ಕಂಬಳದಲ್ಲಿ ಯುವತಿಯ ಮೇಲೆ ಕಾರು ಹರಿಸಿ ಎಳೆದೊಯ್ದ ಚಾಲಕ: CCTVಯಲ್ಲಿ ಸೆರೆ

ದಕ್ಷಿಣ ಕನ್ನಡ: ಮಂಗಳೂರು ನಗರದ ಕದ್ರಿ ಕಂಬಳದಲ್ಲಿ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಯುವತಿ ಕಾರಿನಡಿ ಸಿಲುಕಿದ ಭೀಕರ ಘಟನೆ ನಡೆದಿದೆ. ಅಪಘಾತದ ಭೀಕರತೆ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿಗೆ ಕಾರು ಡಿಕ್ಕಿ ಹೊಡೆದು, ಕಾರಿನ ಅಡಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಆದರೆ, ಕಾರ್​ ನಿಲ್ಲಿಸಲು ಚಾಲಕ ತಡಮಾಡಿದ್ದರಿಂದ ಯುವತಿ ಮೇಲೆಯೇ ಕಾರು ಹರಿದು ಮಾರುದ್ದ ಎಳೆದೊಯ್ದಿದೆ. ಕೂಡಲೇ ಸ್ಥಳೀಯರು ಮತ್ತು ಪೊಲೀಸ್‌ ಸಿಬಂದಿಗಳು ಕಾರನ್ನು ಮೇಲಕ್ಕೆತ್ತಿ ಅಡಿಗೆ ಬಿದ್ದಿದ್ದ ಯುವತಿಯನ್ನು ಹೊರಗಡೆ ತೆಗೆದಿದ್ದಾರೆ.ಯುವತಿಯ […]

ಕಂಬಳದಲ್ಲಿ ಯುವತಿಯ ಮೇಲೆ ಕಾರು ಹರಿಸಿ ಎಳೆದೊಯ್ದ ಚಾಲಕ: CCTVಯಲ್ಲಿ ಸೆರೆ
Updated By: ಸಾಧು ಶ್ರೀನಾಥ್​

Updated on: Aug 08, 2020 | 12:33 PM

ದಕ್ಷಿಣ ಕನ್ನಡ: ಮಂಗಳೂರು ನಗರದ ಕದ್ರಿ ಕಂಬಳದಲ್ಲಿ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಯುವತಿ ಕಾರಿನಡಿ ಸಿಲುಕಿದ ಭೀಕರ ಘಟನೆ ನಡೆದಿದೆ. ಅಪಘಾತದ ಭೀಕರತೆ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿಗೆ ಕಾರು ಡಿಕ್ಕಿ ಹೊಡೆದು, ಕಾರಿನ ಅಡಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಆದರೆ, ಕಾರ್​ ನಿಲ್ಲಿಸಲು ಚಾಲಕ ತಡಮಾಡಿದ್ದರಿಂದ ಯುವತಿ ಮೇಲೆಯೇ ಕಾರು ಹರಿದು ಮಾರುದ್ದ ಎಳೆದೊಯ್ದಿದೆ.

ಕೂಡಲೇ ಸ್ಥಳೀಯರು ಮತ್ತು ಪೊಲೀಸ್‌ ಸಿಬಂದಿಗಳು ಕಾರನ್ನು ಮೇಲಕ್ಕೆತ್ತಿ ಅಡಿಗೆ ಬಿದ್ದಿದ್ದ ಯುವತಿಯನ್ನು ಹೊರಗಡೆ ತೆಗೆದಿದ್ದಾರೆ.ಯುವತಿಯ ತಲೆಗೆ ಮತ್ತು ಪಕ್ಕೆಲುಬುಗಳಿಗೇ ತೀವ್ರ ಗಾಯಗಳಾಗಿದೆ.

ಇದೇ ಮಾರ್ಗವಾಗಿ ಬರುತ್ತಿದ್ದ ಶಾಸಕ ಯು.ಟಿ ಖಾದರ್ ಕೂಡಲೇ‌ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ತಮ್ಮ ಕಾರಿನಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ  ಮೆರೆದಿದ್ದಾರೆ.

ಯುವತಿ ಕಾರಿನಡಿಗೆ ಬಿದ್ದರೂ ಕಾರನ್ನು ಚಲಾಯಿಸಿದ ಕಾರು ಚಾಲಕನ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು ಕಾರು ಚಾಲಕನ ವಿರುದ್ಧ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.