ತಮಿಳು ತೆರಿಯಾದು: ಆದರೂ ‘ವೋಟ್’ಗಾಗಿ ಬಟ್ಲರ್ ತಮಿಳಿನಲ್ಲಿ ರೇಣುಕಾಚಾರ್ಯರ ಮಾತುಕತೆ ನೋಡಿ!
ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಗ್ರಾಮದಲ್ಲಿ ತಮಿಳು ಮತದಾರರ ಓಲೈಕೆಗಾಗಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಬಟ್ಲರ್ ತಮಿಳು ಮಾತನಾಡಲು ಮುಂದಾದ ಸಂಗತಿ ಬೆಳಕಿಗೆ ಬಂದಿದೆ. ಚಿನ್ನಿಕಟ್ಟೆಯ ತಮಿಳು ಕಾಲೋನಿಯ ನಿವಾಸಿಗಳೊಂದಿಗೆ ತಮಿಳಿನಲ್ಲಿ ಮಾತುಕತೆ ನಡೆಸಲು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪಟ್ಟ ಪಾಡು ಅಷ್ಟಿಷ್ಟಲ್ಲ!
ದಾವಣಗೆರೆ: ಡಿ.27 ರಂದು ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯ 2ನೇ ಹಂತದ ಅಂಗವಾಗಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಶಾಸಕರು ಹಾಗೂ ಸಚಿವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಇತ್ತ, ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಗ್ರಾಮದಲ್ಲಿ ತಮಿಳು ಮತದಾರರ ಓಲೈಕೆಗಾಗಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಬಟ್ಲರ್ ತಮಿಳು ಮಾತನಾಡಲು ಮುಂದಾದ ಸಂಗತಿ ಬೆಳಕಿಗೆ ಬಂದಿದೆ. ಚಿನ್ನಿಕಟ್ಟೆಯ ತಮಿಳು ಕಾಲೋನಿಯ ನಿವಾಸಿಗಳೊಂದಿಗೆ ತಮಿಳಿನಲ್ಲಿ ಮಾತುಕತೆ ನಡೆಸಲು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪಟ್ಟ ಪಾಡು ಅಷ್ಟಿಷ್ಟಲ್ಲ!
ಹೌದು, ತಮಿಳು ಬಾರದಿದ್ದರೂ ಅರ್ಧಂಬರ್ಧ ಮಾತನಾಡಿದ ಶಾಸಕ ಮತದಾರರ ಓಲೈಕೆಗೆ ಮುಂದಾದರು. ವಿಪರ್ಯಾಸವೆಂದರೆ ಸ್ಥಳೀಯರು ಕನ್ನಡದಲ್ಲಿ ಮಾತಾಡಿದರೂ ರೇಣುಕಾಚಾರ್ಯ ತಮಿಳಿನಲ್ಲೇ ಮಾತನಾಡಲು ಮುಂದುವರಿಸಿದರು. ತಮಿಳರಿಗೆ ಜಾತಿಪ್ರಮಾಣ ಪತ್ರ ಕೊಡಿಸಬೇಕೆಂದು ಮನವಿ ಮಾಡಿದ ಸ್ಥಳೀಯರ ಜೊತೆ ಆರಂಭದಲ್ಲಿ ತಮಿಳು ಮಾತನಾಡಿ ಮುಜುಗರಕ್ಕೀಡಾದ ಶಾಸಕ ನಂತರ ಕನ್ನಡದಲ್ಲಿ ಮಾತಾಡಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ಕೊಟ್ಟರು.
ಲೋಕಲ್ ‘ದಂಗಲ್’ನಿಂದ ಕೊಂಚ ಬ್ರೇಕ್ ಪಡೆದು.. ಕುಸ್ತಿ ಪಂದ್ಯಾವಳಿಗೆ ಚಾಲನೆ ಕೊಟ್ಟ ಹೊನ್ನಾಳಿ ಶಾಸಕ M.P.ರೇಣುಕಾಚಾರ್ಯ