನಿಂದ ಕಾಲ್ಕೀಳುತ್ತಿದ್ದರು. ಆದರೆ ಇವತ್ತು ಆ ರೀತಿ ಮಾಡೋಕೆ ಆಗಲ್ಲ. ಯಾಕಂದ್ರೆ, ಪಿಯು ಪ್ರಾಕ್ಟಿಕಲ್ ಎಕ್ಸಾಂ (second puc practicals) ಇದೆ. ಹಾಗಾದ್ರೆ, ತರಗತಿಯಿಂದ ದೂರ ಉಳಿದವ್ರು ಇಂದು ಕ್ಲಾಸ್‌ಗೆ ಬರ್ತಾರಾ..? ಅಥವಾ ಪರೀಕ್ಷೆ ಬಹಿಷ್ಕರಿಸ್ತಾರಾ..? ಒಂದ್ವೇಳೆ ಬಹಿಷ್ಕರಿಸಿದ್ರೆ, ಭವಿಷ್ಯದಲ್ಲಾಗೋ ಸಮಸ್ಯೆ ಏನು..? ಈ ರಿಪೋರ್ಟ್ ಓದಿ. ಹಿಜಾಬ್ ತೆಗೆಯಲ್ಲ, ಕ್ಲಾಸ್‌ಗೆ ಬರಲ್ಲ.. ಶಿಕ್ಷಣ ಇಲ್ದೆ ಇದ್ರೂ ಸರಿ ಹಿಜಾಬ್ ಬಿಡಲ್ಲ.. ಕೋರ್ಟ್ ಆದೇಶ ಬರೋವರೆಗೂ ಕಾಲೇಜಿಗೆ ಬರಲ್ಲ, ಅದೇನಾಗುತ್ತೋ ಆಗಲಿ, ನಮಗೆ ಧರ್ಮವೇ ಮುಖ್ಯ ಅಂತಾ ಸಿಡಿದೆದ್ದ ವಿದ್ಯಾರ್ಥಿನಿಗಳಿಗೆ (muslim girl students) ಇಂದು ಅಗ್ನಿ ಪರೀಕ್ಷೆ ಎದುರಾಗಿದೆ. ಹೌದು, ಇಂದು ಪಿಯು ವಿದ್ಯಾರ್ಥಿಗಳಿಗೆ ನಿರ್ಣಾಯಕ ದಿನ.. ಇಂದಿನಿಂದ ಪಿಯು ಪ್ರಾಕ್ಟಿಕಲ್ ಎಕ್ಸಾಂ ಸ್ಟಾರ್ಟ್ ಆಗ್ತಿದ್ದು, ಪರೀಕ್ಷೆ ಹೋಗ್ಬೇಕಾ..? ಇಲ್ಲಾ, ಧರ್ಮಕ್ಕಾಗಿ ಹೋರಾಡ್ಬೇಕಾ ಅನ್ನೋ ಧರ್ಮಸಂಕಟದಲ್ಲಿ ವಿದ್ಯಾರ್ಥಿನಿಯರು ಸಿಲುಕಿದ್ದಾರೆ (Hijab Row).
ಧರ್ಮವೇ ಮುಖ್ಯ ಎಂದ ವಿದ್ಯಾರ್ಥಿಗಳಿಗೆ ಇಂದು ಅಗ್ನಿ ಪರೀಕ್ಷೆ – ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗದಿದ್ರೆ ಭವಿಷ್ಯಕ್ಕೆ ಕುತ್ತು..!
ಯೆಸ್.. ಹಿಜಾಬ್ ಸಂಘರ್ಷದಿಂದ ಕಾಲೇಜಿಗೆ ಹಾಜರಾಗದೇ ದೂರ ಉಳಿದಿರೋ ವಿದ್ಯಾರ್ಥಿನಿಯರಿಗೆ ಸದ್ಯ ಸಂಕಷ್ಟ ಎದುರಾಗಿದೆ. ಹಿಜಾಬ್ ಬಿಟ್ಟು ಪ್ರಾಕ್ಟಿಕಲ್ ಕ್ಲಾಸ್‌ಗೆ ಹೋಗ್ಬೇಕಾ..? ಇಲ್ಲಾ ಹಿಜಾಬ್‌ಗೆ ಪರೀಕ್ಷೆ ಬಹಿಷ್ಕರಿಸಿ ಹೋರಾಟ ಮಾಡ್ಬೇಕಾ..? ಹೋರಾಟ ಮಾಡಿದ್ರೆ ನಮ್ಮ ಭವಿಷ್ಯದ ಚಿಂತೆ ಏನು ಅನ್ನೋ ಟೆನ್ಷನ್ ಶುರುವಾಗಿದೆ. ಯಾಕಂದ್ರೆ, ಇಂದು ಎಕ್ಸಾಂ ಮಿಸ್ ಆದ್ರೆ, ಮತ್ತೆ ಪ್ರ್ಯಾಕ್ಟಿಕಲ್ ಎಕ್ಸಾಂ ಬರೆಯೋಕೆ ಅವಕಾಶ ಇರಲ್ಲ..
ಹಿಜಾಬ್ ತೆಗೆದು ಪರೀಕ್ಷೆಗೆ ಬರ್ತಾರಾ ಸ್ಟೂಡೆಂಟ್ಸ್?
ಹೌದು.. ಎಕ್ಸಾಂ ಮತ್ತೊಂದ್ಸಲ ಬರೆದ್ರೆ ಆಯ್ತು, ಇಂದು ಧರ್ಮಕ್ಕಾಗಿ ಹೋರಾಟ ಮುಂದುವರಿಸೋಣ ಅಂತಾ ನಿರ್ಧಾರ ಮಾಡಿದ್ರೆ ಸಂಕಷ್ಟ ಕಟ್ಟಿಟ್ಟಬುತ್ತಿ.. ನಾಲ್ಕು ದಿನದ ಹಿಂದೆಯೇ ನಡೆಯಬೇಕಿದ್ದ ದ್ವಿತೀಯ ಪಿಯು ಪ್ರಾಕ್ಟಿಕಲ್ ಪರೀಕ್ಷೆಯನ್ನ, ಹಿಜಾಬ್ ಸಂಘರ್ಷದಿಂದ ಮುಂದೂಡಿದ್ದ ಪಿಯು ಬೋರ್ಡ್, ಇಂದಿನಿಂದ ಪ್ರಾಯೋಗಿಕ ಪರೀಕ್ಷೆ ನಡೆಸಲಿದೆ. 25ರೊಳಗೆ ಪರೀಕ್ಷೆ ಮುಗಿಸುವಂತೆಯೂ ಡೆಡ್‌ಲೈನ್ ಕೊಟ್ಟಿದೆ. ಇದೇ ಈಗ ಹಿಜಾಬ್‌ಗಾಗಿ ಕ್ಲಾಸ್‌ನಿಂದ ದೂರ ಉಳಿದಿರೋ ವಿದ್ಯಾರ್ಥಿನಿಯರಿಗೆ ದೊಡ್ಡ ಟೆನ್ಷನ್ ತಂದಿದೆ.
ಧರ್ಮನಾ..? 30 ಅಂಕನಾ..?
ಇಂದಿನಿಂದ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ
30 ಅಂಕಗಳಿಗೆ ನಡೆಯಲಿರುವ ಪ್ರಾಯೋಗಿಕ ಪರೀಕ್ಷೆ
ಪ್ರಯೋಗಕ್ಕೆ 10 ಅಂಕ, ಪ್ರಯೋಗ ವಿಶ್ಲೇಷಣೆ – 10 ಅಂಕ
ರಿಕಾರ್ಡ್ ಬುಕ್ – 5 ಅಂಕ, ಸಂದರ್ಶನ (ವೈವಾ) – 5
ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್
ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್ ವಿಷಯಗಳಿಗೆ ಪರೀಕ್ಷೆ
ಪ್ರಾಯೋಗಿಕ ಪರೀಕ್ಷೆ ಮುಗಿಸಿ ಪಿಯು ಬೋರ್ಡ್‌ಗೆ ಅಂಕಪಟ್ಟಿ ವಿವರ ಸಲ್ಲಿಸಬೇಕು
ಇಂದಿನಿಂದ ನಡೀತಿರೋ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ ಕ್ಲಾಸ್ ತೊರೆದಿರುವ ವಿದ್ಯಾರ್ಥಿನಿಯರಿಗೆ ಧರ್ಮ ಮುಖ್ಯನಾ..? 30 ಅಂಕ ಮುಖ್ಯನಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ, ಧರ್ಮ ಅಂತ ನಿಂತ್ರೆ, ಪ್ರಾಯೋಗಿಕ ಪರೀಕ್ಷೆಯಲ್ಲಿ 30 ಅಂಕಗಳನ್ನ ಕಳೆದುಕೊಳ್ಳಬೇಕಾಗುತ್ತೆ. ಅದು ಹೇಗೆ ಅಂದ್ರೆ, ಪ್ರಯೋಗಕ್ಕೆ 10 ಅಂಕ, ಪ್ರಯೋಗ ವಿಶ್ಲೇಷಣೆಗೆ 10 ಅಂಕ ರಿಕಾರ್ಡ್ ಬುಕ್ ಕಂಪ್ಲೀಟ್ ಮಾಡಿದ್ರೆ, 5 ಅಂಕ ವೈವಾಗೆ 5 ಅಂಕ ಸಿಗುತ್ತೆ. ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಮನಃಶಾಸ್ತ್ರ ಮತ್ತ ಎಲೆಕ್ಟ್ರಾನಿಕ್ಸ್ ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, ಪೆಬ್ರವರಿ 25ರೊಳಗೆ ಪ್ರಾಯೋಗಿಕ ಪರೀಕ್ಷೆ ಮುಗಿಸಿ ಪಿಯು ಬೋರ್ಡ್‌ಗೆ ಕಾಲೇಜುಗಳು ಸಲ್ಲಿಸಬೇಕಾಗಿದೆ.
ಶಿವಮೊಗ್ಗದಲ್ಲಿ ದಳ್ಳುರಿ- ಇಂದು, ನಾಳೆ ನಿಷೇಧಾಜ್ಞೆ ಜಾರಿ
ಇನ್ನು ಇಂದಿನಿಂದ ಎಸ್.ಎಸ್.ಎಲ್.ಸಿ. ಶಾಲೆ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತೆ ಪರೀಕ್ಷೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಆರಂಭವಾಗ್ತಿದೆ. ಹೀಗಾಗಿ, ದಳ್ಳುರಿ ಎದ್ದಿದ್ದ ಶಿವಮೊಗ್ಗದಲ್ಲಿ ಇವತ್ತು ಮತ್ತು ನಾಳೆ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಫೆ.17 ರಿಂದ ಫೆ. 19 ರವರೆಗೆ ನಗರದಲ್ಲಿ 144 ಸೆಕ್ಷನ್ ಜಾರಿಯಿತ್ತು. ಈಗ ಮತ್ತೆ ನಿಷೇಧಾಜ್ಞೆ ಜಾರಿಗೊಳಿಸಿರೋದಾಗಿ ಶಿವಮೊಗ್ಗ ತಹಶೀಲ್ದಾರ್ ಡಾ.ನಾಗರಾಜ್ ಎನ್.ಜೆ. ಆದೇಶಿಸಿದ್ದಾರೆ.. ನಗರದ್ಯಾಂತ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದು, ಕಾಲೇಜು ಮತ್ತು ಶಾಲೆಗಳಿಗೂ ಪೊಲೀಸ್ ಭದ್ರತೆ ಇರಲಿದೆ..
ಅತ್ತ ಬಾಗಲಕೋಟೆ ಜಿಲ್ಲೆಯಲ್ಲೂ ನಿಷೇಧಾಜ್ಞೆ ಮುಂದುವರಿದಿದ್ದು, ಶಾಲಾ ಕಾಲೇಜು ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.. ಒಟ್ನಲ್ಲಿ ಇಂದು ನಡೆಯಲಿರೋ ಪಿಯುಸಿ ಪ್ರಾಯೋಗಿಕ ಪರೀಕ್ಷೆಯ ಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ತುಂಬಾ ಮುಖ್ಯವಾಗಿದ್ದು.. ಪೋಷಕರ ಇತ್ತ ಗಮನ ಹರಸಬೇಕಾಗಿದ್ದು ಕೋರ್ಟ್ ಸೂಚನೆಯಂತೆ ಮಕ್ಕಳನ್ನ ಪ್ರಾಯೋಗಿಕ ಪರೀಕ್ಷೆ ಎದುರಿಸಲು ಕಳುಹಿಸಬೇಕಿದೆ..
-ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು
Published On - 7:19 am, Mon, 21 February 22