ಚಿಕ್ಕಮಗಳೂರು, ಆಗಸ್ಟ್ 07: ಅದು ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿರುವ ಜಿಲ್ಲೆ. ಒಂದು ಕಡೆ ಪಶ್ಚಿಮ ಘಟ್ಟ ಸಾಲ ಮತ್ತೊಂದು ಕಡೆ ದಟ್ಟ ಅರಣ್ಯ. ನೂರಾರು ಪ್ರವಾಸಿತಾಣಗಳಿರುವ ಪ್ರವಾಸಿಗರ ಪಾಲಿನ ಸ್ವರ್ಗ ಎಂದೆ ಖ್ಯಾತಿ ಪಡೆದಿದ್ದ ಚಿಕ್ಕಮಗಳೂರಿನಲ್ಲಿ (Chikkamagaluru) ಗುಡ್ಡ ಕುಸಿತ, ಭೂ ಕುಸಿತದ ಆತಂಕ ಶುರುವಾಗಿದೆ. ಮುಳ್ಳಯ್ಯನಗಿರಿ (Mullayanagiri) ಸೇರಿದಂತೆ ಮಲೆನಾಡಿನ 5 ತಾಲೂಕಿನ 88 ಪ್ರದೇಶಗಳು ಡೇಂಜರಸ್ ಪಟ್ಟಿಗೆ ಸೇರಿದ್ದು ನಾಳೆಯಿಂದ ಜಿಯೋಲಾಜಿಕಲ್ ಸರ್ವೆ ಆರಂಭವಾಗಲಿದೆ.
ಕಾಫಿನಾಡು ಚಿಕ್ಕಮಗಳೂರು ಮಲೆನಾಡು, ದಟ್ಟ ಕಾಡು ಪಶ್ಚಿಮ ಘಟ್ಟ ಸಾಲಿನ ಸೋಲಾ ಅರಣ್ಯ ಹೊಂದಿರುವ ಪ್ರಕೃತಿ ಸೌಂದರ್ಯದಿಂದ ತುಂಬಿರುವ ಜಿಲ್ಲೆ. ಜಿಲ್ಲೆಯಾದ್ಯಂತ ನೂರಾರು ಪ್ರವಾಸಿತಾಣಗಳಿಗೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರ್ತಾರೆ. ಆದರೆ ರಾಜ್ಯದ ಅತಿ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಂದ್ರದ್ರೋಣ ಪರ್ವತ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಂತ ಪ್ರವಾಸಿತಾಣಗಳಿಂದ ತುಂಬಿರುವ ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತ ಸೇರಿದಂತೆ ಚಿಕ್ಕಮಗಳೂರು, ಶೃಂಗೇರಿ, ಕಳಸ, ಮೂಡಿಗೆರೆ, ಕೊಪ್ಪ ತಾಲೂಕಿನ 88 ಪ್ರದೇಶಗಳು ಡೇಂಜರಸ್ ಪಟ್ಟಿಗೆ ಸೇರಿದೆ.
ಇದನ್ನೂ ಓದಿ: ಮಳೆ ನಿಂತರೂ ನಿಲ್ಲದ ಗುಡ್ಡ ಕುಸಿತ, ಶೃಂಗೇರಿ ಶಾರದಾ ದೇಗುಲ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಈ ವರ್ಷ ಜಿಲ್ಲೆಯಾದ್ಯಂತ ಅದರಲ್ಲೂ ಮಲೆನಾಡು ಭಾಗ ಪಶ್ಚಿಮ ಘಟ್ಟ ಸಾಲಿನಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು ವಾಡಿಕೆ ಪ್ರಮಾಣಕ್ಕಿಂತ 30% ಅಧಿಕ ಮಳೆ ಸುರಿದಿದ್ದು ನಾನಾ ಅನಾಹುತಕ್ಕೆ ಕಾರಣವಾಗಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಮೀಪ ಭೂ ಕುಸಿತ ಸಂಭವಿಸಿದ್ದು ಗುಡ್ಡಗಳು ರಸ್ತೆಗೆ ಊರುಳಿ ಬೀಳುತ್ತಿದೆ.
ಮತ್ತೊಂದು ಕಡೆ ಮಲೆನಾಡು ತಾಲೂಕಿನಲ್ಲಿ ಭೂ ಕುಸಿತ, ಗುಡ್ಡ ಕುಸಿತ ನಿರಂತರವಾಗಿ ಸಂಭವಿಸುತ್ತಿದ್ದು ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ 88 ಡೇಂಜರಸ್ ಸ್ಥಳಗಳನ್ನ ಚಿಕ್ಕಮಗಳೂರು ಜಿಲ್ಲಾಡಳಿತ ಗುರುತು ಮಾಡಿದ್ದು ನಾಳೆಯಿಂದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಪರಿಶೀಲನೆ ನಡೆಯಲಿದೆ.
ಇದನ್ನೂ ಓದಿ: ಶಿರಾಡಿ ಘಾಟ್ನಲ್ಲಿ ಮಣ್ಣು ತೆರವು: ಚಿಕ್ಕಮಗಳೂರಿನಲ್ಲಿ ಸಾಲು ಸಾಲು ಗುಡ್ಡ ಕುಸಿತ, ಹೆಚ್ಚಾದ ಆತಂಕ
ಜಿಯೋಲಾಜಿಕಲ್ ಸರ್ವೆ ತಂಡ ಪರಿಶೀಲನೆ ಮೂಲಕ ಮಲೆನಾಡು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆಯಿಂದ ಸಂಭವಿಸುತ್ತಿರುವ ಸಾಲು ಸಾಲು ಅನಾಹುತ, ಭೂ ಕುಸಿತ, ಗುಡ್ಡ ಕುಸಿತಕ್ಕೆ ನಿಖರವಾದ ಕಾರಣ ತಿಳಿಯಲು ಸರ್ಕಾರ ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.