ಜ್ಯೂಸ್ನಲ್ಲಿ ಮತ್ತು ಬೆರೆಸಿ ವಿವಾಹಿತೆ ಅತ್ಯಾಚಾರ, ನಂಬಿ ಮೋಸ ಮಾಡಿದ ಪೋಲಿ ಪೊಲೀಸಪ್ಪ
ಚಿತ್ರದುರ್ಗ: ಪೊಲೀಸರೆಂದ್ರೆ ನೊಂದವರ ನೆರವಿಗೆ ನಿಲ್ತಾರೆ, ಅನ್ಯಾಯ ವಿರುದ್ಧ ಹೋರಾಡ್ತಾರೆ.. ವಂಚಕರನ್ನ ಹೆಡೆಮುರಿ ಕಟ್ತಾರೆ.. ಸಮಾಜಮುಖಿ ಕೆಲಸದ ಪರ ಇರ್ತಾರೆ ಅಂತಾ ನಾವೆಲ್ಲಾ ಅನ್ಕೊಂಡಿದ್ದೀವಿ. ಆದ್ರೆ ಆಲ್ಲೊಬ್ಬ ಪೊಲೀಸ್ ಒಳ್ಳೆ ಕೆಲಸ ಮಾಡಿದ್ದಾನೋ ಇಲ್ವೋ ಗೊತ್ತಿಲ್ಲ. ಆದ್ರೆ ಒಬ್ಳು ಮಹಿಳೆಯನ್ನ ಪೀಡಿಸಿ ಪೋಲಿ ಪೊಲೀಸಪ್ಪನಾಗಿದ್ದಾನೆ. ವಂಚಿಸಿದ ಪೊಲೀಸಪ್ಪನ ವಿರುದ್ಧ ಆರೋಪದ ಹೊಳೆ: ಚಿತ್ರದುರ್ಗ ನಗರದ ಡಿಎಆರ್ ಪೇದೆಯೊಬ್ಬನ ವಿರುದ್ಧ ನೊಂದ ಮಹಿಳೆ ಗುಡುಗಿದ್ದಾಳೆ. ಅತ್ಯಾಚಾರ ಎಸಗಿ, ಕೊಟ್ಟ ಹಣ ಕೊಡದೆ ವಂಚಿಸಿದ್ದಾನೆ ಅಂತಾ ಆರೋಪಿಸಿದ್ದಾಳೆ. ಆರೋಪಿ ಪೇದೆ […]
ಚಿತ್ರದುರ್ಗ: ಪೊಲೀಸರೆಂದ್ರೆ ನೊಂದವರ ನೆರವಿಗೆ ನಿಲ್ತಾರೆ, ಅನ್ಯಾಯ ವಿರುದ್ಧ ಹೋರಾಡ್ತಾರೆ.. ವಂಚಕರನ್ನ ಹೆಡೆಮುರಿ ಕಟ್ತಾರೆ.. ಸಮಾಜಮುಖಿ ಕೆಲಸದ ಪರ ಇರ್ತಾರೆ ಅಂತಾ ನಾವೆಲ್ಲಾ ಅನ್ಕೊಂಡಿದ್ದೀವಿ. ಆದ್ರೆ ಆಲ್ಲೊಬ್ಬ ಪೊಲೀಸ್ ಒಳ್ಳೆ ಕೆಲಸ ಮಾಡಿದ್ದಾನೋ ಇಲ್ವೋ ಗೊತ್ತಿಲ್ಲ. ಆದ್ರೆ ಒಬ್ಳು ಮಹಿಳೆಯನ್ನ ಪೀಡಿಸಿ ಪೋಲಿ ಪೊಲೀಸಪ್ಪನಾಗಿದ್ದಾನೆ.
ವಂಚಿಸಿದ ಪೊಲೀಸಪ್ಪನ ವಿರುದ್ಧ ಆರೋಪದ ಹೊಳೆ: ಚಿತ್ರದುರ್ಗ ನಗರದ ಡಿಎಆರ್ ಪೇದೆಯೊಬ್ಬನ ವಿರುದ್ಧ ನೊಂದ ಮಹಿಳೆ ಗುಡುಗಿದ್ದಾಳೆ. ಅತ್ಯಾಚಾರ ಎಸಗಿ, ಕೊಟ್ಟ ಹಣ ಕೊಡದೆ ವಂಚಿಸಿದ್ದಾನೆ ಅಂತಾ ಆರೋಪಿಸಿದ್ದಾಳೆ. ಆರೋಪಿ ಪೇದೆ ರೇಣುಕಪ್ಪ ಮತ್ತು ನೊಂದ ಮಹಿಳೆ ಪತಿ ಚಿತ್ರದುರ್ಗ ಜಿಲ್ಲಾ ಸಶಸ್ತ್ರ್ತ ಪಡೆಯಲ್ಲಿ ಒಟ್ಟಿಗೆ ಕೆಲಸ ಮಾಡ್ತಿದ್ರು. ಪೊಲೀಸ್ ಕ್ವಾಟ್ರರ್ಸ್ನಲ್ಲಿ ವಾಸವಿದ್ದಾಗ ರೇಣುಕಪ್ಪ ಮಹಿಳೆಗೆ ಪರಿಚಿತನಾಗಿದ್ದಾನೆ.
ಬಳಿಕ ನಂಬಿಸಿ 8ಲಕ್ಷ ರೂ ಹಣ ಪಡೆದಿದ್ದಾನೆ ಅಂತಾ ಮಹಿಳೆ ಹೇಳಿದ್ದಾರೆ. ನಂತರ ಹಣ ಕೊಡ್ತೀನಿ ಅಂತಾ ಮನೆಗೆ ಕರೆಸಿಕೊಂಡು ಜ್ಯೂಸ್ನಲ್ಲಿ ಮತ್ತು ಬರುವ ಔಷಧಿ ಹಾಕಿ ಅತ್ಯಾಚಾರವೆಸಗಿ ವಿಡಿಯೋ ಮಾಡಿದ್ದಾನಂತೆ. ಸದ್ಯ ವಿಡಿಯೋ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದು, ಇದ್ರಿಂದ ನನ್ನ ಪತಿ ದೂರವಾಗಿದ್ದಾರೆ. ನನಗೆ ನ್ಯಾಯ ಬೇಕು. ಇಲ್ಲಾಂದ್ರೆ ನನ್ನ ಆತ್ಮಹತ್ಯೆಗೆ ಪೊಲೀಸ್ ಇಲಾಖೆ ಕಾರಣವಾಗುತ್ತೆ ಅಂತಾ ಮಹಿಳೆ ಅಲವತ್ತುಕೊಂಡಿದ್ದಾರೆ.
2019ಜೂನ್ 3 ರಂದು ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಆದ್ರೆ, ಮತ್ತೊಬ್ಬ ಪೇದೆ ತಿಪ್ಪೇಸ್ವಾಮಿ ಎಂಬಾತ ಲಂಚ ಪಡೆದು ಆರೋಪಿ ರೇಣುಕಪ್ಪನನ್ನು ರಕ್ಷಿಸ್ತಿದ್ದಾರೆ. ನನ್ನಿಂದ ಸಮರ್ಪಕ ಹೇಳಿಕೆ ಪಡೆದಿಲ್ಲ ಅಂತಾ ಮಹಿಳೆ ಆರೋಪಿಸಿದ್ದಾರೆ. ಸದ್ಯ ಪೊಲೀಸರು ಕೇಸ್ನ ಚಾರ್ಜ್ ಶೀಟ್ ಸಲ್ಲಿಸಿದ್ದು, ಮಹಿಳೆ ಮರು ಹೇಳಿಕೆಯನ್ನ ಕೋರ್ಟ್ನಲ್ಲೇ ಹೇಳಲು ಅವಕಾಶವಿದೆ. ಇನ್ನು ಜಿಲ್ಲಾ ಎಸ್ಪಿ ಪರಿಶೀಲಿಸಿ ಕ್ರಮ ಕೈಗೊಳ್ತೀವಿ ಅಂದಿದ್ದಾರೆ.
ಪೋಲಿ ಪೊಲೀಸ್ ರೇಣುಕಪ್ಪನ ವಿರುದ್ಧ ಮತ್ತೋರ್ವ ಪೇದೆ ಪತ್ನಿ ವಂಚನೆ ಮತ್ತು ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ. ಆದ್ರೆ, ಪ್ರಕರಣದ ಬಗ್ಗೆ ಸಮರ್ಪಕ ತನಿಖೆ ನಡೆದಿಲ್ಲ ಅನ್ನೋ ಆರೋಪ ಕೇಳಿಬಂದಿದೆ.
Published On - 8:04 am, Wed, 20 November 19