‘ತಂದೆ ಕೊಡ್ಸಿದ ಲಾರಿಯಿಂದ ವ್ಯಾಪಾರ ಆರಂಭಿಸಿದೆ, ಕೋಟಿ ಕೋಟಿಗೂ ಟ್ಯಾಕ್ಸ್ ಕಟ್ಟಿದ್ದೇನೆ’

|

Updated on: Nov 20, 2019 | 9:43 AM

ಹೊಸಕೋಟೆ: ‘ನಾನು ಸುಳ್ಳು ಹೇಳಿಲ್ಲ, ರಾಜಕೀಯದಲ್ಲಿ ಹಣ ಮಾಡಿಲ್ಲ’ ನನಗೆ ಕೊಟ್ಟಿರುವ ಹಣವನ್ನು ದೇಗುಲಗಳಿಗೆ ನೀಡಿದ್ದೇನೆ ಎಂದು ಇಟ್ಟಸಂದ್ರ ಗ್ರಾಮದಲ್ಲಿ ಉಪಚುನಾವಣೆಯ ಪ್ರಚಾರದ ವೇಳೆ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪ್ರಚಾರದ ವೇಳೆ, ನಮ್ಮ ತಂದೆ 1971ರಲ್ಲಿ 11 ಸಾವಿರಕ್ಕೆ ಒಂದು ಲಾರಿ ಕೊಡಿಸಿದ, ಆ ಲಾರಿಗೆ ಮಂಜುನಾಥ ಸ್ವಾಮಿ ಅಂತ ಹೆಸರಿಟ್ಟು ವ್ಯಾಪಾರ ಆರಂಭಿಸಿದೆ. ವ್ಯಾಪಾರ ಮಾಡಿ ನಾನು ಇಷ್ಟೊಂದು ಆದಾಯ ಗಳಿಸಿದ್ದೇನೆ. ನಾನು ಕಷ್ಟಾಪಟ್ಟು ದುಡಿದಿದ್ದೀನಿ ದೇವರು […]

ತಂದೆ ಕೊಡ್ಸಿದ ಲಾರಿಯಿಂದ ವ್ಯಾಪಾರ ಆರಂಭಿಸಿದೆ, ಕೋಟಿ ಕೋಟಿಗೂ ಟ್ಯಾಕ್ಸ್ ಕಟ್ಟಿದ್ದೇನೆ
Follow us on

ಹೊಸಕೋಟೆ: ‘ನಾನು ಸುಳ್ಳು ಹೇಳಿಲ್ಲ, ರಾಜಕೀಯದಲ್ಲಿ ಹಣ ಮಾಡಿಲ್ಲ’ ನನಗೆ ಕೊಟ್ಟಿರುವ ಹಣವನ್ನು ದೇಗುಲಗಳಿಗೆ ನೀಡಿದ್ದೇನೆ ಎಂದು ಇಟ್ಟಸಂದ್ರ ಗ್ರಾಮದಲ್ಲಿ ಉಪಚುನಾವಣೆಯ ಪ್ರಚಾರದ ವೇಳೆ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪ್ರಚಾರದ ವೇಳೆ, ನಮ್ಮ ತಂದೆ 1971ರಲ್ಲಿ 11 ಸಾವಿರಕ್ಕೆ ಒಂದು ಲಾರಿ ಕೊಡಿಸಿದ, ಆ ಲಾರಿಗೆ ಮಂಜುನಾಥ ಸ್ವಾಮಿ ಅಂತ ಹೆಸರಿಟ್ಟು ವ್ಯಾಪಾರ ಆರಂಭಿಸಿದೆ. ವ್ಯಾಪಾರ ಮಾಡಿ ನಾನು ಇಷ್ಟೊಂದು ಆದಾಯ ಗಳಿಸಿದ್ದೇನೆ. ನಾನು ಕಷ್ಟಾಪಟ್ಟು ದುಡಿದಿದ್ದೀನಿ ದೇವರು ನನಗೆ ಪ್ರತಿಫಲ ನೀಡಿದ್ದಾನೆ‌.

ಯಾರನ್ನು ಯಾಮಾರಿಸಿಲ್ಲ, ಸುಳ್ಳು ಹೇಳಿಲ್ಲ, ರಾಜಕೀಯದಲ್ಲಿ ದುಡ್ಡು ಮಾಡಿಲ್ಲ. ಯಾರಾದ್ರು ಕೊಟ್ಟ ಹಣವನ್ನ ಕ್ಷೇತ್ರದ ದೇವಸ್ಥಾಗಳ ಅಭಿವೃದ್ದಿಗೆ ಕೊಟ್ಟಿದ್ದೀನಿ. ಎಂಟಿಬಿ ನಾಗರಾಜ್​ಗೆ ಇನ್ನೂರು ಕೋಟಿ ಹೆಚ್ಚಳ ಹೇಗೆ ಬಂತು ಅಂತಾರೆ. ಟಿವಿಯವರು ಎಂಟಿಬಿ ನಾಗರಾಜ್ ಸಾವಿರ ಕೋಟಿ ಸರದಾರ ಅಂತ ತೋರಿಸುತ್ತಾರೆ‌. ನಾನು ಎಷ್ಟೇ ಕೋಟಿ ಸರದಾರನಾದ್ರು ಕಟ್ಟಬೇಕಾದ ಟ್ಯಾಕ್ಸ್ ಕಾಲ ಕಾಲಕ್ಕೆ ಕಟ್ಟಿದ್ದೀನಿ ಎಂದು ಇಟ್ಟಸಂದ್ರದಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ.

Published On - 9:34 am, Wed, 20 November 19